Tobacco Sellers: ಅಂಗಡಿಯಲ್ಲಿ ತಂಬಾಕು ಮಾರುವವರಿಗೆ ಹೊಸ ನಿಯಮ, ಸರ್ಕಾರದ ಆದೇಶ.
ಅಂಗಡಿಗಳಲ್ಲಿ ತಂಬಾಕು ಮಾರಾಟ ಮಾಡಿಲು ಲೈಸೆನ್ಸ್ ಕಡ್ಡಾಯ, ಸರ್ಕಾರದ ಆದೇಶ.
New Rules For Tobacco Sellers: ಎಲ್ಲ ತಂಬಾಕು ಮಾರಾಟಗಾರರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ಇನ್ನುಮುಂದೆ ಎಲ್ಲ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಗಿ ಪಡೆಯಬೇಕಿದೆ.
ತಂಬಾಕು ಮಾರಾಟ ಮಾಡುವವರಿಗೆ ಹೊಸ ಸುದ್ದಿ ಪ್ರಕಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಂಬಾಕು ಉತ್ಪನ್ನಗಳ ಮಾರಾಟ ನಿಯಂತ್ರಿಸಲು ಹೊಸದಾಗಿ ಅಧಿಸೂಚಿತ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಹೊಸ ನಿಯಮದ ಪ್ರಕಾರ ಎಲ್ಲಾ ತಂಬಾಕು ಮಾರಾಟಗಾರರು ತಂಬಾಕು ಉತ್ಪನ್ನಗಳನ್ನು ಸಾರ್ವಜನಿಕವಾಗಿ ಮಾರಾಟ ಮಾಡಲು ಪ್ರತ್ಯೇಕ ಪರವಾನಗಿ ಪಡೆಯಬೇಕಿದೆ.
5 ವರ್ಷಗಳ ಅವಧಿಗೆ 500 ರೂಪಾಯಿ ಪರವಾನಗಿ ಶುಲ್ಕ ನೀಡಬೇಕಿದೆ. ಪರವಾನಗಿ ಪಡೆಯದೇ ನಿಯಮ ಉಲ್ಲಂಘಿಸಿದರೆ ಒಂದು ಸಲಕ್ಕೆ 5000 ರೂಪಾಯಿ ಅನಂತರ ದಿನಕ್ಕೆ 100 ರೂಪಾಯಿ ದಂಡ ವಿಧಿಸಲಾಗುವುದು ಎಂದು ಹೇಳಲಾಗಿದೆ.
ತಂಬಾಕು ಮಾರಾಟ ಮಾಡುವವರಿಗೆ ಪ್ರತ್ಯೇಕವಾಗಿ ಪರವಾನಗಿ ಪಡೆಯಲು ಸರ್ಕಾರದಿಂದ ಆದೇಶ
ದೇಶದಲ್ಲಿ ತಂಬಾಕು ಮಾರಾಟ ಮಾಡುವವರಿಗಿಂತ ಹೆಚ್ಚಾಗಿ ತಂಬಾಕು ಸೇವನೆ ಮಾಡುವವರೇ ಇದ್ದಾರೆ. ಜನರು ತಮ್ಮ ಆರೋಗ್ಯದ ಹಿತ ದೃಷ್ಟಿ ಇಟ್ಟುಕೊಳ್ಳದೆ ತಂಬಾಕು ಹಾಗು ಇನ್ನಿತರ ಮದ್ಯಪಾನಗಳನ್ನು ಸೇವನೆ ಮಾಡುತ್ತಾರೆ.
ತಂಬಾಕು ಆರೋಗ್ಯಕ್ಕೆ ಒಳ್ಳೇದಲ್ಲ ಎಂದು ತಿಳಿದಿದ್ದರೂ ಸಹ ಜನರು ಅದನ್ನು ತಿನ್ನುತ್ತಾರೆ. ಇದೀಗ ತಂಬಾಕು ಮಾರಾಟ ಮಾಡುವವರಿಗೆ ಸಾರ್ವಜನಿಕವಾಗಿ ಮಾರಾಟ ಮಾಡಲು ಸರ್ಕಾರ ಪ್ರತ್ಯೇಕವಾಗಿ ಪರವಾನಗಿ ಪಡೆಯಲು ಆದೇಶ ಹೊರಡಿಸಿದೆ.