Toll Waiting: ಇದಕ್ಕಿಂತ ಹೆಚ್ಚು ಸಮಯ ಟೋಲ್ ಗೇಟಿನಲ್ಲಿ ಕಾದರೆ ಟೋಲ್ ಕಟ್ಟುವಂತಿಲ್ಲ, ಕೇಂದ್ರದಿಂದ ಹೊಸ ರೂಲ್ಸ್.

ಇನ್ನುಮುಂದೆ ಟೋಲ್ ನಲ್ಲಿ ಇಂತಹ ಜನರು ತೆರಿಗೆ ಪಾವತಿಸದೇ ಹೋಗಬಹುದಾಗಿದೆ.

Toll Plaza Waiting Time: ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆ ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳನ್ನು ಬದಲಾಯಿಸಿದ್ದಾರೆ. Toll  ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ.

ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್  (Fastag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ. ಇದೀಗ ಟೋಲ್ ಸಂಗ್ರಹಣೆಯಲ್ಲಿ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಇನ್ನುಮುಂದೆ ಟೋಲ್ ನಲ್ಲಿ ಇಂತಹ ಜನರು ತೆರಿಗೆ ಪಾವತಿಸದೇ ಹೋಗಬಹುದಾಗಿದೆ.

toll plaza waiting time
Image Credit: Financialexpress

ಟೋಲ್ ಪ್ಲಾಜಾ ಎಂದರೆ…
ಟೋಲ್ ತೆರಿಗೆಯನ್ನು NHAI ಅಂದರೆ ಹೈವೇ ಅಥಾರಿಟಿ ಆಫ್ ಇಂಡಿಯಾ ಸಂಗ್ರಹಿಸುತ್ತದೆ. ಎಷ್ಟು ತೆರಿಗೆಯನ್ನು ಪಾವತಿಸಬೇಕು ಎನ್ನುದು  ರಸ್ತೆಯ ಸ್ಥಿತಿ, ರಸ್ತೆಯ ದೂರ, ವಾಹನಗಳನ್ನು ಅವಲಂಬಿಸಿರುತ್ತದೆ. ಇತ್ತೀಚಿಗೆ ಟೋಲ್ ಸಂಗ್ರಹಣೆಯಲ್ಲಿ  Fastag ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ.

ಸೇವಾ ಸಮಯ ಎಂದರೆ…
ಟೋಲ್ ತೆರಿಗೆಯನ್ನು ಸಂಗ್ರಹಿಸಿದ ನಂತರ ವಾಹನವು ಟೋಲ್ ಬೂತ್‌ನಿಂದ ಆಚೆಗೆ ಚಲಿಸುವ ಸಮಯವನ್ನು ಸೇವಾ ಸಮಯ ಎನ್ನಲಾಗುತ್ತದೆ. ಟೋಲ್ ಬೂತ್‌ನಲ್ಲಿ ವಾಹನಗಳು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವುದು ಈ ನಿಯಮದ ಉದ್ದೇಶವಾಗಿದೆ. ಈಗ ಈ ಹೊಸ ನಿಯಮದ ಪ್ರಕಾರ ಟೋಲ್ ಪ್ಲಾಜಾದಲ್ಲಿ ವಾಹನಗಳ ಸಾಲು 100 ಮೀಟರ್ ಗಿಂತ ಹೆಚ್ಚಿರಬಾರದು.

Toll Plaza New Rules
Image Credit: Lawtrend

ಇದಕ್ಕಿಂತ ಹೆಚ್ಚು ಸಮಯ ಟೋಲ್ ಗೇಟಿನಲ್ಲಿ ಕಾದರೆ ಟೋಲ್ ಕಟ್ಟುವಂತಿಲ್ಲ
ಭಾರತದ ಪ್ರತಿಯೊಂದು ಟೋಲ್ ಪ್ಲಾಜಾದಲ್ಲಿ ವಾಹನಗಳ ಸೇವಾ ಸಮಯ 10 ಸೆಕೆಂಡುಗಳಿಗಿಂತ ಹೆಚ್ಚಿರಬಾರದು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಒಂದು ವೇಳೆ 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ವಾಹನವನ್ನು ಟೋಲ್‌ನಲ್ಲಿ ನಿಲ್ಲಿಸಿದರೆ ಅವರು ಯಾವುದೇ ರೀತಿಯ ಟೋಲ್ ಕಟ್ಟುವಂತಿಲ್ಲ.

Join Nadunudi News WhatsApp Group

ಟೋಲ್ ಪ್ಲಾಜಾದಲ್ಲಿ ವಾಹನಗಳ ಸಾಲು 100 ಮೀಟರ್ ಮೀರಬಾರದು. ವಾಹನಗಳ ಸಾಲು ಹೆಚ್ಚಾದಂತೆ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. ಪ್ರತಿ ಟೋಲ್ ಬೂತ್ ನಿಂದ 100 ಮೀಟರ್ ದೂರದಲ್ಲಿ ಹಳದಿ ಪಟ್ಟಿ ಇರಿಸಬೇಕು.

Join Nadunudi News WhatsApp Group