Ticket Cancelation: ರೈಲು ಪ್ರಯಾಣ ಮಾಡುವ ಎಲ್ಲರಿಗೂ ಸಿಹಿಸುದ್ದಿ, ಟಿಕೆಟ್ ರದ್ದು ಮಾಡುವ ನಿಯಮದಲ್ಲಿ ದೊಡ್ಡ ಬದಲಾವಣೆ.
ಇನ್ನುಮುಂದೆ ರೈಲು ಟಿಕೆಟ್ ಅನ್ನು ರದ್ದುಗೊಳಿಸಲು ಚಿಂತಿಸುವ ಅಗತ್ಯ ಇಲ್ಲ, ಯಾವುದೇ ಶುಲ್ಕ ಪಾವತಿಸದೇ ಟಿಕೆಟ್ ರದ್ದುಪಡಿಸಿಕೊಳ್ಳಿ.
Railway Ticket Cancelation Update: ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ಮುಖ್ಯವಾಗಿ Train ticket ಅನ್ನು ಕಾಯ್ದಿರಿಸಬೇಕು. ಯಾವ ಪ್ರಯಾಣಿಕರು ಕೂಡ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಸಂಚಾರ ಮಾಡಲು ರೈಲ್ವೆ ಇಲಾಖೆ ಅನುಮತಿ ನೀಡುವುದಿಲ್ಲ. ರೈಲು ಪ್ರಯಾಣಕ್ಕೆ ಟಿಕೆಟ್ ಪಡೆಯುವುದು ಕಡ್ಡಾಯ. ಇನ್ನು ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಟಿಕೆಟ್ ಗಳನ್ನೂ ಪಡೆಯಲು ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ವಿವಿದ ಸೌಲಭ್ಯವನ್ನು ಒದಗಿಸುತ್ತಿದೆ.
ಇನ್ನು ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ತಾವು ಕಾಯ್ದಿರಿಸಿದ ಟಿಕೆಟ್ ಅನ್ನು ರದ್ದುಗೊಳಿಸಲು ಕೂಡ ಅನುಮತಿ ನೀಡುತ್ತಿದೆ. ಆದರೆ ಈ ಹಿಂದೆ ಟಿಕೆಟ್ ಅನ್ನು ರದ್ದುಗೊಳಿಸಲು ನಿಮ್ಮ ಹಣವನ್ನು ಕಡಿತಗೊಳಿಸಲಾಗುತ್ತಿತು. ಸದ್ಯ ರೈಲ್ವೆ ಇಲಾಖೆ ಈ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ನೀವು ಕಾಯ್ದಿರಿಸಿರುವ ರೈಲ್ವೆ ಟಿಕೆಟ್ ಅನ್ನು ಇನ್ನುಮುಂದೆ ಯಾವುದೇ ಚಿಂತೆ ಇಲ್ಲದೆ ನೀವು ರದ್ದುಗೊಳಿಸಬಹುದು.
ಇನ್ನುಮುಂದೆ ರೈಲು ಟಿಕೆಟ್ ಅನ್ನು ರದ್ದುಗೊಳಿಸಲು ಚಿಂತಿಸುವ ಅಗತ್ಯ ಇಲ್ಲ
ಸದ್ಯ ಜನರು ಮುಂಚಿತವಾಗಿಯೇ ದೃಢೀಕೃತ ಬರ್ತ್ ಗಳನ್ನು ಪಡೆಯಲು ರೈಲು ಟಿಕೆಟ್ ಗಳನ್ನು ಕಾಯ್ದಿರಿಸುತ್ತಾರೆ. ಆದರೆ ಕೆಲವೊಮ್ಮೆ ಕೆಲವು ಅಡಚಣೆಗಳಿಂದ ಜನರು ಕೊನೆಯ ಕ್ಷಣದಲ್ಲಿ ರೈಲು ಪ್ರಯಾಣವನ್ನು ಕ್ಯಾನ್ಸಲ್ ಮಾಡುವುದುಂಟು. ಈ ಸಮಯದಲ್ಲಿ ನೀವು ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಬೇಕಾಗುತ್ತದೆ. ನೀವು ಪ್ರಯಾಣಿಸದಿದ್ದಾಗ ನಿಮ್ಮ ದೃಢೀಕೃತ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ ನೀವು ಸಂಪೂರ್ಣ ಮರುಪಾವತಿಯನ್ನು ಪಡೆಯುತ್ತೀರಿ.
ರೈಲು ಟಿಕೆಟ್ ರದ್ದು ಮಾಡಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ
ಭಾರತೀಯ ರೈಲ್ವೇ ಇತ್ತೀಚೆಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಅಡಿಯಲ್ಲಿ ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ 4 ಗಂಟೆಗಳ ಮೊದಲು ಯಾವುದೇ ಶುಲ್ಕವಿಲ್ಲದೆ ತಮ್ಮ ದೃಢೀಕೃತ ಟಿಕೆಟ್‌ಗಳನ್ನು ರದ್ದುಗೊಳಿಸಬಹುದು.
IRCTC ವೆಬ್ ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ನಿಮ್ಮ ಟಿಕೆಟ್ ಅನ್ನು ಶುಲ್ಕವಿಲ್ಲದೆ ರದ್ದುಗೊಳಿಸಬಹುದು. ನೀವು ಯಾವುದೇ ರೈಲು ನಿಲ್ದಾಣದ ಕೌಂಟರ್ ನಿಂದ ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಬಹುದು. ನಿಮ್ಮ ಪ್ರಯಾಣದ 4 ಗಂಟೆಗಳ ನಂತರ ನಿಮ್ಮ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಶುಲ್ಕವಿಲ್ಲದೆ ಟಿಕೆಟ್ ಅನ್ನು ರದ್ದುಗೊಳಿಸಲು ಈ ರೀತಿ ಮಾಡಿ
*ನಿಮ್ಮ ಪ್ರಯಾಣದ ದಿನಾಂಕ ಮತ್ತು ಸಮಯವನ್ನು ದೃಢೀಕರಿಸುವುದರಿಂದ, ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು ಸಹಾಯ ಮಾಡುತ್ತದೆ.
*ನಿಮ್ಮ ಪ್ರಯಾಣದ 4 ಗಂಟೆಗಳ ಮೊದಲು ನಿಮ್ಮ ಟಿಕೆಟ್ ಅನ್ನು ನೀವು ರದ್ದುಗೊಳಿಸಿದರೆ ನಿಮಗೆ ಶುಲ್ಕವನ್ನು ವಿಧಿಸಲಾಗುವುದಿಲ್ಲ.
*ನೀವು ಆನ್ಲೈನ್ ನಲ್ಲಿ ನಿಮ್ಮ ಟಿಕೆಟ್ ಅನ್ನು ಸುಲಭವಾಗಿ ರದ್ದುಗೊಳಿಸಿಕೊಳ್ಳಬಹುದು.