ಕರೋನ ಆತಂಕದ ನಡುವೆ ಜನರಿಗೆ ಸಿಹಿಸುದ್ದಿ, ಒಂದೇ ದಿನದಲ್ಲಿ ಬಾರಿ ಇಳಿಕೆ ಕಂಡ ಚಿನ್ನದ ಬೆಲೆ, ಗ್ರಾಂ ಗೆ ಎಷ್ಟು ನೋಡಿ.

ದೇಶದಲ್ಲಿ ಕರೋನ ಮಹಾಮಾರಿ ಬಿಟ್ಟರೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ದಿನದಿಂದ ದಿನಕ್ಕೆ ಬಹಳ ಏರಿಕೆಯನ್ನ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕಳೆದ ಒಂದು ತಿಂಗಳಿಂದ ಚಿನ್ನದ ಬೆಲೆ ಬಹಳ ವೇಗವಾಗಿ ಹೆಚ್ಚಾಗುತ್ತಿದ್ದು ಇದು ಜನರು ಬೇಸರಕ್ಕೆ ಕಾರಣವಾಗಿತ್ತು ಎಂದು ಹೇಳಬಹುದು, ಆದರೆ ಮೇ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಬಾರಿ ಇಳಿಕೆಯತ್ತ ಮುಖವನ್ನ ಮಾಡಿದ್ದು ಜನರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಇಂದು ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಇದು ಜನರಲ್ಲಿ ಭರವಸೆಯನ್ನ ಮೂಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಏಪ್ರಿಲ್ ತಿಂಗಳಲ್ಲಿ ಆದ ಚಿನ್ನದ ಬೆಲೆಯಲ್ಲಿನ ಏರಿಕೆಯನ್ನ ಕಂಡು ಜನರು ಬಹಳ ಶಾಕ್ ಆಗಿದ್ದರು ಎಂದು ಹೇಳಬಹುದು, ಆದರೆ ಮೇ ತಿಂಗಳ ಮೊದಲ ದಿನದಲ್ಲೇ ಚಿನ್ನದ ಬೆಲೆಯಲ್ಲಿ ಆದ ಬಾರಿ ಇಳಿಕೆಯನ್ನ ಕಂಡು ಜನರು ಖುಷಿಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು. ಹಾಗಾದರೆ ಇಂದಿನ ಚಿನ್ನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ಎಷ್ಟು ಮತ್ತು ಇಂದು ಎಷ್ಟು ಇಳಿಕೆಯನ್ನ ಕಂಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.ಹೌದು ಮಾರ್ಚ್ ತಿಂಗಳ ಕೊನೆಯಲ್ಲಿ 4115 ರೂಪಾಯಿ ಇದ್ದ 22 ಕ್ಯಾರೆಟ್ ನ ಒಂದು ಫ್ರೇಮ್ ಚಿನ್ನದ ಬೆಲೆ ಏಪ್ರಿಲ್ ತಿಂಗಳಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡು 4485 ರೂಪಾಯಿ ಆಗಿತ್ತು ಮತ್ತು ಕಳೆದ ತಿಂಗಳಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಂ ಚಿನ್ನದ ಬೆಲೆ 44850 ರೂಪಾಯಿ ಆಗಿತ್ತು.

Today gold market

ಇನ್ನು ಈಗ ಮೇ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದು ಇಂದು ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 4379 ರೂಪಾಯಿ ಆಗಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆ 43790 ರೂಪಾಯಿ ಆಗಿದೆ. ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಕೆ ಮಾಡಿದರೆ ಮೇ ತಿಂಗಳ ಆರಂಭದಲ್ಲೇ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಇಳಿದಿದ್ದು ಪ್ರತಿ ಗ್ರಾಂ ಗೆ ಸುಮಾರು 106 ರೂಪಾಯಿ ಇಳಿಕೆ ಕಂಡಿದೆ ಎಂದು ಹೇಳಬಹುದು.

ಇನ್ನು ತಜ್ಞರ ಅಭಿಪ್ರಾಯದ ಪ್ರಕಾರ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರುಪೇರು ಆಗುವ ಸಾಧ್ಯತೆ ಇದ್ದು ಮುಂದಿನ ದಿನಗಳಲ್ಲಿ ಬಾರಿ ಹೆಚ್ಚಳ ಅಥವಾ ಬಾರಿ ಕಡಿಮೆ ಆಗುವ ಎರಡು ಲಕ್ಷಣ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ನಿಜ ಹೇಳಬೇಕು ಅಂದರೆ ಚಿನ್ನದ ಬೆಲೆ ಬಡಜನರ ನಿದ್ದೆಯನ್ನ ಕೆಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಷೇರು ಮಾರುಕಟ್ಟೆಯಲ್ಲಿನ ಏರಿಳಿತ ಚಿನ್ನದ ಬೆಲೆಯಲ್ಲಿನ ಇಳಿಕೆಗೆ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸ್ನೇಹಿತರೆ ಚಿನ್ನದ ಬೆಲೆಯಲ್ಲಿನ ಈ ಏರುಪೇರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Today gold market

Join Nadunudi News WhatsApp Group