ಜುಲೈ 10 ಶಕ್ತಿಶಾಲಿ ಭಯಂಕರ ಸೂರ್ಯ ಗ್ರಹಣ, ಈ ತಪ್ಪುಗಳನ್ನ ಮಾಡಿದರೆ ಕಷ್ಟ ಕಟ್ಟಿಟ್ಟ ಬುತ್ತಿ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಎಷ್ಟು ಪ್ರಾಮುಖ್ಯತೆಯನ್ನ ಕೊಡಲಾಗಿದೆಯೋ ಅದೇ ರೀತಿಯಲ್ಲಿ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಕ್ಕೂ ಕೂಡ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಗ್ರಹಣ ಅನ್ನುವುದು ಆಗಸದಲ್ಲಿ ನಡೆಯುವ ಒಂದು ಪ್ರಕ್ರಿಯೆಯಾಗಿದ್ದರು ಕೂಡ ಇದು ಮಾನವನ ಮೇಲೆ ದೊಡ್ಡ ಪರಿಣಾಮವನ್ನ ಬೀರುತ್ತದೆ ಎಂದು ಹೇಳಬಹುದು. ಗ್ರಹಣ ಹೆಚ್ಚಾಗಿ ಮಾನವನ ಜ್ಯೋತಿಷ್ಯದ ಮೇಲೆ ದೊಡ್ಡ ಪರಿಣಾಮವನ್ನ ಬೀರುವ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಕ್ಕೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಇನ್ನು ನಿಮಗೆಲ್ಲ ತಿಳಿದಿರುವ ಹಾಗೆ ಇದೆ ತಿಂಗಳ 10 ನೇ ತಾರೀಕಿನಂದು ಆಗಸದಲ್ಲಿ ಸೂರ್ಯ ಗ್ರಹಣ ಗೋಚರ ಆಗಿದ್ದು ಈ ಗ್ರಹಣವನ್ನ ಬಹಳ ಕೆಟ್ಟ ಗ್ರಹಣ ಎಂದು ಹೇಳಲಾಗಿದೆ.

ಈ ಗ್ರಹಣ ಮಾನವನ ಬೆಲೆ ಬಹಳ ಪರಿಣಾಮವನ್ನ ಬೀರುವ ಕಾರಣ ಜನರು ಕೆಲವು ನಿಯಮ ಮತ್ತು ಪದ್ದತಿಯನ್ನ ಅವಶ್ಯಕವಾಗಿ ಪಾಲಿಸುವುದು ಅಗತ್ಯ ಎಂದು ಹೇಳಬಹುದು. ಜ್ಯೋತಿಷ್ಯದ ಪ್ರಕಾರ ಮತ್ತು ವಿಜ್ಞಾನಿಗಳ ಪ್ರಕಾರ ಜನರು ಈ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು ಮತ್ತು ಈ ತಪ್ಪುಗಳನ್ನ ಮಾಡುವುದರಿಂದ ಜನರು ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಬಹಳ ಇದೆ ಎಂದು ಹೇಳಲಾಗಿದೆ. ಹಾಗಾದರೆ ಗ್ರಹಣದ ದಿನ ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

this surya grahan

ಸ್ನೇಹಿತರೆ ಚಂದ್ರ ಗ್ರಹಣಕ್ಕೆ ಹೋಲಿಕೆ ಮಾಡಿದರೆ ಸೂರ್ಯ ಗ್ರಹಣ ಬಹಳ ಶಕ್ತಿಶಾಲಿಯಾದ ಗ್ರಹಣವಾಗಿದ್ದು ಇದು ಮಾನವನ ಮೇಲೆ ಬಹಳ ಕೆಟ್ಟ ಪರಿಣಾಮವನ್ನ ಬೀರುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಗ್ರಹಣದ ನೆರಳು ಬಹಳ ಶಕ್ತಿಯನ್ನ ಹೊಂದಿದ್ದು ಇದು ಮಾನವನ ಮೇಲೆ ಬಿದ್ದರೆ ಅವರ ಚರ್ಮಕ್ಕೆ ಸಮಸ್ಯೆ ಉಂಟಾಗಿ ಚರ್ಮಕ್ಕೆ ಸಂಬಂಧಿಸಿದ ಖಾಯಿಲೆ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಗ್ರಹಣ ಮುಗಿದ ನಂತರ ಮತ್ತು ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀರನ್ನ ಕುಡಿಯಬಾರದು, ನೀರಿಗೆ ಗ್ರಹಣ ನೆರಳು ಬಿದ್ದರೆ ಅದೂ ಮಾನವನ ಆರೋಗ್ಯದ ಮೇಲೆ ಬಹಳ ಪ್ರಭಾವವನ್ನ ಬೀರುತ್ತದೆ ಎಂದು ವಿಜ್ಞಾನಗಳಲ್ಲಿ ಹೇಳಲಾಗಿದೆ. ಇನ್ನು ಗ್ರಹಣದ ಸಮಯದಲ್ಲಿ ದುಷ್ಟ ಶಕ್ತಿಗಳ ಆರ್ಭಟ ಜಾಸ್ತಿ ಇರುವ ಕಾರಣ ಚಿಕ್ಕ ಮಕ್ಕಳು ಗ್ರಹಣದ ಸಮಯದಲ್ಲಿ ಹೊರಗೆ ಬಾರದೆ ಇರುವುದು ಉತ್ತಮ ಎಂದು ಹೇಳಬಹುದು.

ಇನ್ನು ಅತೀ ಮುಖ್ಯವಾಗಿ ಗರ್ಭಿಣಿ ಹೆಂಗಸರು ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬಾರದು, ಗ್ರಹಣ ನೆರಳು ಹೊಟ್ಟೆಯಲ್ಲಿ ಇರುವ ಮಗುವಿನ ಮೇಲೆ ಬಹಳ ಪರಿಣಾಮವನ್ನ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಗ್ರಹಣದ ಸಮಯದಲ್ಲಿ ಕಪ್ಪು ಬಟ್ಟೆಯನ್ನ ಧರಿಸದೇ ಇರುವುದು ಉತ್ತಮ ಎಂದು ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸದ ಪೊರಕೆಯಲ್ಲಿ ಮನೆ ಸ್ವಚ್ಛ ಮಾಡುವ ಕೆಲಸವನ್ನ ಮಾಡಬಾರದು ಎಂದು ಹೇಳಲಾಗಿದೆ ಮತ್ತು ಅದು ಅಶುಭ ಎಂದು ಕೂಡ ಹೇಳಲಾಗಿದೆ. ಸ್ನೇಹಿತರೆ ಗ್ರಹಣದ ಕುರಿತಾದ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

this surya grahan

Join Nadunudi News WhatsApp Group