The Kerala Story: ಎರಡು ವಾರದಲ್ಲಿ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ದಿ ಕೇರಳ ಸ್ಟೋರಿ, ದಾಖಲೆಯ ಕಲೆಕ್ಷನ್.
ಹಲವು ವಿವಾದಗಳ ನಡುವೆ ದಿ ಕೇರಳ ಸ್ಟೋರಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿದೆ.
The Kerala Story Movie Box Office Collection: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದೆ. ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಸಾಕಷ್ಟು ಜನರು ಈ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಸಿನಿಮಾ ವಿವಾದದ ಮದ್ಯೆ ಸಿಲುಕಿಕೊಂಡಿದ್ದರು ದಾಖಲೆಯ ಕಲೆಕ್ಷನ್ ಮಾಡಿದೆ. ದಿ ಕೇರಳ ಸ್ಟೋರಿ ಸಿನಿಮಾದ 15 ದಿನದ ಕಲೆಕ್ಷನ್ ಎಷ್ಟಾಗಿದೆ ಎಂಬ ಮಾಹಿತಿ ಈಗ ತಿಳಿದುಕೊಳ್ಳೋಣ.
ದಿ ಕೇರಳ ಸ್ಟೋರಿ ಸಿನಿಮಾದ 15 ದಿನದ ಕಲೆಕ್ಷನ್
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ ಐದು ದಿನದಲ್ಲಿ ಬರೋಬ್ಬರಿ 55 ರಿಂದ 60 ಕೋಟಿ ರೂಪಾಯಿ ಗಳಿಸಿತ್ತು. ಸಾಕಷ್ಟು ವಿವಾದದ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ 15 ದಿನಗಳವರೆಗೆ ಭರ್ಜರಿ ಕಲೆಕ್ಷನ್ ಮಾಡಿದೆ. ಇಲ್ಲಿಯವರಿಗೆ ಈ ಸಿನಿಮಾ ಒಟ್ಟು 171 ಕೋಟಿ ಕಲೆಕ್ಷನ್ ಮಾಡಿದೆ. ಇನ್ನು ಕೆಲವು ದಿನಗಳಲ್ಲಿ 200 ಕೋಟಿ ರೂಪಾಯಿ ಗಳಿಸುತ್ತದೆ ಎಂಬ ನಂಬಿಕೆಯು ಸಹ ಇದೆ.
ವಿವಾದಕ್ಕೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ
ಇನ್ನು ಹಲವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಸಾಕಷ್ಟು ಜನರು ಚಿತ್ರಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಕೂಡ ಘೋಷಣೆ ಮಾಡಿದ್ದು ಇದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ.