Ads By Google

World Cup 2023: ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ದೊಡ್ಡ ಆಘಾತ, ಸ್ಟಾರ್ ಆಟಗಾರರು ತಂಡದಿಂದ ಹೊರಕ್ಕೆ.

Major players of Team India are out of the World Cup due to injuries

Image Credit: news18

Ads By Google

Team India World Cup: ಇತ್ತೀಚಿಗಷ್ಟೇ ಇಂಡಿಯನ್ ಪ್ರೀಮಿಯಂ ಲೀಗ್ 16 ನೇ ಆವೃತ್ತಿ ಮುಗಿದಿದ್ದು ಇದರಲ್ಲಿ ಚನೈ ಸೂಪರ್ ಕಿಂಗ್ಸ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ ಎರಡನೇ ಸ್ಥಾನವನ್ನು ಗುಜರಾತ್ ಟೈಟಾನ್ಸ್ ತಂಡ ಪಡೆದುಕೊಂಡಿದೆ.

ಇದೀಗ ವಿಶ್ವ ಕಪ್ ಸದ್ಯದಲ್ಲಿಯೇ ಆರಂಭವಾಗಲಿದೆ. ಇದೆ 2023 ಅಕ್ಟೋಬರ್ ನಿಂದ ವಿಶ್ವಕಪ್ ಪಂದ್ಯ ಆರಂಭವಾಗಲಿದ್ದು ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕ್ರಿಕೆಟ್ ಪ್ರಿಯರು ಸಹ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಕಾಯುತ್ತಿದ್ದಾರೆ.

Image Credit: Mykhel

ಟೀಮ್ ಇಂಡಿಯಾ ವಿಶ್ವಕಪ್ ಗೆ ಸ್ಟಾರ್ ಕ್ರಿಕೆಟಿಗನ ಕೊರತೆ
ಇನ್ನು ಈ ಬಾರಿಯ ವಿಶ್ವಕಪ್ ಪಂದ್ಯಕ್ಕೆ ಸ್ಟಾರ್ ಕ್ರಿಕೆಟಿಗರ ಕೊರತೆ ಇದೆ. ಬುಮ್ರಾ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಶೀಘ್ರದಲ್ಲೇ ಟೀಮ್ ಇಂಡಿಯಾಕ್ಕೆ ಬರುವ ಸಾಧ್ಯತೆ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿಶ್ವಕಪ್ ವೇಳೆಗೆ ಅವರಲ್ಲಿ ಒಬ್ಬರು ಚೇತರಿಸಿಕೊಳ್ಳುವ ಅವಕಾಶ ಕಡಿಮೆ ಎನ್ನಲಾಗುತ್ತಿದೆ.

ಸದ್ಯ ಟೀಮ್ ಇಂಡಿಯಾ 2023 ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆ ತಯಾರಿ ನಡೆಸುತ್ತಿದೆ. ಇದರ ಅನುಸಾರ ಐಸಿಸಿ ಸಹ ಈಗಾಗಲೇ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸದ್ಯ ಟೀಮ್ ಇಂಡಿಯಾದ ನಾಲ್ಕು ಪ್ರಮುಖ ಆಟಗಾರರು ಗಾಯಗೊಂಡಿದ್ದಾರೆ. ಇದರಲ್ಲಿ ರಿಷಬ್ ಪಂತ್ ಸಹ ಒಬ್ಬರು. ರಿಷಬ್ ಪಂತ್ ಈ ವರ್ಷ ಕ್ರಿಕೆಟ್ ಆಡುವುದು ಅನುಮಾನ ಆಗಿದೆ.

Image Credit: India

ಸದ್ಯದಲ್ಲಿಯೇ ಆರಂಭವಾಗಲಿದೆ ವಿಶ್ವಕಪ್
ಈ ವರ್ಷದ ಟೀಮ್ ಇಂಡಿಯಾಕ್ಕೆ ಬುಮ್ರಾ, ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಬರುವ ಸಾಧ್ಯತೆಯಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ವಿಶ್ವಕಪ್ ಸಮಯಕ್ಕೆ ಅವರಲ್ಲಿ ಒಬ್ಬರು ಚೇತರಿಸಿಕೊಳ್ಳುವ ಅವಕಾಶ ಕಡಿಮೆ ಎನ್ನಲಾಗುತ್ತಿದೆ. ವಿಶ್ವಕಪ್ ಗೆ ತಯಾರಿ ನಡೆಸುತ್ತಿರುವ ಟೀಮ್ ಇಂಡಿಯಾಗೆ ಶಾಕ್ ಸುದ್ದಿ ಸಿಕ್ಕಿದೆ. ಬೆನ್ನು ನೋವಿನಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿರುವ ಶ್ರೇಯಸ್ ಅಯ್ಯರ್ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in