Ads By Google

TCS Rule: ಮಕ್ಕಳ ಪೋಷಕರಿಗೆ ಕೇಂದ್ರದಿಂದ ಹೊಸ ರೂಲ್ಸ್, ಮಕ್ಕಳಿಗೆ ಇದಕ್ಕಿಂತ ಹೆಚ್ಚು ಹಣ ಕೊಡುವಂತಿಲ್ಲ.

The central government brought changes in the TCS rules

Image Credit: lokmat

Ads By Google

TCS New Rule: ಕೇಂದ್ರ ಸರ್ಕಾರ ಇತ್ತೀಚಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ. ಸರ್ಕಾರ ತೆರಿಗೆ ಸಂಬಂಧಿತ ಅನೇಕ ನಿಯಮಗಳನ್ನು ಬದಲಾಯಿಸಿದೆ. ಇದೀಗ ಕೇಂದ್ರ ಸರ್ಕಾರ ಟಿಸಿಎಸ್ (TCS ) ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಮಾಡಿದೆ.

ಮಕ್ಕಳ ಪೋಷಕರಿಗೆ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೊಳಿಸಿದ್ದು ಪೋಷಕರು ಈ ನಿಯಮವನ್ನು ಪಾಲಿಸುವುದು ಕಡ್ಡಾಯವಾಗಿದೆ. ವಿದೇಶದಲ್ಲಿ ನಿಮ್ಮ ಮಗ ಅಥವಾ ಮಗಳು ಅಧ್ಯಯನ ಮಾಡುತ್ತಿದ್ದರೆ ಈ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Image Credit: Outlookindia

ಟಿಸಿಎಸ್ ನಿಯಮದಲ್ಲಿ ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ
ವಿದೇಶದಲ್ಲಿ ಅಧ್ಯಯನ ಮಾಡುತ್ತಿರುವ ನಿಮ್ಮ ಮಗ ಅಥವಾ ಮಗಳಿಗೆ ನೀವು ಹಣವನ್ನು ಕಳುಹಿಸುತ್ತಿದ್ದಾರೆ ಅಥವಾ ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಗ ಅಥವಾ ಮಗಳನ್ನು ವಿದೇಶಕ್ಕೆ ಕಳುಹಿಸಲು ಯೋಜನೆ ಮಾಡಿದ್ದರೆ ಕೇಂದ್ರ ಸರ್ಕಾರದ ಟಿಸಿಎಸ್ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಮೂಲದಲ್ಲಿಯೇ ಸಂಗ್ರಹಿಸಲಾದ ತೆರಿಗೆ ದರವು ವಿದೇಶದಲ್ಲಿ ಮಾಡಿದ ಶಿಕ್ಷಣ ವೆಚ್ಚಗಳಿಗೆ ಅನ್ವಯಿಸುವುದಿಲ್ಲ. ಆದರೂ ಮೂಲ ತೆರಿಗೆ ಸಂಗ್ರಹ ದರದ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು.

ಇನ್ನುಮುಂದೆ ವಿದೇಶದಲ್ಲಿರುವ ಮಕ್ಕಳಿಗೆ ಇಷ್ಟು ಹಣ ಮಾತ್ರ ಕಳುಹಿಸಬಹುದು
ವಿದೇಶಕ್ಕೆ ಕಳುಹಿಸುವ ಹಣದ ಮೇಲೆ ಎಷ್ಟು ಪ್ರಮಾಣದಲ್ಲಿ ಟಿಸಿಎಸ್ ಅನ್ವಯವಾಗುತ್ತದೆ ಎನ್ನುವ ಬಗ್ಗೆ ಸಾಕಷ್ಟು ಜನರು ಗೊಂದಲದಲ್ಲಿರುತ್ತಾರೆ. ಇದೀಗ ಹಣಕಾಸು ಸಚಿವೆಯ ಟಿಸಿಎಸ್ ಬಗ್ಗೆ ಸ್ಪಷ್ಟನೆ ನೀಡಿದೆ. ಉನ್ನತ ಶಿಕ್ಷಣಕ್ಕಾಗಿ ನಿಮ್ಮ ಮಕ್ಕಳು ವಿದೇಶದಲ್ಲಿದ್ದರೆ ನೀವು ನಿಮ್ಮ ಮಕ್ಕಳಿಗೆ 7 ಲಕ್ಷ ರೂ. ಗಿಂತ ಹೆಚ್ಛಿನ ಹಣವನ್ನು ಕಳುಹಿಸುವಂತಿಲ್ಲ. 7 ಲಕ್ಷ ರೂ. ಗಿಂತ ಹೆಚ್ಛಿನ ಹಣವನ್ನು ರವಾನಿಸಿದೆ ಅಥವಾ ಆ ಹಣವನ್ನು ಸಾಲದ ಮೂಲಕ ಪಡೆಯದಿದ್ದರೆ ಶೇ. 5 ರಷ್ಟು ಟಿಸಿಎಸ್ ಪಾವತಿಸಬೇಕಾಗುತ್ತದೆ.

Image Credit: Thehindubusinessline

ಅಕ್ಟೊಬರ್ 1 ರಿಂದ ಹೊಸ TCS ದರ ಜಾರಿ
ಇನ್ನು ಟಿಸಿಎಸ್ ಮೇಲಿನ ಹೆಚ್ಛಿನ ದರಗಳು ಅಕ್ಟೊಬರ್ 1 ರಿಂದ ಜಾರಿಯಾಗಲಿದೆ. LRS ಅಡಿಯಲ್ಲಿ ಹಣವನ್ನು ಕಳುಹಿಸಲು ಪೋಷಕರು ಅಥವಾ ಹಣ ಕಳುಹಿಸುವವರು ಫಾರ್ಮ್ ಎ2 ಮಾರು ಎಲ್ ಆರ್ ಎಸ್ ಘೋಷಣೆ ಮಾಡಿದ ಫಾರ್ಮ್ ಅನ್ನು ಬ್ಯಾಂಕ್ ಗೆ ಸಲ್ಲಿಸಬೇಕು.

ಒಂದು ವೇಳೆ ಸಾಲ ಪಡೆದು ಹಣ ರವಾನೆ ಮಾಡಿ, ಶೇ. 0.5ರಷ್ಟು ಕಡಿಮೆ ಟಿಸಿಎಸ್‌ ಪಡೆಯಬೇಕಾದರೆ ವಿದ್ಯಾರ್ಥಿ ಹೆಸರು ಮತ್ತು ಸಹ-ಸಾಲಗಾರರಾಗಿರುವ ಪೋಷಕರೊಂದಿಗೆ ಶಿಕ್ಷಣ ಸಾಲ ಮಂಜೂರಾತಿ ಪತ್ರ ಸಲ್ಲಿಸಬೇಕು. ಮೂಲ ಸಾಲದಿಂದ ಹಣ ಕ್ರೋಡೀಕರಿಸಿರುವುದಾಗಿ ಎಲ್ ಆರ್ ಎಸ್ ಅರ್ಜಿಯ ಮೇಲೆ ಗ್ರಾಹಕರ ಘೋಷಣೆ ಇರಬೇಕು. ಉದಾರೀಕೃತ ರವಾನೆ ಯೋಜನೆಯ ಅಡಿಯಲ್ಲಿ ಶಿಕ್ಷಣ ಸಂಬಂಧಿತ ವೆಚ್ಚಗಳಿಗೆ ಪೋಷಕರು ಟಿಸಿಎಸ್ ವ್ಯಾಪ್ತಿಗೆ ಒಳಪಡದೆ 7 ಲಕ್ಷ ರೂ. ವರೆಗೆ ಹಣ ಕಳುಹಿಸಬಹುದು ಮತ್ತು ಈ ಮಿತಿಯನ್ನು ದಾಟುವಂತಿಲ್ಲ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in