ರಾತ್ರೋ ರಾತ್ರಿ ಸ್ಟಾರ್ ಆದ ರಾನು ಮಂಡಲ್ ಈಗ ಎಲ್ಲಿದ್ದಾಳೆ ಮತ್ತು ಏನು ಮಾಡುತ್ತಿದ್ದಾಳೆ ಗೊತ್ತಾ, ದೇವರ ಆಟ ಇದೆ ನೋಡಿ.
ಸಿನಿಮಾ ಲೋಕ ಅನ್ನುವುದು ಒಂದು ರೀತಿಯಲ್ಲಿ ಮಾಯಾ ಪ್ರಪಂಚ ಎಂದು ಹೇಳಬಹುದು. ಈ ಲೋಕ ಕೆಲವರನ್ನ ದೊಡ್ಡ ಸ್ಟಾರ್ ಆಗಿ ಮಾಡಿದರೆ ಇನ್ನೂ ಕೆಲವರನ್ನ ಭಿಕ್ಷುಕರಾಗಿ ಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಕೈಯಲ್ಲಿ ಹಣ ಇದ್ದರೆ ಚಿತ್ರರಂಗದಲ್ಲಿ ಏನಾದರು ಸಾಧನೆಯನ್ನ ಮಾಡಬಹುದು ಈ ಕಾಲದಲ್ಲಿ ಎಂದು ಹೇಳಬಹುದು. ಇನ್ನು ಈಗ ವಿಷಯಕ್ಕೆ ಬರುವುದಾದರೆ ರಾನು ಮಂಡಲ್ ಯಾರಿಗೆ ಆನೆ ಗೊತ್ತಿಲ್ಲ ಹೇಳಿ. ತನ್ನ ಕಂಠದ ಮೂಲಕ ಕೆಲವು ಸಮಯಗಳ ಹಿಂದೆ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಮಹಿಳೆ ಅಂದರೆ ಅದು ರಾನು ಮಂಡಲ್ ಎಂದು ಹೇಳಿದರೆ ತಪ್ಪಾಗಲ್ಲ. ತೇರಿ ಮೇರಿ ಅನ್ನುವ ಹಾಡಿನ ಮೂಲಕ ದೊಡ್ಡ ಸಂಚಲನವನ್ನ ಸೃಷ್ಟಿ ಮಾಡಿದ ಮಹಿಳೆ ಅಂದರೆ ಅದು ರಾನು ಮಂಡಲ್ ಎಂದು ಹೇಳಬಹುದು. ರಾನು ಮಂಡಲ್ ಹಾಡಿದ ಈ ಬರಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಬೇರೆ ದೇಶದಲ್ಲಿ ಕೂಡ ಸಕತ್ ವೈರಲ್ ಆಯಿತು ಎಂದು ಹೇಳಬಹುದು.
ರೈಲು ನಿಲ್ದಾಣದಲ್ಲಿ ಹಾಡನ್ನ ಹಾಡುತ್ತಿದ್ದ ರನು ಮಾಡಲು ರಾತ್ರಿ ಬೆಳಗಾಗುವುದರಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದಳು ಎಂದು ಹೇಳಬಹುದು. ತನ್ನ ಹಾಡಿನ ಮೂಲಕ ಬಾಲಿವುಡ್ ನಲ್ಲಿ ದೊಡ್ಡ ಸಿಂಗರ್ ಆಗಿ ಗುರುತಿಸಿಕೊಂಡಳು ರಾನು ಮಂಡಲ್ ಮತ್ತು ಈಕೆಯನ್ನ ಹೆಚ್ಚಿನ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಕರೆಯಲಾಯಿತು ಎಂದು ಹೇಳಬಹುದು. ಕೆಲವು ತಿಂಗಳುಗಳ ಕಾಲ ದೊಡ್ಡ ಸ್ಟಾರ್ ಆಗಿ ಮೆರೆದಿದ್ದ ರಾನು ಮಂಡಲ್ ಜೀವನದಲ್ಲಿ ಮತ್ತೆ ಕಟ್ಟಲು ಆವರಿಸಿತು ಎಂದು ಹೇಳಬಹುದು. ಕೆಲವು ತಿಂಗಳ ಕಾಲ ಮಾದ್ಯಮದಲ್ಲಿ ಮಿಂಚಿದ ರಾನು ಮಂಡಲ್ ಈಗ ಎಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಅನ್ನುವುದರ ಬಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ರಾನು ಮಂಡಲ್ ಪಶ್ಚಿಮ ಬಂಗಾಳದವಳು.
ರೈಲ್ವೆ ನಿಲ್ದಾಣದಲ್ಲಿ ಹಾಡನ್ನ ಹಾಡುತ್ತಿದ್ದ ಈಕೆಯನ್ನ ಕರೆತಂದು ಹಿಮೇಶ್ ಅವರು ಹಾಡನ್ನ ಹಾಡಿಸಿ ದೊಡ್ಡ ಸೆಲೆಬ್ರಿಟಿ ಆಗಿ ಮಾಡಿದರು ಮತ್ತು ಈಕೆಗೆ ಹಲವು ಅಭಿಮಾನಿಗಳು ಹುಟ್ಟಿಕೊಂಡರು ಎಂದು ಹೇಳಬಹುದು. ಇನ್ನು ಕೆಲವು ಮಾಹಿತಿಗಳಿಂದ ಬಂದಿರುವ ಮಾಹಿತಿಯ ಪ್ರಕಾರ ಹಿಮೇಶ್ ಅವರು ತೇರಿ ಮೇರಿ ಹಾಡಿಗೆ ರಾನು ಮಂಡಲ್ ಗೆ ನೀಡಿದ ಸಂಭಾವನೆ ಆರು ಲಕ್ಷ ರೂಪಾಯಿ ಮತ್ತು ಸಲ್ಮಾನ್ ಒಂದು ಮನೆಯನ್ನ ಕೂಡ ಗಿಫ್ಟ್ ಆಗಿ ನೀಡದ್ದರು ಅನ್ನುವ ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡಿತ್ತು, ಆದರೆ ಅದು ಸುಳ್ಳು ಸುದ್ದಿಯಾಗಿತ್ತು. ಇನ್ನು ಕಳೆದ ವರ್ಷ ರಾನು ಮಂಡಲ್ ಆಟೋಗ್ರಾಫ್ ಗೆ ಬಂದಿದ್ದ ಒಬ್ಬ ಯುವತಿಯ ಮೇಲೆ ರಾನು ಮಂಡಲ್ ಗರಂ ಆದ ವಿಡಿಯೋ ಸಕತ್ ಹರಿದಾಡಿತ್ತು, ಎಲ್ಲವು ಸಿಕ್ಕಮೇಲೆ ರಾನುಗೆ ದುರಹಂಕಾರ ಬಂದಿದೆ ಎಂದು ಜನರು ಮಾತನಾಡಿಕೊಂಡರು.
ಇನ್ನು ಇದಾದ ಕೆಲವು ದಿನಗಳ ನಂತರ ಯಾವುದೇ ಬೇಕರಿಯ ಮುಂದೆ ರಾನು ಮಂಡಲ್ ಅಸಹಾಯಕಳಾಗಿ ನಿಂತಿದ್ದ ಫೋಟೋ ಫುಲ್ ವೈರಲ್ ಆಗಿತ್ತು, ಈಕೆಗೆ ಒಳ್ಳೆ ಶಿಕ್ಷೆಯಾಯಿತು ಎಂದು ಜನರು ಮಾತನಾಡಿಕೊಂಡರು. ಸ್ನೇಹಿತರೆ ರಾನು ಮಂಡಲ್ ಗೆ ಈಗ ಯಾವುದೇ ಅವಕಾಶ ಸಿಕ್ಕದೆ ಇದ್ದರೂ ಕೂಡ ಆಕೆ ಭಿಕ್ಷೆ ಬೇಡಿ ಜೀವನವನ್ನ ಮಾಡುತ್ತಿಲ್ಲ ಮತ್ತು ಆಕೆ ತನಗೆ ಸಿಕ್ಕ ಹಣದಿಂದ ಮತ್ತು ಕೆಲವು ಕಡೆಯಿಂದ ಬಂದ ಆಕೆ ತನ್ನ ಜೀವನವನ್ನ ಕಟ್ಟಿಕೊಂಡಿದ್ದಾಳೆ. ಬಾಲಿವುಡ್ ಅನ್ನುವ ಮಾಯೆ ಒಂದಷ್ಟು ದಿನ ಆಕೆಯನ್ನ ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದು ಮಾತ್ರ ನಿಜ. ಸ್ನೇಹಿತರೆ ರಾನು ಮಂಡಲ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.