Rohit Sharma: ಭಾರತ ತಂಡದ ನಾಯಕ ರೋಹಿತ್ ಶರ್ಮ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ…? ಶ್ರೀಮಂತ ನಾಯಕ.
ಭಾರತದ ತಂಡದ ಯಶಸ್ವಿ ನಾಯಕ ರೋಹಿತ್ ಶರ್ಮ ಅವರ ಒಟ್ಟು ಆಸ್ತಿ ಮೌಲ್ಯ ಎಷ್ಟು...?
Team India Captain Rohit Sharma Net Worth: ರೋಹಿತ್ ಗುರುನಾಥ್ ಶರ್ಮಾ ಒಬ್ಬ ಭಾರತೀಯ ಅಂತರಾಷ್ಟ್ರೀಯ ಕ್ರಿಕೆಟಿಗ ಹಾಗೆ ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಸ್ತುತ ನಾಯಕ. ನಮ್ಮ ಭಾರತದ ಕ್ರಿಕೆಟ್ ತಂಡದಲ್ಲಿ ಬಹಳ ಉತ್ತಮ ಆಟಗಾರರಿದ್ದು ಅದರಲ್ಲಿ ಸದ್ಯ ಬಹಳ ಒಳ್ಳೆಯ ಪ್ರದರ್ಶನವನ್ನ ನೀಡುತ್ತಿರುವ ಆಟಗಾರ ಅಂದರೆ ಅದು ರೋಹಿತ್ ಶರ್ಮ ಎಂದು ಹೇಳಿದರೆ ತಪ್ಪಾಗಲ್ಲ.
ರೋಹಿತ್ ಶರ್ಮಾ (Rohit Sharma)ಅವರು ಅಪಾರ ಗಳಿಕೆ ಮಾಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ನಾವು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಒಟ್ಟು ಆಸ್ತಿಯ ಮೌಲ್ಯದ ಬಗ್ಗೆ ತಿಳಿದುಕೊಳ್ಳೋಣ.
ರೋಹಿತ್ ಶರ್ಮಾ ತಿಂಗಳ ಸಂಭಾವನೆ ಎಷ್ಟು..?
ರೋಹಿತ್ ಶರ್ಮಾ ಅವರ ಆದಾಯದ ಮೂಲ ಕ್ರಿಕೆಟ್ ಆಗಿದೆ, ಇದರ ಜೊತೆಗೆ ಇತರ ಮೂಲಗಳು ಇವೆ. ಇಲ್ಲಿಯವರೆಗೆ ರೋಹಿತ್ ಶರ್ಮಾ ಸುಮಾರು 214 ಕೋಟಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ವರದಿಯಾಗಿದೆ. ಈ ಲೆಕ್ಕಾಚಾರದ ಪ್ರಕಾರ ರೋಹಿತ್ ಶರ್ಮಾ ಪ್ರತಿ ತಿಂಗಳಿಗೆ 2 ಕೋಟಿಗೂ ಹೆಚ್ಚು ಸಂಪಾದನೆಯನ್ನು ಮಾಡುತ್ತಾರೆ ಎನ್ನುದು ಸ್ಪಷ್ಟವಾಗುತ್ತದೆ.
ರೋಹಿತ್ ಶರ್ಮಾ ವಾರ್ಷಿಕ ಸಂಭಾವನೆ ಎಷ್ಟು..?
Rohit Sharma ಪಂದ್ಯದ ವೈಶಿಷ್ಟ್ಯಗಳ ರೂಪದಲ್ಲಿ BCCI ಯಿಂದ ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳನ್ನು ಪಡೆಯುತ್ತಾರೆ. BCCI ರೋಹಿತ್ ಶರ್ಮಾ ಅವರನ್ನು A+ ಗ್ರೇಡ್ ವಿಭಾಗದಲ್ಲಿ ಇರಿಸಿದೆ. ಅಂದರೆ ಅವರನ್ನು ಉನ್ನತ ದರ್ಜೆಯ ಆಟಗಾರ ಎಂದು ಪರಿಗಣಿಸಲಾಗಿದೆ. BCCI ಪ್ರತಿ ವರ್ಷ ಅವರಿಗೆ 7 ಕೋಟಿ ರೂಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ, T20 ಪಂದ್ಯಕ್ಕೆ 3 ಲಕ್ಷ ಪಂದ್ಯ ಶುಲ್ಕವಾಗಿ ನೀಡಲಾಗುತ್ತದೆ.
ಇದಲ್ಲದೆ ಟೆಸ್ಟ್ ಪಂದ್ಯಗಳನ್ನು ಆಡಲು ಪ್ರತಿ ಪಂದ್ಯಕ್ಕೆ 15 ಲಕ್ಷ ಶುಲ್ಕವನ್ನು ಪಡೆಯುತ್ತಾರೆ. ಜೊತೆಗೆ ಅವರ IPL ಫ್ರಾಂಚೈಸಿ ತಂಡ ಮುಂಬೈ ಇಂಡಿಯನ್ಸ್ ಕೂಡ ರೋಹಿತ್ ಶರ್ಮಾಗೆ ಪ್ರತಿ ವರ್ಷ 16 ಕೋಟಿ ರೂಪಾಯಿ ನೀಡುತ್ತದೆ. ಈ ಮೂಲಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಾರ್ಷಿಕವಾಗಿ ಸುಮಾರು 30 ಕೋಟಿ ಗಳಿಸುತ್ತಾರೆ.
ಜಾಹಿರಾತಿನ ಮೂಲಕ ರೋಹಿತ್ ಶರ್ಮಾ ಗಳಿಸುವ ಸಂಭಾವನೆ ಎಷ್ಟು..?
Rohit Sharma ಜಾಹಿರಾತಿನ ಮೂಲಕ ಕೂಡ ಸಾಕಷ್ಟು ಸಂಭಾವನೆಯನ್ನು ಪಡೆಯುತ್ತಾರೆ. ಪ್ರಸ್ತುತ ರೋಹಿತ್ ಶರ್ಮಾ ಅವರ ಬಳಿ 28 ಬ್ರಾಂಡ್ಗಳಿವೆ. ಅವುಗಳು Jio Cinema, Max Life Insurance, Goibibo, Seat Tire, Hublot, Usha, Oppo, Highlander ಅನ್ನುವ ಮುಂತಾದ ಹೆಸರುಗಳನ್ನು ಒಳಗೊಂಡಿದೆ. ರೋಹಿತ್ ಶರ್ಮಾ ಪ್ರತಿ ಜಾಹಿರಾತಿಗೆ ಸರಾಸರಿ 5 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ.