Gold Price: ಆಭರಣ ಪ್ರಿಯರಿಗೆ ಬೇಸರದ ಸುದ್ದಿ, ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ.
ನಿನ್ನೆ ಇಳಿಕೆ ಕಂಡ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಆಗಿದೆ.
Today gold Price Hike: ಪ್ರತಿ ತಿಂಗಳ ಆರಂಭದಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಸತತ ಏರಿಕೆಯಾಗುತ್ತದೆ. ಜುಲೈ ತಿಂಗಳ ಆರಂಭದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಆದರೆ ಹಲವು ಬಾರಿ ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆ (Gold Price) ಏರಿಕೆಯಾದರೆ ಬರೋಬ್ಬರಿ 400 ರಿಂದ 700 ರೂ. ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಇಳಿಕೆಯ ಪ್ರಮಾಣ ಕಡಿಮೆ ಇರುತ್ತದೆ.
ಇಂದು ಮತ್ತೆ 200 ರೂ. ಏರಿಕೆ ಕಂಡ ಚಿನ್ನ
ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಚಿನ್ನದ ಬೆಲೆಯೂ ಸ್ಥಿರತೆ ಕಂಡು ಒಂದಿತ್ತು. ಆದರೆ ಇಂದು ಹತ್ತು ಗ್ರಾಂ ಚಿನ್ನದಲ್ಲಿ ಮತ್ತೆ 200 ರೂ. ಏರಿಕೆಯಾಗಿದೆ. ಇದೀಗ ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ತಿಳಿಯೋಣ.
22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ (22 Carat Gold Rate)
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 5,465 ರೂ. ಆಗಿದೆ. ಇಂದು ಒಂದು ಗ್ರಾಂ ಚಿನ್ನದಲ್ಲಿ 20 ರೂ. ಹಾಗೂ ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 160 ಏರಿಕೆಯಾಗಿದೆ.
ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 200 ರೂ. ಏರಿಕೆಯಾಗಿದ್ದು, ಇಂದು ಹತ್ತು ಗ್ರಾಂ ಚಿನ್ನದ ಬೆಲೆ 54,650 ರೂ. ಆಗಿದೆ. ನಿನ್ನೆ ಹತ್ತು ಚಿನ್ನ 54,450 ರೂ. ಗೆ ಲಭ್ಯವಾಗಿತ್ತು. ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 43,560 ಇದ್ದು, ಇಂದು 43,720 ರೂ. ಆಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2000 ರೂ. ಏರಿಕೆಯಾಗಿದೆ. ಇಂದಿನ ನೂರು ಗ್ರಾಂ ಚಿನ್ನದ ಬೆಲೆ 5,46,500 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ (24 Carat Gold Rate)
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,962 ರೂ. ಆಗಿದೆ. ಇಂದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 210 ರೂ. ಏರಿಕೆಯಾಗಿದೆ. ನಿನ್ನೆ ಹತ್ತು ಗ್ರಾಂ ಚಿನ್ನದ ಬೆಲೆ 59,410 ಇದ್ದು, ಇಂದು 59,620 ರೂ. ಆಗಿದೆ.
ನಿನ್ನೆ ಎಂಟು ಗ್ರಾಂ ಚಿನ್ನದ ಬೆಲೆ 47,528 ಇದ್ದು, ಇಂದು 47,696 ರೂ. ಆಗಿದೆ. ಇಂದು ಎಂಟು ಗ್ರಾಂ ಚಿನ್ನದ ಬೆಲೆಯಲ್ಲಿ 168 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನದ ಬೆಲೆಯಲ್ಲಿ 2,100 ರೂ. ಏರಿಕೆಯಾಗಿದ್ದು, ನೂರು ಗ್ರಾಂ ಚಿನ್ನದ ಬೆಲೆ ಇಂದು 5,96,200 ರೂ. ಗೆ ತಲುಪಿದೆ.