Toby: ಟೋಬಿ ಚಿತ್ರ ನೋಡಿ ಜನರು ಹೇಳಿದ್ದೇನು…? ಟೋಬಿ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು…?

ಬಿಡುಗಡೆಗೊಂಡ ಒಂದೇ ದಿನಕ್ಕೆ 'ಟೋಬಿ' ಭರ್ಜರಿ ಕಲೆಕ್ಷನ್.

Toby Movie First Day Collection: ಒಂದು ಮೊಟ್ಟೆ ಕಥೆ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾಗಿರುವ ರಾಜ್ ಬಿ ಶೆಟ್ಟಿ (Raj B. Shetty) ಅವರು ಇದೀಗ ತಮ್ಮ ಹೊಸ ಚಿತ್ರದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ರಾಜ್ ಬಿ ಶೆಟ್ಟಿ ಅವರು ನಿರ್ದೇಶನದ ಜೊತೆ ನಟನಾಗಿಯೂ ಕನ್ನಡದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೆಷನ್ ನಲ್ಲಿ ಮೂಡಿ ಬಂದ ಗರುಡ ಗಮನ ವೃಷಭ ವಾಹನ ಚಿತ್ರ ಕನ್ನಡದ ಚಿತ್ರರಂಗದಲ್ಲಿ ಬಾರಿ ಸಂಚಲನ ಮೂಡಿಸಿದೆ. ಈ ಚಿತ್ರ ರಾಜ್ ಬಿ ಶೆಟ್ಟಿ ಅವರ ಸಿನಿ ಪಯಣಕ್ಕೆ ಮಹತ್ತರ ತಿರುವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರ ನಟನೆ ಎಲ್ಲರ ಮನ ಗೆದ್ದಿದೆ.

Toby Movie First Day Collection
Image Credit: Anfotimes

ರಾಜ್ ಬಿ ಶೆಟ್ಟಿ ‘ಟೋಬಿ‘ ಚಿತ್ರ
ಇನ್ನು ಇದೀಗ ಚಂದನವನಕ್ಕೆ ರಾಜ್ ಬಿ ಶೆಟ್ಟಿ ಹೊಸ ಚಿತ್ರವನ್ನ ನೀಡಿದ್ದಾರೆ. ರಾಜ್ ಬಿ ಶೆಟ್ಟಿ ಅಭಿನಯದ ಹೊಸ ಚಿತ್ರ ‘ಟೋಬಿ’ ಆಗಸ್ಟ್ 25 ರಂದು ತೆರೆಕಂಡಿದೆ. ಇನ್ನು ಇವರ ಟೋಬಿ ಚಿತ್ರ ಟೀಸರ್ ಹಾಗೂ ಟ್ರೈಲರ್ ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಟ್ರೈಲರ್ ಮೂಲಕ ಗಮನ ಸೆಳೆದಿದ್ದ ಟೋಬಿ ಚಿತ್ರ ಇದೀಗ ರಾಜ್ಯದದ್ಯಾತ ಬಿಡುಗಡೆಗೊಂಡಿದೆ.

ರಾಜ್ ಬಿ ಶೆಟ್ಟಿ ಅಭಿಮಾನಿಗಳು ಈ ಸಿನಿಮಾಗಾಗಿ ಕಾಯುತ್ತಿದ್ದೂ ಇದೀಗ ತೆರೆ ಕಂಡ ಟೋಬಿ ಚಿತ್ರ ಭರ್ಜರಿ ರೆಸ್ಪೋನ್ಸ್ ಪಡೆಯುತ್ತಿದೆ. ರಾಜ್ ಬಿ ಶೆಟ್ಟಿ ಅವರಿಗೆ ನಾಯಕಿಯಾಗಿ ಸಂಯುಕ್ತ ಹೊರ್ನಾಡ್ ಹಾಗೂ ಚೈತ್ರ ಆಚಾರ್ ತೆರೆ ಹಂಚಿಕೊಂಡಿದ್ದಾರೆ.

Toby Movie latest update
Image Credit: Filmibeat

ರಾಜ್ ಬಿ ಶೆಟ್ಟಿ ಸಿನಿ ಪಯಣ
ಇನ್ನು ರಾಜ್ ಬಿ ಶೆಟ್ಟಿ ಅವರು ಕನ್ನಡದಲ್ಲಿ ಕೆಲವೇ ಚಿತ್ರಗಳಲ್ಲಿ ನಟಿಸಿದ್ದರು ಕೂಡ ಹೆಚ್ಚು ಮನೆಮಾತಾಗಿದ್ದಾರೆ. ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭಾ ವಾಹನ, ಗುಬ್ಬಿ ಮೇಲೆ ಬ್ರಹ್ಮಸ್ತ್ರ ಸೇರಿದಂತೆ ಇನ್ನಿತರ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ನಟಿಸಿರುವ ಪ್ರತಿ ಚಿತ್ರದಲ್ಲೂ ವಿಭಿನ್ನ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಯಾವುದೇ ರೀತಿಯ ಪಾತ್ರವನ್ನು ಕೊಟ್ಟರು ಆ ಪಾತ್ರಕ್ಕೆ ಜೀವ ತುಂಬಾ ಪ್ರತಿಭೆ ಇವರಲ್ಲಿದೆ. ಇದೀಗ ತೆರೆಕಂಡಿರುವ ಟೋಬಿ ಚಂದನವನದಲ್ಲಿ ಹೊಸ ಅಲೆ ಎಬ್ಬಿಸಲಿದೆ.

Join Nadunudi News WhatsApp Group

ಬಿಡುಗಡೆಗೊಂಡ ಒಂದೇ ದಿನಕ್ಕೆ ಭರ್ಜರಿ ಕಲೆಕ್ಷನ್
ರಾಜ್ ಬಿ ಶೆಟ್ಟಿ ಅವರು ಟೋಬಿ ಬಿಡುಗಡೆಗೂ ಮುನ್ನ ಚಿತ್ರದ ಪ್ರಮೋಷನ್ ನ ವೇಳೆ ಚಿತ್ರದ ಬಗ್ಗೆ ಸುಳಿವು ನೀಡಿದ್ದರು. ವಿಭಿನ್ನ ಕಥೆ ಆಧಾರಿತ ಟೋಬಿ ಚಿತ್ರ ಪ್ರೇಕ್ಷಕರ ಮನ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಿನಿ ಪ್ರಿಯರು ಟೋಬಿ ಚಿತ್ರಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಟೋಬಿ ಚಿತ್ರ ಮೊದಲ ದಿನವೆ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಟೋಬಿ ಚಿತ್ರ ಮೊದಲ ದಿನವೇ 2 ರಿಂದ 3 ಕೋಟಿ ಹಣ ಗಳಿಸಿದೆ. ಇನ್ನು ಮುಂದಿನಗಳಲ್ಲಿ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆಯಲು ಟೋಬಿ ಸಿದ್ಧವಾಗಿದೆ.

Join Nadunudi News WhatsApp Group