Ev Ban: ಇನ್ಮುಂದೆ ಇಂತಹ ಎಲೆಕ್ಟ್ರಿಕ್ ವಾಹನಗಳನ್ನ ರಸ್ತೆಗೆ ತರುವಂತಿಲ್ಲ, ಹೊಸ ನಿಯಮ ಜಾರಿ

ಇಂದಿನಿಂದ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಯನ್ನು ಓಡಿಸುವಂತಿಲ್ಲ

Ev Ban In Karnataka: ಜನಸಾಮನ್ಯರು ಸರ್ಕಾರಕ್ಕೆ ವಿವಿಧ ಬೇಡಿಕೆಯನ್ನು ಮನವಿ ಇಟ್ಟಿರುತ್ತಾರೆ. ಆದರೆ ಸರ್ಕಾರ ಜನಸಾಮನ್ಯರ ಬೇಡಿಕೆಗೆ ಹೆಚ್ಚಿನ ಮಹತ್ವ ನೀಡದಿರುವುದು ಕಂಡುಬರುತ್ತಿದೆ. ರಾಜ್ಯ ಸರ್ಕಾರ ಜನಸಾಮನ್ಯರ ಬೇಡಿಕೆಗೆ ಸ್ಪಂದಿಸದಿದ್ದರೆ ಜನರು ಪ್ರತಿಭಟನೆಗೆ ಮುಂದಾಗುವುದು ಸಹಜ.

ಸದ್ಯ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಸ್ಥೆಗಳು ಬೃಹತ್ ಪ್ರತಿಭಟನೆಗೆ ಮುಂದಾಗಿವೆ. ಪ್ರತಿಭಟನೆಯ ಬಳಿಕ ರಾಜ್ಯ ಸರ್ಕಾರ ಮಹತವಾದ ನಿರ್ಧಾರ ಕೈಗೊಂಡಿದ್ದು, ಈ ಪ್ರತಿಭಟನೆಯು ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಓಡಿಸುವವರ ಮೇಲೆ ನೇರ ಪರಿಣಾಮ ಬೀರಿದೆ.

Electric Bike Ban In Karnataka
Image Credit: Telegraphindia

ಇಂದಿನಿಂದ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಯನ್ನು ಓಡಿಸುವಂತಿಲ್ಲ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಸಾರಿಗೆ ಸಂಸ್ಥೆಗಳು ನಿನ್ನೆ ಬೆಂಗಳೂರಿನ ಶಾಂತಿನಗರದಲ್ಲಿರುವ ಆರ್‌ಟಿಒ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು. ಇದರ ನಂತರ, ಇಂದಿನಿಂದ ನೀವು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಓಡಿಸಲು ಸಾಧ್ಯವಿಲ್ಲ. ಖಾಸಗಿ ಸಾರಿಗೆ ಸಂಸ್ಥೆಗಳ ಮನವಿ ಮೇರೆಗೆ ಸಾರಿಗೆ ಇಲಾಖೆ ಅಧಿಕಾರಿಗಳು ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಂಡಿರುವುದು ಗೊತ್ತಾಗಿದೆ.

ರಾಜ್ಯ ಸರ್ಕಾರದ ಮಹತ್ವದ ಆದೇಶ
ಹೌದು, ಖಾಸಗಿ ಸಾರಿಗೆ ಸಂಸ್ಥೆಗಳ ಮನವಿಗೆ ಇದೀಗ ಸಾರಿಗೆ ಇಲಾಖೆ ಸ್ಪಂದಿಸಿದ್ದು, ಇಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳಲು ಸಾರಿಗೆ ಅಧಿಕಾರಿಗಳು ನಿಂತಿದ್ದು, 11 ತಂಡಗಳನ್ನು ರಚಿಸಿ ಆರ್‌ಟಿಒ ಅಧಿಕಾರಿಗಳ ನೇತೃತ್ವದಲ್ಲಿ ಅನಧಿಕೃತ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೀಜ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂದಿನಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಯನ್ನು ಓಡಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.

Electric Bike And Taxi Ban
Image Credit: Hosasuddi

Join Nadunudi News WhatsApp Group

Join Nadunudi News WhatsApp Group