ಕನ್ನಡ ಚಿತ್ರರಂಗದ ಸಮಯ ಇನ್ನೊಮ್ಮೆ ಸರಿ ಇಲ್ಲ ಅನ್ನುವುದು ಸಾಭೀತು ಆಗಿದೆ ಎಂದು ಹೇಳಬಹುದು. ಹೌದು ಒಬ್ಬರಾದ ಮೇಲೆ ಒಬ್ಬರು ಕನ್ನಡ ಚಿತ್ರರಂಗದ ಕಲಾವಿದರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಜನರ ಬೇಸರಕ್ಕೆ ಮತ್ತು ಕಣ್ಣೀರಿಗೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಕಳೆದ ಎರಡು ವರ್ಷದಲ್ಲಿ ಹಲವು ಕನ್ನಡ ಯುವ ನಟ ನಟಿಯರು ಮತ್ತು ಹಿರಿಯ ನಟ ನಟಿಯರು ಇಹಲೋಕವನ್ನ ತ್ಯಜಿಸಿದ್ದು ಜನರು ಬೇಸರವನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಈ ವರ್ಷ ಕನ್ನಡ ಚಿತ್ರರಂಗದ ಹಲವು ಹಿರಿಯ ಜೀವಗಳು ನಮ್ಮನ್ನ ಬಿಟ್ಟು ಮತ್ತು ಚಿತ್ರರಂಗವನ್ನ ಬಿಟ್ಟು ಅಗಲಿದ್ದಾರೆ ಎಂದು ಹೇಳಬಹುದು.
ಇನ್ನು ಈಗ ಕನ್ನಡದಲ್ಲಿ ಹಲವು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದ ಕನ್ನಡ ಹಿರಿಯ ನಿರ್ದೇಶಕ ಉಸಿರಾಟದ ಸಮಸ್ಯೆಯಿಂದ ಇಹಲೋಕವನ್ನ ತ್ಯಜಿಸಿದ್ದು ಇವರ ಅಗಲಿಕೆಗೆ ಇದು ಕನ್ನಡ ಚಿತ್ರರಂಗ ಸಂತಾಪವನ್ನ ಸೂಚಿಸಿದೆ ಎಂದು ಹೇಳಬಹುದು. ಹಾಗಾದರೆ ಈ ಹಿರಿಯ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇಂದು ವಿಧಿವಶರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಉಸಿರಾಟದ ಸಮಸ್ಯೆಯಿಂದಾಗಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದ ಒಬ್ಬ ಪ್ರತಿಭಾನ್ವಿತ ನಿರ್ದೇಶಕರಾಗಿರುವ ಇವರು 1984 ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಶಂಕರನಾಗ್ ಅಭಿನಯದ ‘ಬೆಂಕಿ ಬಿರುಗಾಳಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ನಾಗಕಾಳಭೈರವ, ಬೆಟ್ಟದ ಹುಲಿವೀಣೆ ಸೇರಿದಂತೆ ಅನೇಕ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನು ಬರಿ ನಿರ್ದೇಶವನ್ನ ಮಾಡದ ತಿಪಟೂರು ರಘು ಅವರು ಹಲವು ಚಿತ್ರಗಳಲ್ಲಿ ಬಣ್ಣವನ್ನ ಹಚ್ಚುವುದರ ಮೂಲಕ ಆಗಿನ ಕಾಲದಲ್ಲಿ ಮನೆಮಾತಾಗಿದ್ದರು ಎಂದು ಹೇಳಬಹುದು. ಸುಮಾರು 83 ವರ್ಷ ವಯಸ್ಸಾಗಿರುವ ತಿಪಟೂರು ರಘು ಅವರು ಹಲವು ಸಮಯಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಇನ್ನು ಅದರ ಜೊತೆಗೆ ಕೆಲವು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಕೂಡ ತಿಪಟೂರು ರಘು ಬಳಲುತ್ತಿದ್ದರು ಮತ್ತು ಅವರಿಗೆ ಚಿಕ್ಸಿತೆಯನ್ನ ಕೂಡ ನೀಡಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. ತಿಪಟೂರು ರಘು ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಸಂತಾಪವನ್ನ ಸೂಚಿಸಿದ್ದಾರೆ. ಏನೇ ಆಗಲಿ ಈ ವರ್ಷ ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಬಹಳ ಕರಾಳ ವರ್ಷವಾಗಿ ಮಾರ್ಪಾಡು ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ತಿಪಟೂರು ರಘು ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.