Tax Notice 2024: ಜಾರಿಗೆ ಬಂತು ಇನ್ನೊಂದು ತೆರಿಗೆ ನಿಯಮ, ಈ 5 ವ್ಯವಹಾರ ಮಾಡಿದರೆ ಮನೆಗೆ ಬರಲಿದೆ ಟ್ಯಾಕ್ಸ್ ನೋಟೀಸ್
ಈ 5 ನಗದು ವ್ಯವಹಾರ ಮಾಡಿದರೆ ನಿಮ್ಮ ಮನೆಗೆ ಬರಲಿದೆ ಟ್ಯಾಕ್ಸ್ ನೋಟೀಸ್
Tax Notice For These 5 Transaction: ತೆರಿಗೆ ಇಲಾಖೆಯು ತೆರಿಗೆದಾರನಿಗೆ ಅವರ ತೆರಿಗೆ ಖಾತೆಯಲ್ಲಿನ ಸಮಸ್ಯೆಯಲ್ಲಿನ ಬಗ್ಗೆ ತಿಳಿಸಲು ಆದಾಯ ತೆರಿಗೆ ನೋಟಿಸ್ ಅನ್ನು ನೀಡುತ್ತದೆ. ಇನ್ನು ದೊಡ್ಡ ರೀತಿಯ ನಗದು ವಹಿವಾಟುಗಳಿಗೆ ಆದಾಯ ಇಲಾಖೆ ನೋಟಿಸ್ ನೀಡುತ್ತದೆ. ಯಾವುದೇ ರೀತಿಯ ಡಿಜಿಟಲ್ ವಹಿವಾಟು ಅಥವಾ ನಗದು ವಹಿವಾಟು ಮಾಡಿದರು ಕೂಡ ಆದಾಯ ಇಲಾಖೆಗೆ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದರೆ ತೆರಿಗೆ ಇಲಾಖೆಯು Tax Notice ನೀಡುತ್ತದೆ. ನೀವು ಆದಾಯ ತೆರಿಗೆ ಸಲ್ಲಿಕೆಯಲ್ಲಿ ಈ ಎಲ್ಲ ಆದಾಯಗಳಿಗೆ ತೆರಿಗೆ ಪಾವತಿ ಮಾಡದಿದ್ದರೆ ಆದಾಯ ಇಲಾಖೆಯು ನಿಮ್ಮ ಮನೆಗೆ ತೆರಿಗೆ ನೋಟಿಸ್ ಅನ್ನು ಕಳುಹಿಸುತ್ತದೆ.
ಈ 5 ನಗದು ವ್ಯವಹಾರ ಮಾಡಿದರೆ ನಿಮ್ಮ ಮನೆಗೆ ಬರಲಿದೆ ಟ್ಯಾಕ್ಸ್ ನೋಟೀಸ್
•ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡುವುದು
ಒಂದು ವರ್ಷದಲ್ಲಿ ನೀವು ಎಫ್ ಡಿಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.
•FD ಯಲ್ಲಿ ಹಣ ಠೇವಣಿ ಇಡುವುದು
ಒಂದು ಹಣಕಾಸು ವರ್ಷದಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಒಂದಕ್ಕಿಂತ ಹೆಚ್ಚು ಬಾರಿ ಠೇವಣಿ ಮಾಡಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ. ಇನ್ನು ಚಾಲ್ತಿ ಕತೆಯಲ್ಲಿ ಗರಿಷ್ಠ ಮಿತಿ 50 ಲಕ್ಷ ರೂ. ಆಗಿದೆ.
•ಕ್ರೆಡಿಟ್ ಕಾರ್ಡ್ ಬಿಲ್
ಇನ್ನು 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕ್ರೆಡಿಟ್ ಕಾರ್ಡ್ ಬಿಲ್ ಆಗಿ ಠೇವಣಿ ಮಾಡಿದರೆ ಹಾಗೂ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸಿದರೆ ಆದಾಯ ಇಲಾಖೆ ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲು ನೋಟಿಸ್ ನೀಡುತ್ತದೆ.
•ಆಸ್ತಿಯ ವಹಿವಾಟು
ನೀವು 30 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ನಗದು ರೂಪದಲ್ಲಿ ಖರೀದಿಸಿದರೆ ಅಥವಾ ಮಾರಾಟ ಮಾಡಿದರೆ, ಆಸ್ತಿ ರಿಜಿಸ್ಟ್ರಾರ್ ಪರವಾಗಿ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಹೋಗುತ್ತದೆ.
•ಷೇರುಗಳು, ಮ್ಯೂಚುವಲ್ ಫಂಡ್ ಸೇರಿದಂತೆ ಇನ್ನಿತರ ಬಂದ್ ಗಳನ್ನೂ ಖರೀದಿಸುವುದು
ಷೇರುಗಳು, ಮ್ಯೂಚುವಲ್ ಫಂಡ್‌ಗಳು, ಡಿಬೆಂಚರ್‌ಗಳು ಮತ್ತು ಬಾಂಡ್‌ಗಳಲ್ಲಿ ದೊಡ್ಡ ನಗದು ವಹಿವಾಟುಗಳನ್ನು ನಡೆಸುವಂತಿಲ್ಲ. ಆರ್ಥಿಕ ವರ್ಷದಲ್ಲಿ ಗರಿಷ್ಟ 10 ಲಕ್ಷದ ವರೆಗೆ ಮಾತ್ರ ಠೇವಣಿ ಮಾಡಬಹುದಾಗಿದೆ.