Election Promotion: ಮಹಿಳೆಯರಿಗೆ ಮಾಸಿಕ 2500 ರೂ. ಜೊತೆಗೆ 500 ರೂ. ಗೆ ಸಿಗಲಿದೆ ಗ್ಯಾಸ್, ಸರ್ಕಾರದ ಇನ್ನೊಂದು ಘೋಷಣೆ.

ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರದಿಂದ ಇನ್ನೊಂದು ಘೋಷಣೆ.

Election Guarantees In Telangana: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಉಚಿತ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ರಾಜ್ಯದಲ್ಲಿ ತನ್ನ್ನ ಅಧಿಕಾರವನ್ನು ಕಂಡುಕೊಂಡಿದೆ. ಸದ್ಯ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಘೋಷಿಸಿರುವ ಉಚಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಾಂಗ್ರೆಸ್ ಸರ್ಕಾರ ಬ್ಯುಸಿ ಆಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ನ ಉಚಿತ ಗ್ಯಾರಂಟಿಗಳಿಂದಾಗಿ ರಾಜ್ಯದ ಜನತೆ ಹೆಚ್ಚಿನ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದೀಗಾ ಕರ್ನಾಟಕದಲ್ಲಿ ಅಧಿಕಾರವನ್ನು ಪಡೆದುಕೊಂಡಿರುವ ಕಾಂಗ್ರೆಸ್ ಸರ್ಕಾರ ಈಗ ಮುಂದಿನ ಚುನಾವಣೆಯ ಕಾರಣ ಇನ್ನೊಂದು ಘೋಷಣೆಯನ್ನ ಮಾಡಿದ್ದು ಸದ್ಯ ಕಾಂಗ್ರೆಸ್ ಸರ್ಕಾರದ ಘೋಷಣೆಗೆ ಪರ ವಿರೋಧ ಕೂಡ ವ್ಯಕ್ತವಾಗಿದೆ ಎಂದು ಹೇಳಬಹುದು. ಮಹಿಳೆಯರಿಗಾಗಿ ಕಾಂಗ್ರೆಸ್ ಇನ್ನೊಂದು ಘೋಷಣೆಯನ್ನ ಮಾಡಿದ್ದು ಘೋಷಣೆಯ ಸಂಪೂರ್ಣ ವಿವರ ಇಲ್ಲಿದೆ.

Telangana Govt Scheme
Image Credit: Original Source

ರಾಜ್ಯದ ಮಹಿಳೆಯರಿಗಾಗಿ “ಮಹಾಲಕ್ಷ್ಮಿ ಯೋಜನೆ”
ಸದ್ಯ ತೆಲಂಗಾಣದಲ್ಲಿ ವಿಧಾಸಭಾ ಚುನಾವಣೆಯ ಸಿದ್ಧತೆ ಬರ್ಜರಿಯಾಗಿ ನಡೆಯುತ್ತಿದೆ ಎನ್ನಬಹುದು. ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಸರ್ಕಾರ ವಿವಿಧ ಆಮಿಷಗಳನ್ನು ಒಡ್ಡುತ್ತಿದೆ. ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ “ಮಹಾಲಕ್ಷ್ಮಿ ಯೋಜನೆ”ಯನ್ನು ಜಾರಿಗೊಳಿಸುವುದಾಗಿ ಘೋಷಿಸಿದೆ. ಈ ಯೋಜನೆಯಡಿ ರಾಜ್ಯದ ಮಹಿಳೆರಿಗೆ ಸಾಕಷ್ಟು ಅನುಕೂಲ ಸಿಗಲಿದೆ. ಇದೀಗ ಮಹಾಲಕ್ಷಿ ಯೋಜನೆಯ ಪ್ರಯೋಜನಗಳೇನು? ಎನ್ನುವುದರ ಬಗ್ಗೆ ವಿವರ ತಿಳಿಯೋಣ.

ಮಹಿಳೆಯರಿಗೆ ಮಾಸಿಕ 2500 ರೂ. ಜೊತೆಗೆ 500 ರೂ. ಗೆ ಸಿಗಲಿದೆ ಗ್ಯಾಸ್ ಸಿಲಿಂಡರ್
ಸಧ್ಯ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಮಾಸಿಕವಾಗಿ ಹಣ ನೀಡಲು ನಿರ್ಧರಿಸಿದೆ. ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2500 ರೂ. ಗಳನ್ನೂ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಬೆಲೆಯೂ ಏರಿಳಿತಗಳನ್ನು ಕಂಡಿರುವುದರಿಂದ ರಾಜ್ಯದ ಮಹಿಳೆಯರಿಗೆ 500 ರೂ. ಗಳಲ್ಲಿ Gas Cylinder ನೀಡಲು ಸರ್ಕಾರ ಚಿಂತನೆ ನಡೆಸಿದೆ.

Telangana Govt Scheme
Image Credit: Siasat

ಯುವತಿಯರ ವಿವಾಹಕ್ಕಾಗಿ 1 ಲಕ್ಷ ರೂ. ಹಾಗೂ 10 ಗ್ರಾಂ ಚಿನ್ನ
ಹಾಗೆಯೆ ತೆಲಂಗಾಣದಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ. RTC ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವುದಾಗಿ ಘೋಷಣೆ ಹೊರಡಿಸಿದೆ. ಇನ್ನು ಮಹಾಲಕ್ಷ್ಮಿ ಯೋಜನೆಯಡಿ ಹಿಂದುಳಿದ ಸಮುದಾಯದ ಮಹಿಳೆಯರಿಗೆ ವಿವಾಹವಾಗುವ ಸಮಯದಲ್ಲಿ 1 ಲಕ್ಷ ರೂ. ಹಾಗೂ 10 ಗ್ರಾಂ ಚಿನ್ನವನ್ನು ನೀಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಕಾಂಗ್ರೆಸ್ ನ ಈ ಯೋಜನೆಯ ಅನುಷ್ಠಾನಕ್ಕಾಗಿ 250 ಕೋಟಿ ರೂ. ಅಗತ್ಯವಿದೆ.

Join Nadunudi News WhatsApp Group

Join Nadunudi News WhatsApp Group