Three Phase Power: ರಾಜ್ಯದ ಎಲ್ಲಾ ರೈತರಿಗೆ ಸಿಗಲಿದೆ ಇನ್ನೊಂದು ಗ್ಯಾರಂಟಿ, ರಾಜ್ಯ ಸರ್ಕಾರದ ಹೊಸ ಘೋಷಣೆ
ರೈತರಿಗೆ ಅನುಕೂಲ ಮಾಡಿಕೊಡಲು ಬೆಳಿಗ್ಗೆಯೂ ತ್ರೀ ಫೇಸ್ ವಿದ್ಯುತ್ ನೀಡುವ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ.
Three Phase Power: ರಾಜ್ಯ ಸರ್ಕಾರ ರೈತರಿಗಾಗಿ (Formers) ವಿವಿದ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರೈತರು ತಾವು ಬೆಳೆದಂದತಹ ಬೆಳೆಯ ಮೂಲಕ ಜೀವನವನ್ನು ನಡೆಸುತ್ತಾರೆ.
ಹೀಗಾಗಿ ರೈತರು ಬೆಳೆದ ಬೆಳೆಗೆ ಯಾವುದೇ ಹಾನಿ ಆಗದಂತೆ ನಿಗಾ ವಹಿಸುವುದು ಸರ್ಕಾರದ ಹೊಣೆಯಾಗಿರುತ್ತದೆ. ಇದೀಗ ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದೆ. ರೈತರ ಅನುಕೂಲಕ್ಕಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ರಾಜ್ಯದ ರೈತರಿಗೆ ಸಿಹಿ ಸುದ್ದಿ
ರೈತರು ಸಾಮಾನ್ಯವಾಗಿ ತಮ್ಮ ಹೊಲಗಳಲ್ಲಿ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಬೆಳೆಸುತ್ತಾರೆ. ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಳೆ ಬೀಳುತ್ತದೆ. ಕೆಲವು ಕಡೆ ಧಾರಾಕಾರ ಮಳೆ ಬಿದ್ದರೆ ಇನ್ನು ಕೆಲವು ಕಡೆ ಮಳೆಯೇ ಇಲ್ಲದೆ ರೈತರು ಕಂಗಾಲಾಗಿರುತ್ತಾರೆ. ಮಳೆ ಇಲ್ಲದೆ ಇದ್ದರೆ ಮಳೆಗಾಲದಲ್ಲಿ ಕೂಡ ರೈತರು ತಮ್ಮ ಹೊಲಗಳಿಗೆ ನೀರನ್ನು ನೀಡಬೇಕಾಗುತ್ತದೆ.
ಇನ್ನು ರಾತ್ರಿ ಹೊತ್ತು ಹೊಲಗಳಿಗೆ ನೀರು ಹಾಯಿಸಲು ಹೋಗುವುದು ರೈತರಿಗೆ ಸಂಕಷ್ಟವನ್ನು ತಂದೊಡ್ಡಬಹುದು. ರಾತ್ರಿಯ ಹೊತ್ತಿನಲ್ಲಿ ಹೊಲಗಳಿಗೆ ಹೋಗುವುದು ಅಪಾಯಕಾರಿ. ಕಾಡು ಪ್ರದೇಶಗಳಲ್ಲಿ ವನ್ಯ ಜೀವಿಗಳಿಂದ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣ ರೈತರಿಗಾಗಿ ಹೊಸ ಸೌಲಭ್ಯ ನೀಡಲು ನಿರ್ಧರಿಸಿದೆ.
ಇನ್ನುಮುಂದೆ ಬೆಳಿಗ್ಗೆಯೂ ಸಿಗಲಿದೆ ತ್ರೀ ಫೇಸ್ ವಿದ್ಯುತ್
ರೈತರಿಗೆ ಅನುಕೂಲ ಮಾಡಿಕೊಡಲು ಬೆಳಿಗ್ಗೆಯೂ ತ್ರೀ ಫೇಸ್ ವಿದ್ಯುತ್ ನೀಡುವ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಈ ಮೂಲಕ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಬೆಳಿಗ್ಗೆಯೂ ತ್ರೀ ಫೇಸ್ ವಿದ್ಯುತ್ ನೀಡುವ ಬಗ್ಗೆ ಸಚಿವರು ಮಾತನಾಡಿದ್ದಾರೆ. “ಬೆಳಿಗ್ಗೆ ಸಮಯದಲ್ಲೇ ತ್ರೀ ಫೇಸ್ ನಲ್ಲಿ ವಿದ್ಯುತ್ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ. ಅಧಿವೇಶನ ನಡೆದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಮಾಹಿತಿ ನೀಡಿದ್ದಾರೆ.