Rahul Dravid: ಟೀಮ್ ಇಂಡಿಯಾಗೆ ಹೊಸ ಕೋಚ್ ಆಯ್ಕೆ, ಕೋಚ್ ಸ್ಥಾನದಿಂದ ಹೊರಬಂದ ಕನ್ನಡಿಗ ರಾಹುಲ್ ದ್ರಾವಿಡ್.
ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಹೊರನೆಡೆಯುವ ಮುನ್ನ ಟೀಮ್ ಇಂಡಿಯಾ ಗೆ ಹೊಸ ಕೋಚ್ ಆಯ್ಕೆ.
Team India New Coach: ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡಿತ್ತು. ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ ತಂಡ ಸತತ ಐದನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿದೆ. ಇದೀಗ ಕ್ರಿಕೆಟ್ ಪ್ರಿಯರು ವಿಶ್ವಕಪ್ (World Cup) ಪಂದ್ಯದ ನಿರೀಕ್ಷೆಯಲ್ಲಿದ್ದಾರೆ. ಅಕ್ಟೊಬರ್ ಮತ್ತು ನವೆಂಬರ್ ನಲ್ಲಿ ವಿಶ್ವಕಪ್ 2023 ನಡೆಯಲಿದೆ. ಟೀಮ್ ಇಂಡಿಯಾ ವಿಶ್ವ ಕಪ್ 2023 ರ ಸಿದ್ಧತೆಯಲ್ಲಿದೆ.
ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್
ಭಾರತೀಯ ರಾಷ್ಟ್ರೀಯ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಅವರು ಪ್ರಸ್ತುತ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ವರ್ಷ ಅಕ್ಟೊಬರ್ ಮತ್ತು ನವೆಂಬರ್ 2023 ರಲ್ಲಿ ಭಾರತದ ನೆಲದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳಲಿದೆ.
ಟೀಮ್ ಇಂಡಿಯಾಗೆ ಹೊಸ ಕೋಚ್ ಆಯ್ಕೆ
ರಾಹುಲ್ ದ್ರಾವಿಡ್ ಅವರ ಬದಲಿಗೆ ಬರುವ ಹೊಸ ಕೋಚ್ ಬಗ್ಗೆ ಅಪ್ಡೇಟ್ ಲಭಿಸಿದೆ. ಬಿಸಿಸಿಐ ಈಗಾಗಲೇ ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ರಾಹುಲ್ ದ್ರಾವಿಡ್ ಕೋಚ್ ಸ್ಥಾನದಿಂದ ಹೊರನಡೆಯುವ ಮುನ್ನ ಬಿಸಿಸಿಐ ಅನುಭವಿ ಆಟಗಾರರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ. ಹೊಸ ಕೋಚ್ ಅನ್ನು ನೇಮಿಸುವ ಮೂಲಕ ಮುಂದಿನ ಪಂದ್ಯದ ತಯಾರಿ ನಡೆಸಿದೆ.
ಇನ್ನುಮುಂದೆ ಟೀಮ್ ಇಂಡಿಯಾ ಕೋಚ್ ವಿವಿಎಸ್ ಲಕ್ಷ್ಮಣ್
ರಾಹುಲ್ ದ್ರಾವಿಡ್ ಅವರ ಬದಲಾಗಿ ಟೀಮ್ ಇಂಡಿಯಾದ ಕೋಚ್ ಆಗಿ ಬಿಸಿಸಿಐ ವಿವಿಎಸ್ ಲಕ್ಷ್ಮಣ್ (VVS Laxman) ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ದದ ಕ್ರಿಕೆಟ್ ಸರಣಿ ಮುಗಿದ ತಕ್ಷಣ ಭಾರತವು ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಐರ್ಲೆನ್ಡ್ ಗೆ ಪ್ರವಾಸ ಮಾಡಬೇಕಾಗಿದೆ.
ಅಲ್ಲಿ ಮೂರು ಪಂದ್ಯಗಳ T20 ಸರಣಿಯನ್ನು ಆಡಬೇಕಾಗಿದೆ. ಈ ಸರಣಿಗೆ ಬಿಸಿಸಿಐ ವಿವಿಎಸ್ ಲಕ್ಷ್ಮಣ್ ಅವರನ್ನು ಟೀಮ್ ಇಂಡಿಯಾ ಕೋಚ್ ಆಗಿ ನೇಮಿಸಿಕೊಂಡಿದೆ. ಐರ್ಲೆನ್ಡ್ ವಿರುದ್ದದ ಟಿ20 ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಲಿದ್ದಾರೆ.