Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಹೊಸ ನಿಯಮ, ದೇವಸ್ಥಾನ ಮಂಡಳಿಯ ಆದೇಶ.
ಭಕ್ತರ ನೂಕುನುಗ್ಗಲು ಉಂಟಾಗಿರುವ ಕಾರಣ ಉಚಿತ ದರ್ಶನ ಟಿಕೆಟ್ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ದೇವಸ್ಥಾನವು ನಿರ್ಧರಿಸಿದೆ.
Tirupati Tirumala Temple: ಪ್ರತಿ ದಿನ ಸಾವಿರಾರು ಭಕ್ತರು ತಿರುಪತಿಗೆ ಭೇಟಿ ನೀಡುತ್ತಾರೆ. ವಿಶೇಷವಾಗಿ ಕೆಲ ಮಾಸಗಳಲ್ಲಿ ತಿರುಪತಿಯಲ್ಲಿ ಹೆಚ್ಚು ಜನಸಂದಣಿ ಇರುತ್ತದೆ. Tirumala Temple ಬಹಳ ಪ್ರಸಿದ್ಧವಾದ ಕಾರಣ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಇದರಿಂದಾಗಿ ತಿರುಪತಿ ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಕೊರೊನಾ ಸಮಯದಲ್ಲಿ ತಿರುಪತಿ ದೇವಸ್ಥಾನವನ್ನು ಮುಚ್ಚಲಾಗಿತ್ತು. ಆಗ ಮಾತ್ರ ದೇವಾಲಯವು ಖಾಲಿಯಾಗಿತ್ತು. ಕೊರೊನಾ ನಿಯಮಗಳನ್ನು ಹಿಂತೆಗೆದ ನಂತರ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ತಿರುಪತಿಗೆ ಹೋಗಲು ಪ್ರಾರಂಭಿಸಿದ್ದಾರೆ.
ತಿರುಪತಿ ತಿರುಮಲ ದೇವಸ್ಥಾನ ವಿಶೇಷತೆ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನವನ್ನು ನಾವು ನೋಡಬಹುದಾಗಿದೆ. ಈ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕಾಮನ ಬಿಲ್ಲು ಆವರಿಸಿದ್ದು ನೋಡುಗರನ್ನು ಆಕರ್ಷಿಸಿದೆ. ಭೂಮಿಯ ಮೇಲಿನ ಅತ್ಯಂತ ಪ್ರಭಾವಶಾಲಿ ದೇವಾಲಯವಾಗಿದ್ದು, ವರ್ಷದ ಯಾವುದೇ ದಿನ ಬೇಕಾದರೂ ಈ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ. ಲಕ್ಷಾಂತರ ಜನ ನಿತ್ಯ ತಿರುಪತಿಗೆ ಭೇಟಿ ನೀಡುತ್ತಾರೆ ಹಾಗೆ ಭಕ್ತರು ತಮ್ಮೆಲ್ಲಾ ಇಚ್ಚೆಯನ್ನು ಈಡೇರಿಸುವಂತೆ ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ.
ತಿರುಪತಿಯಲ್ಲಿ ಉಚಿತ ದರ್ಶನ ಟಿಕೆಟ್ ಸಂಪೂರ್ಣ ರದ್ದು
ತಿರುಪತಿಯಲ್ಲಿ ಬ್ರಹ್ಮೋತ್ಸವ ನಡೆಯುವುದರಿಂದ ಅದನ್ನು ನೋಡಲು ಭಕ್ತರ ದಂಡೇ ಹರಿದು ಬರುತ್ತಿದೆ. ಇದೀಗ ಬಹುತೇಕ ಶಾಲೆಗಳಲ್ಲಿ ತ್ರೈಮಾಸಿಕ ರಜೆ ಇದೆ, ಹಾಗಾಗಿ ಹೆಚ್ಚಿನ ಜನರು ದೇವರ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಉಚಿತ ದರ್ಶನಕ್ಕೆ 5 ಕಿ.ಮೀ. ದೂರದಲ್ಲಿ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ನಿತ್ಯ ದರ್ಶನಕ್ಕೆ 48 ಗಂಟೆ ಬೇಕಾಗುತ್ತಿದೆ. ಅಲ್ಲದೆ ವೈಕುಂಡಂ ಕ್ಯೂ ಕ್ಯಾಂಪ್ಲೆಕ್ಸ್ ನಲ್ಲಿರುವ ಎಲ್ಲಾ 31 ಕೊಠಡಿಗಳು ಭಕ್ತರಿಂದ ತುಂಬಿವೆ. ಇನ್ನು ಕೆಲವರಿಗೆ ದೇವರ ದರ್ಶನ ಸಿಗುತ್ತಿಲ್ಲ. ಭಕ್ತರ ನೂಕುನುಗ್ಗಲು ಉಂಟಾಗಿರುವ ಕಾರಣ ಉಚಿತ ದರ್ಶನ ಟಿಕೆಟ್ಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲು ದೇವಸ್ಥಾನವು ನಿರ್ಧರಿಸಿದೆ.