Adah Sharma: ದಿ ಕೇರಳ ಸ್ಟೋರಿ ಸಕ್ಸಸ್ ಖುಷಿಯಲ್ಲಿದ್ದ ನಟಿ ಅದಾ ಶರ್ಮಾಗೆ ಅಪಘಾತ, ಆಸ್ಪತ್ರೆಯಲ್ಲಿ ನಟಿ.

ದಿ ಕೇರಳ ಸ್ಟೋರಿ ನಟಿ ಮತ್ತು ನಿರ್ದೇಶಕರಿಗೆ ಅಪಘಾತ ಆಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ.

Adah Sharma Accident: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದ್ದು ಭರ್ಜರಿ ಯಶಸ್ಸು ಗಳಿಸಿದೆ. ಕೋಟಿ ಕೋಟಿ ಹಣ ಗಳಿಸುವ ಮೂಲಕ ಸಿನಿಮಾ ಅನೇಕ ಚಿತ್ರಗಳ ದಾಖಲೆ ಮುರಿದಿದೆ.

ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ. ಆದರೆ ಚಿತ್ರದ ಯಶಸ್ಸಿನ ಸಂಭ್ರಮದ ನಡುವೆಯೇ ಇದೀಗ ಆಘಾತ ಉಂಟಾಗಿದೆ.

Actress Adah Sharma, who was enjoying the success of The Kerala Story, met with an accident
Image Credit: timesnownews

ದಿ ಕೇರಳ ಸ್ಟೋರಿ ಸಕ್ಸಸ್ ಖುಷಿಯಲ್ಲಿದ್ದ ನಟಿ ಆದಾ ಶರ್ಮಾಗೆ ಅಪಘಾತ
ದಿ ಕೇರಳ ಸ್ಟೋರಿ ಚಿತ್ರತಂಡ ಇದೀಗ ಚಿತ್ರದ ಯಶಸ್ಸಿನ ಸಂಭ್ರದಲ್ಲಿದ್ದಾರೆ. ಈ ವೇಳೆ ಚಿತ್ರದ ಯಶಸ್ಸಿನ ಸಂಭ್ರಮಕ್ಕೆ ಭಾಗಿಯಾಗಲು ಚಿತ್ರತಂಡ ಪ್ರಯಾಣ ನಡೆಸಿದೆ. ಪ್ರಯಾಣ ಮಾಡುತ್ತಿದ್ದ ಸಮಯದಲ್ಲಿ ಅಪಘಾತವಾಗಿದೆ.

ರಸ್ತೆ ಅಪಘಾತವಾಗಿ ಚಿತ್ರದ ನಿರ್ದೇಶಕರಾದ ಸುದೀಪ್ ಸೆನ್ ಹಾಗೂ ಚಿತ್ರದ ನಾಯಕಿ ಅದಾ ಶರ್ಮಾ (Adah Sharma) ಅಪಘಾತದಲ್ಲಿ ತೀವ್ರ ಗಾಯಾಗಳಾಗಿವೆ. ಗಾಯಕ್ಕೊಳಗಾದ ಇವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಟಿ ಹಾಗೂ ನಿರ್ದೇಶಕರು ಆಸ್ಪತ್ರೆಗೆ ದಾಖಲು
ರಸ್ತೆ ಅಪಘಾತದ ವೇಳೆ ನಟಿ ಹಾಗೂ ನಿರ್ದೇಶಕರಿಗೆ ತೀವ್ರ ಗಾಯಗಳಾಗಿವೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಬೈನ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಆರೋಗ್ಯದ ಸಮಸ್ಯೆಯಿಂದ ಕಾರ್ಯಕ್ರಮಕ್ಕೆ ಹೋಗಲು ಆಗಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ.

Join Nadunudi News WhatsApp Group

The heroine and director of The Kerala Story were unharmed in the accident.
Image Credit: gulte

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಅಪಘಾತದ ಬಗ್ಗೆ ವಿವಿಧ ರೀತಿಯಲ್ಲಿ ಸುದ್ದಿ ಹರಡುತ್ತಿದೆ. ಪೂರ್ವ ನಿಯೋಜಿತ ಅಪಘಾತ ಎನ್ನುವ ಸುದ್ದಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನು ನಿರ್ದೇಶಕರು ಗಾಬರಿ ಪಡುವಂತದ್ದು ಏನು ಇಲ್ಲ, ನಾವೆಲ್ಲರೂ ಚೆನ್ನಾಗಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ಹೇಳಿಕೆ ನೀಡಿದ್ದಾರೆ. ಅಪಘಾತಕ್ಕೊಳಗಾದವರು ಬೇಗ ಗುಣಮುಖವಾಗಲಿ ಎಂದು ಚಿತ್ರತಂಡ ಆಶಿಸುತ್ತಿದೆ.

Join Nadunudi News WhatsApp Group