Team India: ವಿಶ್ವಕಪ್ ತಂಡದಿಂದ ಹೊರಬಿದ್ದ ಮೂರೂ ಸ್ಟಾರ್ ಆಟಗಾರರು, ಮುಳುವಾಗಲಿದೆ ಈ ಆಟಗಾರರ ಗೈರು.
ಇದೀಗ ನಾವು ವಿಶ್ವ ಕಪ್ ತಂಡದಿಂದ ಹೊರಬಿದ್ದ ಮೂರೂ ಸ್ಟಾರ್ ಆಟಗಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
World Cup Team India Players: ಟೀಮ್ ಇಂಡಿಯಾ (Team India)ಭವಿಷ್ಯದ ತಂಡವನ್ನು ಕಟ್ಟುವ ಸಲುವಾಗಿ ಯುವ ಆಟಗಾರರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಮ್ಯಾನೆಜ್ಮೆಂಟ್ ಹಿರಿಯ ಆಟಗಾಗರಿಗೆ ವಿಶ್ರಾಂತಿ ನೀಡಿ ಪ್ಯೂಚರ್ ಟೀಮ್ ಕಟ್ಟುವ ಕನಸನ್ನು ಹೊಂದಿದ್ದಾರೆ.
ಆದರೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಮ್ಯಾನೆಜ್ಮೆಂಟ್ ನೀಡಿದ ಅವಕಾಶವನ್ನು ಯಂಗ್ ಪ್ಲೇಯರ್ಸ್ ಹಾಳುಮಾಡಿಕೊಂಡಿದ್ದಾರೆ. ಇದಲ್ಲದೆ ಅವರ ಪ್ರದರ್ಶನಗಳನ್ನು ನೋಡಿದರೆ ವಿಶ್ವಕಪ್ (World Cup) ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವೆನಿಸಿದೆ. ಇದೀಗ ನಾವು ವಿಶ್ವಕಪ್ ತಂಡದಿಂದ ಹೊರಬಿದ್ದ ಮೂರೂ ಸ್ಟಾರ್ ಆಟಗಾರರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ವಿಶ್ವಕಪ್ ತಂಡದಿಂದ ಹೊರಬಿದ್ದ ಮೂರೂ ಸ್ಟಾರ್ ಆಟಗಾರರು
ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಂಜು ಸ್ಯಾಮನ್ಸ್, ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್, ಹಾಗೂ ಮುಕೇಶ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿತ್ತು.
ಸಂಜು ಸ್ಯಾಮನ್ಸ್ (Sanju Samson)
ಅನುಭವಿ ಆಟಗಾರರಾದ ಕೆ ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಿದ್ದರಿಂದ ಸಂಜು ಸ್ಯಾಮನ್ಸ್ ವೆಸ್ಟ್ ಇಂಡೀಸ್ ವಿರುದ್ಧ ಆಡುವ ಅವಕಾಶವನ್ನು ಪಡೆದರು. ಆದರೆ ಇವರು ಉತ್ತಮ ಪ್ರದರ್ಶನವನ್ನು ನೀಡದೆ, ನಿರಾಸೆಯನ್ನು ಅನುಭವಿಸುತ್ತಾರೆ. ಸತತ ಸರಣಿಗಳಲ್ಲಿ ಕಾಯುತ್ತಿದ್ದ ಸಂಜು ಅವರು ಕೊನೆಗೆ ಬ್ಲೂ ಜೆರ್ಸಿಯಲ್ಲಿ ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮೈದಾನಕ್ಕೆ ಬರುವ ಮುಂಚೆ ಮಾಡಿಕೊಂಡಿದ್ದ ಯೋಜನೆಗಳೆಲ್ಲ ವಿಫಲವಾದವು.
ಸಂಜು ಸ್ಯಾಮನ್ಸ್ ಅವರು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ರನ್ ಬರವನ್ನು ಅನುಭವಿಸುತ್ತಾರೆ. ಸಂಜು ಅವರು ಒಟ್ಟು 7 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಒಟ್ಟು ರನ್ 92 ಆಗಿದೆ. ಎಕಾನಮಿ 18 .40 ಆಗಿದೆ. ಇದರಿಂದ ಆಯ್ಕೆದಾರರಿಗೆ ನಿರಾಸೆಯಾಗುತ್ತದೆ. ಕೆರಿಬಿಯನ್ ನಾಡಿನಲ್ಲಿ ಸಂಜು ಸ್ಯಾಮನ್ಸ್ ನೀಡಿದ ಪ್ರದರ್ಶನದಲ್ಲಿ ಸ್ಥಿರತೆ ಇಲ್ಲದಿರುದರಿಂದ ಇವರು ವಿಶ್ವಕಪ್ ತಂಡದಿಂದ ದೂರ ಉಳಿಯಬಹುದು ಎನ್ನಲಾಗುತ್ತಿದೆ.
ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ (Yuzvendra Chahal)
ಸ್ಪಿನ್ ಬೌಲರ್ ಯಜುವೇಂದ್ರ ಚಾಹಲ್ ಅವರನ್ನು ಟೀಮ್ ಇಂಡಿಯಾ ಸೀಮಿತ ಓವರ್ ಗಳಿಗೆ ಮಾತ್ರ ಬಳಸಿಕೊಳ್ಳುತಿತ್ತು. ಇವರು 5 ಟಿ20 ಪಂದ್ಯ ಗಳನ್ನೂ ಆಡಿದ್ದು, 5 ವಿಕೆಟ್ ಅನ್ನು ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ.
ಚಾಹಲ್ ಅವರ ಎಕಾನಮಿ 9.05 ಆಗಿದೆ. ಇವರು ಚಂಡನ್ನು ಎಸೆಯಲು ಹೆಣಗಾಡುತ್ತಾರೆ ಮತ್ತು ಕ್ಯಾಚ್ ಗಳನ್ನ ಡ್ರಾಪ್ ಮಾಡುತ್ತಾರೆ. ಇನ್ನು ಇವರ ಬ್ಯಾಟಿಂಗ್ ಯಿಂದ ಸಹ ಏನು ಉಪಯೋಗವಿಲ್ಲ. ಚಾಹಲ್ ಅವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದ್ದಾರೆ. ಹಾಗಾಗಿ ಇವರ ಸ್ಥಾನದ ಮೇಲು ಕೂಡ ತೂಗುಗತ್ತಿ ನೇತಾಡುತ್ತಿದ್ದೆ.
ಮುಕೇಶ್ ಕುಮಾರ್ (Mukesh Kumar)
ಐಪಿಎಲ್ ನಲ್ಲಿ ಬಿಗುವಿನ ದಾಳಿ ನೆಡೆಸಿ, ಆಯ್ಕೆದಾರರ ಮನ ಗೆದ್ದಿದ್ದ ಮುಕೇಶ್ ಕುಮಾರ್ ಅವರು ದೇಶಿಯ ಟೂರ್ನಿ ಗಳಲ್ಲೂ ಅಬ್ಬರಿಸಿದ್ದಾರೆ. ಇದರಿಂದಾಗಿ ಮುಕೇಶ್ ಅವರಿಗೆ ಟೀಮ್ ಇಂಡಿಯಾ ದಲ್ಲಿ ಸ್ಥಾನ ನೀಡಲಾಗಿತ್ತು.
ಇದಲ್ಲದೆ ಪ್ರವಾಸದ ವೇಳೆಗೆ ಮೂರೂ ಮಾದರಿಯ ಕ್ರಿಕೆಟ್ ಗೆ ಮುಕೇಶ್ ಅವರು ಪದಾರ್ಪಡೆ ಮಾಡಿದ್ದಾರೆ. ಟೆಸ್ಟ್, ಏಕದಿನ, ಟಿ20 ಮೂರೂ ಫಾರ್ ಮೇಟ್ ಗಳನ್ನೂ ಸೇರಿ 9 ಪಂದ್ಯಗಳನ್ನು ಆಡಿ, 9 ವಿಕೆಟ್ ಅನ್ನು ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ. ಈ ಅಂಶಗಳನ್ನು ನೋಡಿ ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎಂದು ಹೇಳಲಾಗುತ್ತಿದ್ದೆ.