Tax On Pension Income: ಪಿಂಚಣಿ ಹಣಕ್ಕೂ ಕಟ್ಟಬೇಕು ಇಷ್ಟು ತೆರಿಗೆ, ಪಿಂಚಣಿ ಪಡೆಯುವವರಿಗೆ ತೆರಿಗೆ ಇಲಾಖೆಯ ರೂಲ್ಸ್

ಯಾವ ವಿಧದ ಪಿಂಚಣಿಯ ಆದಾಯಕ್ಕೆ ತೆರಿಗೆ ಪಾವತಿಸಬೇಕು...?

Tax On Pension Income Update: ಪ್ರಸ್ತುತ 2023 -24 ರ ಹಣಕಾಸೂ ವರ್ಷ ಅಂತ್ಯಗೊಳ್ಳಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 31 2024 ರೊಳಗೆ ತೆರಿಗೆದಾರರು ತೆರಿಗೆ ಸಂಬಂಧಿತ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಅಗತ್ಯವಾಗಿದೆ. ಸದ್ಯ ತೆರಿಗೆ ಪಾವತಿದಾರರು ತೆರಿಗೆ ಸಲ್ಲಿಕೆಯ ಬ್ಯುಸಿ ಆಗಿದ್ದರೆ.

ಇನ್ನು ಮಾಸಿಕ ವೇತನ ಪಡೆಯುವವರು ತೆರಿಗೆ ಸಲ್ಲಿಸಲು ಆದಾಯ ಇಲಾಖೆಯು ನಿಯಮವನ್ನು ರೂಪಿಸಿದೆ. ಹಾಗೆಯೆ ಕೆಲಸದ ನಿವೃತ್ತಿಯ ನಂತರ ಪಡೆಯುವ ಪಿಂಚಣಿಗೂ ಕೂಡ ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ವಿಚಾರ ನಿಮಗೆ ತಿಳಿದಿದೆಯೇ…? ಹೌದು, ನಿವೃತ್ತಿಯ ಪಿಂಚಣಿ ಪಡೆಯುತ್ತಿದ್ದರು ನೀವು ITR ಸಲ್ಲಿಸುವುದು ಅಗತ್ಯ.

Tax On Pension Income Update
Image Credit: hdfcpension

ನಿವೃತ್ತಿಯ ನಂತರದ ಪಿಂಚಣಿಗೂ ITR ಸಲ್ಲಿಸುವುದು ಕಡ್ಡಾಯ
ಆದಾಯ ತೆರಿಗೆ ಇಲಾಖೆಯು ಪಿಂಚಣಿಯನ್ನು ಸಂಬಳದಿಂದ ಬರುವ ಆದಾಯ ಎಂದು ಪರಿಗಣಿಸುತ್ತದೆ. ಹೀಗಾಗಿ ತೆರಿಗೆ ವಿಧಿಸುತ್ತದೆ. ತೆರಿಗೆ ಉದ್ದೇಶಗಳಿಗಾಗಿ 60 ವರ್ಷ ಮತ್ತು ಮೇಲ್ಪಟ್ಟ ಮತ್ತು 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯನ್ನು ಹಿರಿಯ ನಾಗರಿಕ ಎಂದು ಪರಿಗಣಿಸಲಾಗುತ್ತದೆ. 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯನ್ನು ಸೂಪರ್ ಸೀನಿಯರ್ ಸಿಟಿಜನ್ ಎಂದು ಪರಿಗಣಿಸಲಾಗುತ್ತದೆ.

ಹಳೆಯ ತೆರಿಗೆ ಪದ್ಧತಿಯಲ್ಲಿ ವರ್ಷಕ್ಕೆ 3 ಲಕ್ಷ ರೂ. ಪಿಂಚಣಿ ಪಡೆಯುವ ಹಿರಿಯ ನಾಗರಿಕರಿಗೆ ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತಿತ್ತು. ಹೊಸ ತೆರಿಗೆ ವ್ಯವಸ್ಥೆಯಲ್ಲಿ, ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ.

Pension Income Updates
Image Credit: Cleartax

ಯಾವ ವಿಧದ ಪಿಂಚಣಿಯ ಆದಾಯಕ್ಕೆ ತೆರಿಗೆ ಪಾವತಿಸಬೇಕು…?
•ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಪಡೆದ ಪಿಂಚಣಿ
ಆದಾಯ ತೆರಿಗೆ ರಿಟರ್ನ್ಸ್‌ನ ‘ಸಂಬಳ’ ವರ್ಗದ ಅಡಿಯಲ್ಲಿ ಇದನ್ನು ಪೂರ್ಣವಾಗಿ ತೆರಿಗೆ ವಿಧಿಸಲಾಗುತ್ತದೆ.

Join Nadunudi News WhatsApp Group

•ಮೃತ ಸರ್ಕಾರಿ ನೌಕರನ ವಾರಸುದಾರರಿಗೆ ಪಿಂಚಣಿ
ITR ನಲ್ಲಿ ಇತರ ಮೂಲಗಳಿಂದ ಆದಾಯ ವಿಭಾಗದ ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ಸ್ಲ್ಯಾಬ್ ದರವನ್ನು ಆಧರಿಸಿ ಎಷ್ಟು ತೆರಿಗೆ ಪಾವತಿಸಬೇಕು ಎಂದು ಲೆಕ್ಕ ಹಾಕಲಾಗುತ್ತದೆ.

•ಖಾಸಗಿ ವಲಯದ ಪಿಂಚಣಿ
ಖಾಸಗಿ ಕಂಪನಿಗಳಿಂದ ಪಡೆದ ಪಿಂಚಣಿಯನ್ನು ಐಟಿಆರ್‌ ನಲ್ಲಿ ವೇತನದಿಂದ ಆದಾಯ ಶೀರ್ಷಿಕೆಯಡಿ ನಮೂದಿಸಬೇಕು. ಉದ್ಯೋಗದಾತರು ಪಿಂಚಣಿ ಆದಾಯದಿಂದ TDS ಅನ್ನು ಕಡಿತಗೊಳಿಸುತ್ತಾರೆ.

Tax On Pension Income
Image Credit: Free Press Journal

Join Nadunudi News WhatsApp Group