Tecno Phantom V Fold: ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ, ಗ್ರಾಹಕರಿಗೆ ಖರೀದಿಸಲು ಉತ್ತಮ ಸಮಯ.

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ 12 gb RAM+256 gb ವೆರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Tecno Phantom V Fold Smartphone: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಹಲವು ಕಂಪನಿಯ ಸ್ಮಾರ್ಟ್ ಫೋನುಗಳು ಬಿಡುಗಡೆ ಆಗಿದೆ. ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಇದು ಸಿಹಿ ಸುದ್ದಿ ಆಗಿದೆ. ಬಜೆಟ್ ಬೆಲೆಯಲ್ಲಿ ಹಲವು ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸಿಕೊಟ್ಟಿರುವ ಸ್ಮಾರ್ಟ್ ಫೋನ್ ಟೆಕ್ನೋ ಸಂಸ್ಥೆಯು ಹೈ ಫೀಚರ್ಸ್ ಹೊಂದಿರುವ ಟೆಕ್ನೋ ಪ್ಯಾಂಟಮ್ V ಫೋಲ್ಡ್ (Tecno Phantom V Fold) ಫೋನ್ ಮೂಲಕ ಗಮನ ಸೆಳೆದಿದೆ. ಅಮೆಜಾನ್ ಆಯೋಜಿಸಿರುವ ಅಮೆಜಾನ್ ಗ್ರೇಟ್ ಸಮ್ಮರ್ ಸೆಲ್ ನಲ್ಲಿ ಈ ಸ್ಮಾರ್ಟ್ ಫೋನ್ ಭರ್ಜರಿ ಡಿಸ್ಕೌಂಟ್ ಪಡೆದಿದೆ.

Tecno Phantom V Fold Smartphone
Image Source: Digit

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಬೆಲೆ
ಈ ಸ್ಮಾರ್ಟ್ ಫೋನ್ ಆನ್ ಲೈನ್ ಅಲ್ಲಿ ಬಜೆಟ್ ಬೆಲೆಯಲ್ಲಿ ಖರೀದಿಗೆ ಸಿಗಲಿದೆ. ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಬೆಲೆಯೂ 109999 ರೂಪಾಯಿ ಆಗಿದ್ದು, ಕೊಡುಗೆಯಲ್ಲಿ ಈ ಫೋನ್ 88888 ರೂಪಾಯಿಗಳ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿದೆ. ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ 12 gb RAM+256 gb ವೆರಿಯಂಟ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ ಚಿಪ್ ಸೆಟ್ ಪ್ರೊಸೆಸರ್ ಪವರ್ ಪಡೆದಿದೆ.

Tecno Phantom V Fold Smartphone
Image Source: Gadgets360

ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ನ ವಿಶೇಷತೆ
ಟೆಕ್ನೋ ಫ್ಯಾಂಟಮ್ V ಫೋಲ್ಡ್ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, 50 ಮೆಗಾಪಿಕ್ಸೆಲ್ ಮತ್ತು 50 ಮೆಗಾಫೈಕ್ಸೆಲ್ 2 x ಪ್ರೊಟೆಟ್ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗೆಯೇ ಡಿವೈಸ್ ಅನ್ನು ಓಪನ್ ಮಾಡಿದಾಗ ಹೊರಗಿನ ಡಿಸ್ಪ್ಲೇ ನಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ 16 ಮೆಗಾಫೈಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.

Tecno Phantom V Fold Smartphone
Image Source: Digital trends

Join Nadunudi News WhatsApp Group

Join Nadunudi News WhatsApp Group