Rashmi Gautam Complaint: ನಟಿ ರಶ್ಮಿ ಮೇಲೆ ಅನೇಕ ಬಗೆಯ ಜೀವ ಬೆದರಿಕೆ, ದೂರು ನೀಡಲು ಮುಂದಾದ ನಟಿ.

Actress Rashmi Gautam Accusation: ತೆಲುಗು ಖ್ಯಾತಿಯ ಹೆಸರಾಂತ ನಿರೂಪಕಿ ಹಾಗು ನಟಿ ರಶ್ಮಿ ಗೌತಮ್ (Rashmi Goutam) ಸಂಕಷ್ಟಕ್ಕೆ ಸಿಲುಕಿದ್ದಾರೆ. ನಟಿ ರಶ್ಮಿ ಗೌತಮ್ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ಪೋಸ್ಟ್ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಇದ್ದಕ್ಕಿದ್ದಂತೆ ಈ ನಟಿ ಆಘಾತ ಮೂಡಿಸುವಂತಹ ಪೋಸ್ಟ್ ಒಂದನ್ನು ಹಾಕಿದ್ದಾರೆ. ಇಂತಹ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

The actress came forward to file a complaint against actress Rashmi, threatening her life.
Image Credit: instagram

ನಟಿ ರಶ್ಮಿ ಅವರಿಗೆ ಜೀವ ಬೆದರಿಕೆ
ತೆಲುಗು ಚಿತ್ರರಂಗದಲ್ಲಿ ನಟಿ ರಶ್ಮಿ ಅವರಿಗೆ ಸಾಕಷ್ಟು ಬೇಡಿಕೆಯಿದೆ. ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಎನ್ನುವ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಈ ನಟಿಯನ್ನು ಫಾಲೋ ಮಾಡುತ್ತಾರೆ. ಅದೇ ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಆಸಿಡ್ ಹಾಕುವ ಹಾಗು ಕಾರಿನಿಂದ ಗುದ್ದಿಸಿ ಸಾಯಿಸುವ ಕುರಿತು ವ್ಯಕ್ತಿಯೊಬ್ಬ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಅನ್ನು ಅವರು ಶೇರ್ ಮಾಡಿದ್ದಾರೆ.

Actress Rashmi Gautam is ready to file a complaint with the police because of the threat to her life
Image Credit: instagram

ನಟಿ ರಶ್ಮಿ ಮೇಲೆ ಆಸಿಡ್ ಹಾಕುವುದಾಗಿ ಬೆದರಿಕೆ
ಈ ಹಿಂದೆ ಕೆಲವರು ನನ್ನ ಬಗ್ಗೆ ಕಾಳಜಿ ತೋರುತ್ತಿದ್ದರು. ಬೇಗ ಮದುವೆ ಆಗು ಎನ್ನುತ್ತಿದ್ದರು. ಇದೀಗ ಆಸಿಡ್ ಹಾಕುವುದಾಗಿ ಹೇಳುತ್ತಿದ್ದಾರೆ. ಇಂಥವರಿಗೆ ಏನು ಮಾಡುವುದು ದೂರು ಕೊಡುವುದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಈ ರೀತಿಯ ಬೆದರಿಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಅಥವಾ ಸುಮ್ಮನೆ ಇದ್ದುಬಿಡಬೇಕು ಎನ್ನುವ ಗೊಂದಲವನ್ನು ಅವರು ವ್ಯಕ್ತ ಪಡಿಸಿದ್ದಾರೆ.

Join Nadunudi News WhatsApp Group

Actress Rashmi has expressed her frustration and threats to life on actress Rashmi Gautam
Image Credit: instagram

ಈ ರೀತಿಯಲ್ಲಿ ವ್ಯಕ್ತಿಗಳು ಕಮೆಂಟ್ ಮಾಡುವುದಕ್ಕೆ ಕಾರಣ ಏನು ಎನ್ನುವುದನ್ನು ಅವರೇ ಹೇಳಿಕೊಂಡಿದ್ದಾರೆ. ಕಮೆಂಟ್ ಮಾಡುವುದನ್ನು ಸ್ಕ್ರೀನ್ ಶಾಟ್ ತೆಗೆದು ಅವರು ಪೋಸ್ಟ್ ಮಾಡಿದ್ದಾರೆ. ಒಂದು ಪೋಸ್ಟ್ ನಲ್ಲಿ ನಿನಗೆ ವಯಸ್ಸಾಗುತ್ತಿದೆ, ಬೇಗ ಮದುವೆಯಾಗು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಿನ್ನ ಪಾಡಿಗೆ ನೀನು ಇರು. ಇಷ್ಟಬಂದಂತೆ ವರ್ತಿಸಬೇಡ ಎಂದಿದ್ದಾರೆ.

Join Nadunudi News WhatsApp Group