Gold Price: ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಬೇಸರದ ಸುದ್ದಿ, ದಾಖಲೆಯ ಏರಿಕೆಯ ಕಂಡ ಚಿನ್ನದ ದರ.
ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಖರೀದಿಸಬೇಕೆಂದುಕೊಂಡವರಿಗೆ ಬೇಸರದ ಸುದ್ದಿ, ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ.
Today Gold Price Hike: ಚಿನ್ನದ ಬೆಲೆಯಲ್ಲಿ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಆಗಸ್ಟ್ ತಿಂಗಳ ಆರಂಭ ಸ್ವಲ್ಪ ಮಟ್ಟಿಗೆ ಖುಷಿ ನೀಡಿತ್ತು. ಹೊಸ ಹಣಕಾಸು ವರ್ಷದ ಆರಂಭದಿಂದ ಚಿನ್ನದ ದರದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿತ್ತು. ಚಿನ್ನ ದಿನ ಕಳೆಯುತ್ತಿದ್ದಂತೆ ದುಬಾರಿಯಾಗುತ್ತಿತ್ತು. ಆದರೆ ಆಗಸ್ಟ್ ಆರಂಭದಲ್ಲಿ ಸತತ ಎರಡು ವಾರಗಳ ಇಳಿಕೆ ಕಂಡಿರುವ ಚಿನ್ನದ ಬೆಲೆ ಇದೀಗ ಮತ್ತೆ ಏರಿಕೆಯತ್ತ ಸಾಗುತ್ತಿದೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ವರಮಹಾಲಕ್ಷ್ಮಿಯ ವಿಶೇಷ ದಿನದಂದು ಚಿನ್ನದ ಬೆಲೆಯಲ್ಲಿ ಏರಿಕೆ
ನಿನ್ನೆ ಕೂಡ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದ್ದು. ನಿನ್ನೆ 100 ರೂ. ಏರಿಕೆ ಕಂಡ ಚಿನ್ನ ಇಂದು ಮತ್ತೆ 200 ರೂ. ಏರಿಕೆಯಾಗಿದೆ. ಮತ್ತೆ ಚಿನ್ನದ ದರ ಏರಿಕೆಯತ್ತ ಸಾಗುತ್ತಿದೆ. ಚಿನ್ನದ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಇನ್ನು ವರಮಹಾಲಕ್ಷ್ಮಿ ಹಬ್ಬಕ್ಕೆ ಸಾಕಷ್ಟು ಜನರು ಚಿನ್ನ ಖರೀದಿಸಬೇಕು ಎನ್ನುವ ಹಂಬಲದಲ್ಲಿರುತ್ತಾರೆ. ಆದರೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬದ ವಿಶೇಷದಂದು ಚಿನ್ನದ ಬೆಲೆ ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5450 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 20 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನ 54,300 ರೂ. ಗೆ ಲಭ್ಯವಾಗಿತ್ತು.
ಇಂದು ಹತ್ತು ಗ್ರಾಂ ಚಿನ್ನದ ಬೆಲೆ 54,500 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,440 ಇದ್ದು, ಇಂದು 43,600 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿದ್ದು, ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2000 ರೂ. ಏರಿಕೆಯಾಗುವ ಮೂಲಕ ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,45,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5945 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 22 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,230 ಇದ್ದು, ಇಂದು 59,450 ರೂ. ಆಗಿದೆ. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,384 ಇದ್ದು, ಇಂದು 47,560 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 176 ರೂ. ಹಾಗೂ ಹತ್ತು ಗ್ರಾಂ ಚಿನ್ನದಲ್ಲಿ 220 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2200 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 5,94,500 ರೂ. ತಲುಪಿದೆ.