The Kerala Story: 7 ದಿನದಲ್ಲಿ ದಾಖಲೆಯ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ, ಹಲವು ದಾಖಲೆಗಳು ಧೂಳಿಪಟ.

7 ದಿನದಲ್ಲೋ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ ದಿ ಕೇರಳ ಸ್ಟೋರಿ.

The Kerala Story Box Office Collection: ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಈಗಾಗಲೇ ದೇಶಾದ್ಯಂತ ರಿಲೀಸ್ ಆಗಿದೆ. ಹಿಂದಿ, ತಮಿಳು, ಮಲಯಾಳಂ, ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು ಸಾಕಷ್ಟು ಜನರು ಈ ಸಿನಿಮಾ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಈ ಸಿನಿಮಾ ವಿವಾದದ ಮದ್ಯೆ ಸಿಲುಕಿಕೊಂಡಿದ್ದರು ದಾಖಲೆಯ ಕಲೆಕ್ಷನ್ ಮಾಡಿದೆ. ಇನ್ನು ಈ ಸಿನಿಮಾ ವಿವಾದದಿಂದ ಸಾಕಷ್ಟು ಚಿತ್ರಮಂದಿರದಲ್ಲಿ ರಿಲೀಸ್ ಆಗಿಲ್ಲ. ಆದರೂ ಸಹ ರಿಲೀಸ್ ಆಗಿದ್ದ ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

The Kerala Story Box Office
Image Source: Business Today

ವಿವಾದಕ್ಕೆ ಒಳಗಾದ ದಿ ಕೇರಳ ಸ್ಟೋರಿ ಸಿನಿಮಾ
ಇನ್ನು ಹಲವು ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ನಿಷೇಧದ ಭೀತಿ ಎದುರಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿತ್ರವನ್ನ ನೋಡಿದ ಸಾಕಷ್ಟು ಜನರು ಚಿತ್ರಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಹಲವು ರಾಜ್ಯಗಳು ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನ ಕೂಡ ಘೋಷಣೆ ಮಾಡಿದ್ದು ಇದು ಚಿತ್ರದ ಯಶಸ್ಸಿಗೆ ಕಾರಣವಾಗಿದೆ.

ದಿ ಕೇರಳ ಸ್ಟೋರಿ ಸಿನಿಮಾದ 7 ನೇ ದಿನದ ಕಲೆಕ್ಷನ್
ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ ಐದು ದಿನದಲ್ಲಿ ಬರೋಬ್ಬರಿ 55 ರಿಂದ 60 ಕೋಟಿ ರೂಪಾಯಿ ಗಳಿಸಿತ್ತು. ಸಾಕಷ್ಟು ವಿವಾದದ ನಡುವೆಯೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ರಿಲ್ಸ್ ಆಗಿ 7 ನೇ ದಿನಕ್ಕೆ 81 ಕೋಟಿ ಗಳಿಕೆ ಮಾಡಿದೆ. ಇನ್ನು ಈ ಸಿನಿಮಾ 10 ದಿನಕ್ಕೆ 100 ಕೋಟಿ ಗಳಿಕೆ ಮಾಡುವುದರಲ್ಲಿ ಸಂಶಯವೇ ಇಲ್ಲ ಎನ್ನಲಾಗುತ್ತಿದೆ .

The Kerala Story Box Office
Image Source: Business Today

ದಿ ಕೇರಳ ಸ್ಟೋರಿ ಸಿನಿಮಾ
ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಕೆಲವು ಸೂಕ್ಷ್ಮ ವಿಚಾರಗಳು ಇರುವುದರಿಂದ ಜನರು ಸಿನಿಮಾದ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಇರುವುದು ಸತ್ಯವೋ ಸುಳ್ಳೋ ಎಂದು ತಿಳಿದುಕೊಳ್ಳಲು ಜನರು ಕಾಯುತ್ತಿದ್ದಾರೆ. ಸದ್ಯ ಹಲವು ವಿವಾದಗಳ ನಡುವೆ ಕೂಡ ದಿ ಕೇರಳ ಸ್ಟೋರಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ. ಚಿತ್ರಕ್ಕೆ ಜನರು ಮೆಚ್ಚುವೆಯನ್ನ ವ್ಯಕ್ತಪಡಿಸಿದ ಕಾರಣ ದೇಶದಲ್ಲಿ ದಿ ಕೇರಳ ಸ್ಟೋರಿ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿದೆ.

Join Nadunudi News WhatsApp Group

The Kerala Story Box Office
Image Source: India Today

Join Nadunudi News WhatsApp Group