Govt Schemes: ಗ್ರಹಲಕ್ಷ್ಮಿಗೂ ಮೊದಲು ಕರ್ನಾಟಕ ಸರ್ಕಾರದ ಈ ಯೋಜನೆಗೆ ಹೆಸರು ಸೇರಿಸಿಕೊಳ್ಳಲು ಸೈಬರ್ ನಲ್ಲಿ ಸರತಿ ಸಾಲು.

ಮಹಿಳೆಯರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರದ ತಾಯಿ ಭಾಗ್ಯ ಯೋಜನೆ.

Government Schemes:  ಸದ್ಯ ರಾಜ್ಯಸರ್ಕಾರ ಕರ್ನಾಟಕದಲ್ಲಿ 5 ಗ್ಯಾರಂಟಿಯನ್ನು ನಿಜಗೊಳಿಸುವ ಪ್ರಯತ್ನದಲ್ಲಿ ಭರದಿಂದ ಸಾಗಿದೆ. ಎಲ್ಲಾ ಯೋಜನೆಗಳಿಗೆ ಮಹಿಳೆಯರು ಬಹಳ ಉತ್ಸುಕತೆಯಿಂದ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ. ಇದೀಗ ಹಲವು ಭಾಗ್ಯಗಳನ್ನು ಪಡೆಯುತ್ತಿರುವ ಮಹಿಳೆಯರಿಗೆ ಸದ್ಯ ಕರ್ನಾಟಕ ಸರ್ಕಾರ(Karnataka Government Schemes)  ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದೆ.

Thayi Bhagya Yojana benefits
Image Credit: Goodreturns

ತಾಯಿ ಭಾಗ್ಯ ಯೋಜನೆ( Karnataka Thayi Bhagya Scheme)
ಈ ತಾಯಿ ಭಾಗ್ಯ ಯೋಜನೆಯು 2009 ರಲ್ಲಿ ಆರಂಭವಾಗಿದೆ. ಇದು ಯೋಜನೆಯು ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗಾಗಿ ಇರಲಿದೆ. ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿಯಲ್ಲಿ ಗರ್ಭಿಣಿಯಾದಾಗಿನಿಂದ ಮಗು ಹೆತ್ತು ಕೆಲವು ಸಮಯದವರೆಗೂ ಸರ್ಕಾರವು ಉಚಿತ ಚಿಕಿತ್ಸೆ ಸೌಲಭ್ಯವನ್ನು ಒದಗಿಸುತ್ತದೆ. ಯಾವುದೇ ಸರ್ಕಾರೀ ಆಸ್ಪತ್ರೆಗಳಲ್ಲಿ ಅಥವಾ ನಿಗದಿತ ಖಾಸಗಿ ಮೆಡಿಕಲ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

ತಾಯಿ ಭಾಗ್ಯ ಯೋಜನೆ ಪ್ರಯೋಜನ
ಈ ಯೋಜನೆಯು ಪ್ರಮುಖವಾಗಿ ಬಡ ಮಹಿಳೆಯರಿಗೆ ಸಹಾಯ ಮಾಡಲಿದೆ. ಬಡ ವರ್ಗದ ಮಹಿಳೆಯರು ಉಚಿತವಾಗಿ ಉತ್ತಮ ಚಿಕಿತ್ಸೆಯನ್ನು ಪಡೆಯಲು ಸಹಾಯ ಮಾಡಲಿದೆ. ಎಲ್ಲಾ ಸರ್ಕಾರೀ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾದರೂ ಕೂಡ ಅನುಮೋದಿತ ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಉಚಿತ ಚಿಕಿತ್ಸೆ ಇರುತ್ತದೆ. ಆದ್ದರಿಂದ ನೀವು ಅಡ್ಮಿಟ್ ಆಗಲು ಬಯಸುವ ಆಸತ್ರೆಯಲ್ಲಿ ತಾಯಿ ಭಾಗ್ಯ ಇದೆಯೇ ಎಂದು ನೋಡಿಕೊಳ್ಳಬೇಕಾಗುತ್ತದೆ.

Thayi bhagya scheme latest news
Image Credit: Telugujobsnews

ಇನ್ನು ಈ ಯೋಜನೆಯಡಿಯಲ್ಲಿ ದಾಖಲಾತಿಯಿಂದ ಹಿಡಿದು ಡಿಸ್ಚಾರ್ಜ್ ವರೆಗೂ ಎಲ್ಲ ಚಿಕಿತ್ಸೆಯು ಉಚಿತವಾಗಿರುತ್ತದೆ. ಮೊದಲ ಎರಡು ಮಕ್ಕಳ ಹೆರಿಗೆ ವೇಳೆ ಮಾತ್ರ ಈ ಯೋಜನೆ ಪ್ರಯೋಜನ ಲಭ್ಯವಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರವು ಪ್ರತಿ ಡೆಲಿವರಿಗೆ 3000 ರೂಪಾಯಿ ಪಾವತಿಸುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ಡೆಲಿವರಿಗೆ 1500 ರೂಪಾಯಿ ಸರ್ಕಾರ ಪಾವತಿಸುತ್ತದೆ. ಎಲ್ಲ ರೀತಿಯ ಡೆಲಿವರಿಯು ಇದರಲ್ಲಿ ಒಳಗೊಳ್ಳುತ್ತದೆ.

ತಾಯಿ ಭಾಗ್ಯಕ್ಕೆ ಅರ್ಜಿ ಸಲ್ಲಿಸುವುದು ಹೇಗೆ
* ಆಶಾ ಕಾರ್ಯಕರ್ತರು ಅಥವಾ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯ ಮೂಲಕ ನಾವು ಕರ್ನಾಟಕ ತಾಯಿ ಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
* ಅರ್ಹ ಫಲಾನುಭವಿಗಳು ತಮ್ಮ ಆಶಾ ಕಾರ್ಯಕರ್ತರು ಅಥವಾ ತಮ್ಮ ಪ್ರದೇಶದ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯನ್ನು ತಾವಾಗಿಯೇ ಭೇಟಿ ಮಾಡಬೇಕಾಗುತ್ತದೆ.

Join Nadunudi News WhatsApp Group

Thayi bhagya scheme in karnataka
Image Credit: Vijaykarnataka

* ಆಶಾ ಕಾರ್ಯಕರ್ತರು ಅಥವಾ ಕಿರಿಯ ಮಹಿಳಾ ಆರೋಗ್ಯಾಧಿಕಾರಿಯನ್ನು ರಿಜಿಸ್ಟ್ರೇಷನ್ ಮಾಡಿಕೊಂಡು ಗರ್ಭಿಣಿಯರಿಗೆ ಎಎನ್‌ಸಿ ಕಾರ್ಡ್ ಅನ್ನು ನೀಡುತ್ತಾರೆ.
* ಈ ಎಎನ್‌ಸಿ ಕಾರ್ಡ್ ಅನ್ನು ತೋರಿಸಿ ನೀವು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group