Ads By Google

ಕನ್ನಡದಲ್ಲಿ ಟೈಗರ್ ಪ್ರಭಾಕರ್ ಮಾಡಿದ ಚಿತ್ರವನ್ನು ತಮಿಳಿನಲ್ಲಿ ಮಾಡಿ ಗೆದ್ದಿದ್ದ ರಜನೀಕಾಂತ್, ಯಾವುದು ಗೊತ್ತಾ ಆ ಸಿನೆಮಾ

tiger prabhakar rajini
Ads By Google

30 ಮಾರ್ಚ್ 1947 ರಂದು ಜನಿಸಿದ ಟೈಗರ್ ಪ್ರಭಾಕರ್ ಅವರು ಕನ್ನಡ ಮತ್ತು ತೆಲುಗು ಸಿನಿಮಾಗಳಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ ಹೆಸರುವಾಸಿಯಾಗಿದ್ದಾರೆ. ಇದರ ಜೊತೆಗೆ ಕೆಲವು ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಟೈಗರ್ ಎಂಬ ಪದಕ್ಕೆ ಅರ್ಥವನ್ನು ನೀಡಿದ್ದಾರೆ. ಹೆಚ್ಚಾಗಿ ಖಳನಾಯಕನ ಪಾತ್ರದಲ್ಲಿಯೇ ಹೆಸರುವಾಸಿ ಯಾಗಿರುವ ಅವರು,  ಸಣ್ಣ ಬಜೆಟ್ ಚಲನಚಿತ್ರಗಳಲ್ಲಿ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಚಲನಚಿತ್ರ ಜೀವನವನ್ನು ಪ್ರಾರಂಭಿಸಿದರು.

ಮಾನ್ಯತೆ ಪಡೆದ ನಂತರ ಅವರು ತಮಿಳು, ತೆಲುಗು, ಹಿಂದಿ, ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿ ಸಾಕಷ್ಟು ಹೆಸರನ್ನು ಗಳಿಸಿಕೊಂಡರು ಸುಮಾರು 450 ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಭಾಕರ್, ಚಿರಂಜೀವಿ ಅವರ ಅನೇಕ ಸಿನಿಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿನ ಅವರ ಸಹಜ ನಟನೆ ಅವರಿಗೆ “ಟೈಗರ್ ಪ್ರಭಾಕರ್” ಎಂಬ ಹೆಸರನ್ನು ತಂದುಕೊಟ್ಟಿತು.

ಕನ್ನಡ ಸಿನಿರಸಿಕರಂತೂ ಟೈಗರ್ ಪ್ರಭಾಕರ್ ಅವರ ಗತ್ತು, ಸ್ಟೈಲ್, ಡೈಲಾಗ್ ಮತ್ತು ಫೈಟಿಂಗ್ ಗಳನ್ನು ಇಂದಿಗೂ ಮರೆತಿಲ್ಲ. ಯಾವ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಇಲ್ಲದೆ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು ಟೈಗರ್ ಪ್ರಭಾಕರ್ ರವರು. ತಾನೂ ಹದಿನಾಲ್ಕು ವರುಷದವನಾಗಿದ್ದಾಗಲೇ ಇಬ್ಬರು ಬಾಕ್ಸರ್ ಗಳಿಗೆ ಮಣ್ಣು ಮುಕ್ಕಿಸಿ ಚಿತ್ರರಂಗಕ್ಕೆ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ನಂತರ ಸ್ಟಂಟ್ ಸೀನ್ ಗಳನ್ನು ನಿರ್ದೇಶಿಸುತ್ತಿದ್ದರು. ತದನಂತರ ಸಣ್ಣಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಭಾಕರ್ ಅವರ ನೂರನೇ ಚಿತ್ರ ಮುತ್ತೈದೆ ಬಾಗ್ಯ ಸಿನಿಮಾದಲ್ಲಿ ಪರಿಪೂರ್ಣ ನಾಯಕರಾದರು.ಆದರೆ ಬಹಳಷ್ಟು ಜನರಿಗೆ ಗೊತ್ತಿಲ್ಲದ ಒಂದು ಸಂಗತಿ ಎಂದರೆ ಕನ್ನಡಲ್ಲಿ ಟೈಗರ್ ಪ್ರಭಾಕರ್ ಮಡಿದ ಸಿನೆಮಾವನ್ನು ತಮಿಳಿನಲ್ಲಿ ರಜನೀಕಾಂತ್ ಮಾಡಿ ಗೆದ್ದಿದ್ದರು ಆ ಕಾಲದಲ್ಲಿ ದೊಡ್ಡ ಮಟ್ಟದ ಹಿಟ್ ಕಂಡಿತ್ತು ಆ ಚಿತ್ರ.

ಆಗಿನ ಕಾಲದಲ್ಲಿ ಟೈಗರ್ ಪ್ರಭಾಕರ್ ನಟನೆಗೆ ಮನಸೋತವರಿಲ್ಲ, ಅದನ್ನೇ ಅರಿತಿದ್ದ ತಮಿಳಿನ ದಿಗ್ಗಜ ನಟ ರಜನೀಕಾಂತ್ ಅಂದು ಬಾಂಬೆ ದಾದಾ ಸಿನೆಮಾವನ್ನು ರಿಮೇಕ್ ಮಾಡುವ ಯೋಚನೆ ಮಾಡಿದರು ಹಾಗು ಆ ಸಿನೆಮಾದಲ್ಲಿ ಟೈಗರ್ ಗು ಒಂದು ಪಾತ್ರ ನೀಡುವ ಯೋಚನೆ ಮಾಡಿದ್ದರು. ಕೊನೆಗೆ ರಿಮೇಕ್ ರೈಟ್ಸ್ ಪಡೆದು ರಜನಿ ಈ ಸಿನೆಮಾ ಮಾಡಿ ಗೆದ್ದರು ಅಲ್ಲದೆ ತೆಲುಗು ಹಿಂದಿಯಲ್ಲೂ ಕೂಡ ಈ ಸಿನಿಮಾ ಗೆದ್ದಿತ್ತು.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field