Ads By Google

Taxi Fare: Ola, Uber ಮತ್ತು ಟ್ಯಾಕ್ಸಿ ಪ್ರಯಾಣ ಮಾಡುವವರಿಗೆ ಹೊಸ ರೂಲ್ಸ್, ಇನ್ಮುಂದೆ ಈ ದರ ಕಡ್ಡಾಯ

taxi fare hike in india

Image Credit: Original Source

Ads By Google

Taxi Fare Rule: ಜನಸಾಮಾನ್ಯರು ಹೆಚ್ಚಾಗಿ ಓಲಾ, ಊಬರ್, ಟ್ಯಾಕ್ಸಿಗಳನ್ನು ಬಳಸುತ್ತಾರೆ. ಸದ್ಯ ಜನರು ಪ್ರಯಾಣ ಮಾಡಲು ಓಲಾ, ಊಬರ್, ಟ್ಯಾಕ್ಸಿಗಳಿಗೆ ಹೆಚ್ಚಿನ ಹಣವನ್ನು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಥಳಕ್ಕೆ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಳ್ಳುತ್ತಿದ್ದರೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದನ್ನೆಲ್ಲಾ ಗಮನಿಸಿದ ಕರ್ನಾಟಕ ಸರ್ಕಾರ ಇದೀಗ ರಾಜ್ಯದಾದ್ಯಂತ ಓಲಾ, ಊಬರ್, ಸೇರಿದಂತೆ ಎಲ್ಲ ಮಾದರಿಯ ಟ್ಯಾಕ್ಸಿಗಳಿಗೆ ಏಕ ರೂಪದ ಪ್ರಯಾಣ ದರವನ್ನು ಆದೇಶಿಸಿದೆ.

Image Credit: Moneycontrol

ಎಲ್ಲ ಮಾದರಿಯ ಟ್ಯಾಕ್ಸಿಗಳಿಗೆ ಏಕ ರೂಪದ ಪ್ರಯಾಣ ದರ ನಿಗದಿಪಡಿಸಿದ ಸರ್ಕಾರ
ಪ್ರಸ್ತುತ ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಓಲಾ, ಉಬರ್ ಸೇರಿದಂತೆ ಎಲ್ಲಾ ರೀತಿಯ ಟ್ಯಾಕ್ಸಿಗಳಿಗೆ ಏಕರೂಪದ ಪ್ರಯಾಣ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಾಹನದ ಮೌಲ್ಯದ ಪ್ರಕಾರ ಪ್ರತಿ 1 ಕಿ.ಮೀಗೆ ತಲಾ 24 ರೂ. ದರ ನಿಗದಿಯಾಗಿದೆ.

ಏಕರೂಪದ ದರವನ್ನು ನಿಗದಿಪಡಿಸುವ ಕ್ರಮವನ್ನು ಓಲಾ ಉಬರ್ ಅಸೋಸಿಯೇಷನ್ ​​ಸ್ವಾಗತಿಸಿದೆ. ಓಲಾ, ಊಬರ್ ಸೇರಿದಂತೆ ಇನ್ನಿತರ ಕಂಪನಿಗಳು ವಿವಿಧ ದರವನ್ನು ನಿಗದಿ ಮಾಡಿರುವ ಕಾರಣ ಎಚ್ಚೆತ್ತುಕೊಂಡ ಸರ್ಕಾರ ರಾಜ್ಯದಾದ್ಯಂತ ಒಂದೇ ಮಾದರಿಯ ದರವನ್ನು ನಿಗದಿ ಮಾಡಲು ಆದೇಶಿಸಿದೆ. ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿರುವ ದರವನ್ನು ಮಾತ್ರ ಪ್ರಯಾಣಿಕರಿಂದ ವಸೂಲಿ ಮಾಡಬೇಕಿದೆ.

Image Credit: Auto-gas.net

ವಾಹನಗಳ ಮಾದರಿಗೆ ಅನುಗುಣವಾಗಿ ದರ ನಿಗದಿಯಾಗಲಿದೆ
•10 ಲಕ್ಷಕ್ಕಿಂತ ಕಡಿಮೆ ಬೆಲೆಯ ವಾಹನಗಳಿಗೆ, ಮೊದಲ 4 ಕಿ.ಮೀಗೆ 100 ರೂ., ಹಾಗೆಯೆ ನಂತರ ಪ್ರತಿ ಕಿ. ಮೀಗೆ 24 ರೂ. ನಿಗದಿಪಡಿಸಲಾಗಿದೆ.

•10 ರಿಂದ 15 ಲಕ್ಷ ರೂ. ಮೌಲ್ಯದ ವಾಹನಗಳಿಗೆ, ಆರಂಭಿಕ 4 ಕಿ.ಮೀಗೆ 115 ರೂ., ನಂತರ ಪ್ರತಿ ಕಿ.ಮೀ.ಗೆ 28 ​​ರೂ. ನಿಗದಿಪಡಿಸಲಾಗಿದೆ.

•15 ಲಕ್ಷಕ್ಕೂ ಹೆಚ್ಚು ಮೌಲ್ಯದ ವಾಹನಗಳಿಗೆ, ಮೊದಲ 4 ಕಿ.ಮೀ.ಗೆ 130 ರೂ., ನಂತರ ಪ್ರತಿ ಕಿ.ಮೀ.ಗೆ 32 ರೂ. ನಿಗದಿಪಡಿಸಲಾಗಿದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in