Court Marriage: ಕೋರ್ಟ್ ಮ್ಯಾರೇಜ್ ಆಗಲು ಇನ್ಮೇಲೆ ಈ ದಾಖಲೆಗಳು ಕಡ್ಡಾಯ.

ಕೋರ್ಟ್ ಮ್ಯಾರೇಜ್ ಬಗ್ಗೆ ಇನ್ನಷ್ಟು ಯೋಚನೆ ಮಾಹಿತಿಯನ್ನು ಪಡೆದುಕೊಳ್ಳೋಣ.

Court Marriage Rules: ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಅತ್ಯಂತ ಪ್ರಮುಖವಾದಂತಹ ಸ್ಥಾನವನ್ನು ಪಡೆದುಕೊಳ್ಳುವಂತಹ ಕ್ಷಣವಾಗಿದೆ. ಮದುವೆ ಎಷ್ಟು ಸಂತೋಷವನ್ನು ನೀಡುತ್ತದೆಯೋ ಅದೇ ರೀತಿಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೆ ಮದುವೆ ಆದಲ್ಲಿ ನಂತರ ಅದರಿಂದಾಗಿ ಪಶ್ಚಾತಾಪ ಪಡುವಂತಹ ಸಾಧ್ಯತೆ ಕೂಡ ಇದ್ದೇ ಇರುತ್ತದೆ.

ಅದರಲ್ಲೂ ವಿಶೇಷವಾಗಿ ಇವತ್ತಿನ ಆರ್ಟಿಕಲ್ ನಲ್ಲಿ ನಾವು ಮಾತನಾಡಲು ಹೊರಟಿರುವುದು ಕೋರ್ಟ್ ಮ್ಯಾರೇಜ್(Court Marriage) ಬಗ್ಗೆ. ಸಾಕಷ್ಟು ಜನರಿಗೆ ಕೋರ್ಟ್ ಮ್ಯಾರೇಜ್ ಸಂದರ್ಭದಲ್ಲಿ ಯಾವೆಲ್ಲ ದಾಖಲೆಗಳು ಬೇಕಾಗಿರುತ್ತದೆ ಎನ್ನುವಂತಹ ಮಾಹಿತಿ ಇರುವುದಿಲ್ಲ. ಹಾಗಿದ್ರೆ ಬನ್ನಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ಕೋರ್ಟ್ ಮ್ಯಾರೇಜ್ ಬಗ್ಗೆ ಇನ್ನಷ್ಟು ಯೋಚನೆ ಮಾಹಿತಿಯನ್ನು ಪಡೆದುಕೊಳ್ಳೋಣ.

Court Marriage
Image Source: Times Now

ಸಾಮಾನ್ಯವಾಗಿ ಕೋರ್ಟ್ ಮ್ಯಾರೇಜ್ ಗಳು ಹೆಚ್ಚಾಗಿ ನಡೆಯೋದು ಮನೆಯವರ ಒಪ್ಪಿಗೆ ಇಲ್ಲದೆ ಇದ್ದಾಗ ಹುಡುಗ ಹುಡುಗಿ ಪರಸ್ಪರ ಪ್ರೀತಿಸಿದ್ದರೆ ಆ ಸಂದರ್ಭದಲ್ಲಿ ಅವರು ಮದುವೆ ಆಗುವ ವಯಸ್ಸಿನ ಅರ್ಹತೆಯನ್ನು ಹೊಂದಿದ್ದರೆ ಖಂಡಿತವಾಗಿ ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ. ಕೋರ್ಟ್ ಮ್ಯಾರೇಜ್ ಮಾಡಿಕೊಳ್ಳುವ ಮೂಲಕ ಕಾನೂನಾತ್ಮಕವಾಗಿ ನೀವು ನಿಮ್ಮ ಮದುವೆ ಸಂಬಂಧವನ್ನು ದೃಢೀಕರಣ ಪಡಿಸಿ ಕೊಂಡಂತಾಗುತ್ತದೆ. ಕೆಲವೊಮ್ಮೆ ಮನೆಯವರ ಒಪ್ಪಿಗೆಯ ನಂತರವೂ ಕೂಡ ಕೋರ್ಟ್ ಮ್ಯಾರೇಜ್ ಮಾಡಿಸಿಕೊಳ್ಳುವವರು ಕೂಡ ಇದ್ದಾರೆ. ಯಾಕೆಂದರೆ ಕೋರ್ಟ್ ಮ್ಯಾರೇಜ್ ಎನ್ನುವುದು ನಿಮ್ಮ ಮದುವೆ ಸಂಬಂಧವನ್ನು ಅಧಿಕೃತಗೊಳಿಸುತ್ತದೆ ಎಂಬುದನ್ನು ನೀವು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬಹುದಾಗಿದೆ.

ಆದರೆ ಕೋರ್ಟ್ ಮ್ಯಾರೇಜ್ ಮಾಡಿಸಿಕೊಳ್ಳುವುದಕ್ಕೆ ಕೂಡ ಕೆಲವೊಂದು ರೀತಿಯಾದ ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಅದರಲ್ಲೂ ವಿಶೇಷವಾಗಿ ನಿಮ್ಮ ವಯಸ್ಸಿನ ದಾಖಲೆ ಹಾಗೂ ನಿಮ್ಮ ಸ್ಥಳದ ದಾಖಲೆಗಳನ್ನು ನೀಡುವಂತಹ ದಾಖಲೆ ಪತ್ರಗಳನ್ನು ನೀವು ಕೋರ್ಟ್ ನಲ್ಲಿ ಸಬ್ಮಿಟ್ ಮಾಡಬೇಕಾಗಿರುತ್ತದೆ.

Court Marriage
Image Source: Legal Service

ನಿಮ್ಮ ವಯಸ್ಸಿನ ದಾಖಲೆ ಪತ್ರದ ರೂಪದಲ್ಲಿ ನೀವು ಬರ್ತ್ ಸರ್ಟಿಫಿಕೇಟ್(Birth Certificate) ಹಾಗೂ 10ನೇ ತರಗತಿಯ ಮಾರ್ಕ್ ಶೀಟ್ ಅನ್ನು ಕೂಡ ಸಬ್ಮಿಟ್ ಮಾಡಬಹುದಾಗಿದೆ. ಇನ್ನು ನಿಮ್ಮ ವಿಳಾಸದ ದೃಢೀಕರಣ ರೂಪದಲ್ಲಿ ನೀವು ಆಧಾರ್ ಕಾರ್ಡ್(Aadhar Card) ಪಾಸ್ಪೋರ್ಟ್ ರೇಷನ್ ಕಾರ್ಡ್ ಹಾಗೂ ವೋಟರ್ ಐಡಿ ಕೂಡ ನೀಡಬಹುದಾಗಿದೆ. ಇವೆರಡು ದಾಖಲೆಗಳ ರೂಪದಲ್ಲಿ ನೀವು ಈ ಮೇಲೆ ತಿಳಿಸಿರುವಂತಹ ಯಾವುದೇ ಭಾರತ ಸರ್ಕಾರ ಪ್ರಮಾಣಿಕೃತ ದಾಖಲೆ ಪತ್ರಗಳನ್ನು ಕೂಡ ನೀಡಬಹುದಾಗಿದೆ.

Join Nadunudi News WhatsApp Group

ಒಂದು ವೇಳೆ ನೀವು ಎರಡನೇ ಮದುವೆಯನ್ನು ಕೋರ್ಟ್ ಮ್ಯಾರೇಜ್ ಮೂಲಕ ಆಗುತ್ತಿದ್ದರೆ ಆ ಸಂದರ್ಭದಲ್ಲಿ ನೀವು ಈಗಾಗಲೇ ಮೊದಲ ಪತಿ ಅಥವಾ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿರುವಂತಹ Divorce Decree ಅನು ಕೋರ್ಟ್ ಮ್ಯಾರೇಜ್ ಆಗುವ ಸಂದರ್ಭದಲ್ಲಿ ಸಬ್ಮಿಟ್ ಮಾಡಿದರೆ ಸಾಕು. ಈ ಮೂಲಕ ಎಲ್ಲಾ ದಾಖಲೆಗಳನ್ನು ನೀವು ಕೋರ್ಟ್ ಮ್ಯಾರೇಜ್ ಕಚೇರಿಯಲ್ಲಿ ದಾಖಲಿಸಿರುವ ಕಾರಣದಿಂದಾಗಿ ಯಾವುದೇ ತರಬಿಸಿ ಇಲ್ಲದೆ ಮದುವೆಯಾಗಬಹುದು. ಯಾಕೆಂದರೆ ಕಾನೂನಾತ್ಮಕವಾಗಿ ನೀವು ಮದುವೆಯಾಗುತ್ತಿರುವ ಕಾರಣದಿಂದಾಗಿ ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗಿರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಮದುವೆಗೆ ಯಾವುದೇ ತಕರಾರು ಕೂಡ ಎತ್ತುವ ಸಾಧ್ಯತೆ ಇರುವುದಿಲ್ಲ.

Join Nadunudi News WhatsApp Group