Team India: ಕೊನೆಯ 3 ಓವರ್ ನಲ್ಲಿ ಟೀಮ್ ಇಂಡಿಯಾ ಮಾಡಿದ ಪ್ಲ್ಯಾನ್ ಏನು ಗೊತ್ತಾ…? ಪಕ್ಕಾ ಗೇಮ್ ಪ್ಲ್ಯಾನ್

ಫೈನಲ್ ನ ಗೆಲುವಿಗಾಗಿ ಟೀಮ್ ಇಂಡಿಯಾ ಮಾಡಿದ ಪ್ಲಾನ್ ಏನು...?

Team India Plan For Winning Trophy: ಜೂನ್ 29 ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ ನಡೆದಿತ್ತು. ತಂಡದ ಎಲ್ಲ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಹಲವು ವರ್ಷದ ಬಳಿಕ T20 World Cup ನ ಗೆಲುವಿಗೆ ಕಾರಣರಾಗಿದ್ದಾರೆ. ಟೀಮ್ ಇಂಡಿಯಾದ ಗೆಲುವು ಇಡೀ ಭಾರತೀಯರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿದೆ ಎನ್ನಬಹುದು. ಟೀಮ್ ಇಂಡಿಯಾ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು ಎನ್ನುವಷ್ಟರಲ್ಲಿ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿತ್ತು.

ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಈ ಪಂದ್ಯದಲ್ಲಿ ಗೆಲ್ಲವು ನೆರವಾಗಿದ್ದು ಆ ಡೆತ್ ಓವರ್. ಯಾರು ಬೌಲಿಂಗ್ ಮಾಡಬೇಕು ಎಂಬ ಗೊಂದಲ ಸೃಷ್ಟಿಯಾಗಿತ್ತು. ಈ ವೇಳೆ ಟೀಂ ಇಂಡಿಯಾ ಮಾಡಿದ ಮಾಸ್ಟರ್ ಪ್ಲಾನ್ ವರ್ಕ್ ಔಟ್ ಆಗಿದೆ. ಅಷ್ಟಕ್ಕೂ ಟೀಮ್ ಇಂಡಿಯಾ ಕೊನೆಯ ಹಂತದಲ್ಲಿ ಗೆಲುವಿಗಾಗಿ ಯಾವ ರೀತಿ ಪ್ಲಾನ್ ಮಾಡಿತ್ತು ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Team India Plan For Winning Trophy
Image Credit: Indianexpress

ಫೈನಲ್ ಪಂದ್ಯದಲ್ಲಿ ಗೆಲ್ಲಲು ಕಾರಣವಾಯ್ತು ಆ ಕೊನೆಯ ಮೂರು ಓವರ್
ಇಂಡಿಯಾ ಮತ್ತು ಸೌತ್ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ18 ರನ್‌ ಗಳಿಗೆ 22 ರನ್‌ ಗಳ ಅಗತ್ಯವಿತ್ತು. ಅಂದು ದಕ್ಷಿಣ ಆಫ್ರಿಕಾ ತಂಡ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾಯಕ ರೋಹಿತ್ ಶರ್ಮಾ ಮಾಡಿದ ಒಂದು ಪ್ಲಾನ್ ಕೈ ಹಿಡಿಯಿತು. ಮೂರು ಓವರ್‌ ಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಇನ್ನೂ 22 ರನ್‌ ಗಳ ಅಗತ್ಯವಿತ್ತು. ಈ ಹಂತದಲ್ಲಿ ಜಸ್ಪ್ರೀತ್ ಬುಮ್ರಾ ಯಾವಾಗಲೂ ಓವರ್ ಬೌಲ್ ಮಾಡುತ್ತಿರಲಿಲ್ಲ. ಅದರಲ್ಲೂ ಇದು ಅವರ ಇನ್ನಿಂಗ್ಸ್‌ ನ ಕೊನೆಯ ಓವರ್‌. 18ನೇ ಓವರ್ ನಲ್ಲಿ ಅದ್ಭುತ ಬೌಲಿಂಗ್ ನಡೆಸಿದ ಜಸ್ಪ್ರೀತ್ ಬುಮ್ರಾ ಹೀರೋ ಆಗಿ ಮಿಂಚಿದರು. ಅಮೋಘ ಲೈನ್ ಹಾಗೂ ಲೆಂಥ್ ನಲ್ಲಿ ಬೌಲಿಂಗ್ ಮಾಡಿದ ಬುಮ್ರಾ ಅಬ್ಬರಿಸಿದರು. 18ನೇ ಓವರ್‌ ನಲ್ಲಿ ಕೇವಲ 2 ರನ್ ನೀಡಿ ವಿಕೆಟ್ ಪಡೆದರು.

India beat South Africa by 7 runs
Image Credit: Thehindubusinessline

ಫೈನಲ್ ನ ಗೆಲುವಿಗಾಗಿ ಟೀಮ್ ಇಂಡಿಯಾ ಮಾಡಿದ ಪ್ಲಾನ್ ಏನು…?
ಅನ್ ಅರ್ಥ್ ಡಾಕ್ಸ್ ಬೌಲಿಂಗ್ ಶೈಲಿ ಹೊಂದಿರುವ ಬುಮ್ರಾ ಅವರ ಬೌಲಿಂಗ್ ಕ್ರಮವನ್ನು ಎದುರಿಸಲು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ ಮನ್‌ ಗಳು ವಿಫಲರಾದರು. ಬುಮ್ರಾ ಅವರ ಆಕ್ರಮಣಕಾರಿ ದಾಳಿಗೆ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ ಮನ್‌ ಗಳು ರನ್ ಗಳಿಸಲು ಪರದಾಡಿದರು. ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರಿ ಎಂದು ಕರೆಯಲ್ಪಡುವ ಜಸ್ಪ್ರೀತ್ ಬುಮ್ರಾ ಅದ್ಭುತ ದಾಳಿ ಸಂಘಟಿಸಿದರು.

ಟೀಂ ಇಂಡಿಯಾಗೆ ಅಗತ್ಯವಿದ್ದಾಗ ಬೌಲಿಂಗ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಜಸ್ಪ್ರೀತ್ ಬುಮ್ರಾ, ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬುಮ್ರಾ ಅವರು ತಮ್ಮ ನಾಲ್ಕು ಓವರ್‌ ಗಳಲ್ಲಿ 18 ರನ್ ನೀಡಿ ಪ್ರಮುಖ ಎರಡು ವಿಕೆಟ್‌ ಗಳನ್ನು ಕಬಳಿಸಿ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ ಮನ್‌ ಗಳಿಗೆ ತೊಂದರೆ ನೀಡಿದರು. ಇನ್ನು ಬುಮ್ರಾ 18ನೇ ಓವರ್ ಬೌಲ್ ಮಾಡಬೇಕೋ ಅಥವಾ ಬೇರೆಯವರು ಬೌಲ್ ಮಾಡಬೇಕೋ ಎಂಬ ಒತ್ತಡದಲ್ಲಿ ಟೀಮ್ ಇಂಡಿಯಾ ಇತ್ತು. ನಂತರ ಟೀಂ ಇಂಡಿಯಾದ ಅನುಭವಿ ಆಟಗಾರರು ಮೈದಾನದಲ್ಲಿ ಮೀಟಿಂ ಮಾಡಿ ಈ ಪ್ಲಾನ್ ಮಾಡಿ ಕೊನೆಯಲ್ಲಿ ಯಶಸ್ಸು ಸಾಧಿಸಿದ್ದಾರೆ.

Join Nadunudi News WhatsApp Group

T20 World Cup final
Image Credit: Hindustantimes

Join Nadunudi News WhatsApp Group