Toll Tax: ಇನ್ನುಮುಂದೆ ಟೋಲ್ ಗೇಟ್ ನಲ್ಲಿ ಇದಕ್ಕಿಂತ ಹೆಚ್ಚು ಸಮಯ ನಿಲ್ಲುವಂತಿಲ್ಲ, ಕೇಂದ್ರದ ಇನ್ನೊಂದು ಆದೇಶ.

ಇನ್ನುಮುಂದೆ ಟೋಲ್ ಪಾವತಿಯ ಸಮಯದಲ್ಲಿ ವಾಹನ ಸವಾರರು ಟೋಲ್ ಪ್ಲಾಜಾದ ಮುಂದೆ ಕಾಯಬೇಕಿಲ್ಲ.

Toll Plaza Waiting Time: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿರುವ ಹಿನ್ನಲೆ ಟೋಲ್ ಸಂಗ್ರಹಣೆಯಲ್ಲಿ ಸಾಕಷ್ಟು ನಿಯಮಗಳನ್ನು ಬದಲಾಯಿಸಿದ್ದಾರೆ. ಟೋಲ್ (Toll)  ಸಂಗ್ರಹಣೆಯಲ್ಲಿ ಸಾಕಷ್ಟು ರೀತಿಯ ಸುಲಭ ವಿಧಾನವನ್ನು ಬಳಸಲಾಗುತ್ತದೆ. ಟೋಲ್ ಸಂಗ್ರಹಣೆಯ ವಿಧಾನದಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತದೆ.

ಇನ್ನು ಟೋಲ್ ಸಂಗ್ರಹಣೆಯಲ್ಲಿ ಫಾಸ್ಟ್ ಟ್ಯಾಗ್  (FASTag) ನ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗಿದೆ. ಇದೀಗ ಟೋಲ್ ಸಂಗ್ರಹಣೆಯಲ್ಲಿ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಟೋಲ್ ತೆರಿಗೆಗೆ ಸಂಬಂಧಿಸಿದಂತೆ ಹಲವು ಬದಲಾವಣೆಯನ್ನು ಜಾರಿಗೊಳಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.

Reduction in toll plaza waiting time
Image Credit: News18

ಟೋಲ್ ಸಂಗ್ರಹಣೆಗೆ ಹೊಸ ತಂತ್ರಜ್ಞಾನ
ಫಾಸ್ಟ್ ಟ್ಯಾಗ್ ನ ನಂತರ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆ ಕೂಡ ಜಾರಿಗೊಳಿಸಲಾಗಿದೆ. ಈ ಎಲ್ಲ ತಂತ್ರಜ್ಞಾನಗಳ ಮೂಲಕ ಟೋಲ್ ಸಂಗ್ರಹಣೆ ಸುಲಭವಾಗುತ್ತಿದೆ. ವಿವಿಧ ರೀತಿಯ ತಂತ್ರಜ್ಞಾನಗಳು ಜಾರಿಯಾಗಿದ್ದರು ಕೂಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಬೀಳುತ್ತಿಲ್ಲ. ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಟೋಲ್ ಸಂಗ್ರಹಣೆಗೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುವುದರ ಜೊತೆಗೆ ಇದೀಗ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದೆ.

ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆ
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆ ಜಾರಿಗೊಳಿಸುದರ ಬಗ್ಗೆ ಮಾಹಿತಿ ನೀಡಿದ್ದರು. ತಡೆರಹಿತ ಟೋಲ್ ಸಂಗ್ರಹಣಾ ವ್ಯವಸ್ಥೆಯ ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಮುಗಿಯುತ್ತಿದ್ದಂತೆ ತಕ್ಷಣ ಈ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಪ್ರಯಾಣದ ಸಮಯದಲ್ಲಿ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ದೇಶದ ರಸ್ತೆಗಳಲ್ಲಿ ಕ್ರಮಿಸುವ ದೂರದ ಆಧಾರದ ಮೇಲೆ ಟೋಲ್ ಪಾವತಿ ವ್ಯವಸ್ಥೆಯನ್ನು ಸಹ ಜಾರಿಗೆ ತರುವ ಬಗ್ಗೆ ನಿತಿನ್ ಗಡ್ಕರಿ ಅವರು ಈ ಹಿಂದೆ ಮಾಹಿತಿ ನೀಡಿದ್ದರು.

Join Nadunudi News WhatsApp Group

Toll Plaza Waiting Time
Image Credit: Indiatimes

ಟೋಲ್ ಪ್ಲಾಜಾದಲ್ಲಿ ಕಾಯುವ ಸಮಯದಲ್ಲಿ ಇಳಿಕೆ
ಟೋಲ್ ಪಾವತಿಯ ಸಮಯದಲ್ಲಿ ವಾಹನ ಸವಾರರು ಟೋಲ್ ಪ್ಲಾಜಾದ ಮುಂದೆ ಕಾಯಬೇಕಾಗುತ್ತದೆ. ಈ ವರೆಗೆ ವಾಹನ ಸವಾರರು ಟೋಲ್ ಪ್ಲಾಜಾದ ಮುಂದೆ ಸರಾಸರಿ 73 ಸೆಕೆಂಡ್ ಗಳ ಕಾಲ ಕಾಯಬೇಕಿತ್ತು. ಆದರೆ ಕೇಂದ್ರ ಸರ್ಕಾರ ಇದೀಗ ಈ ಸಮಯವನ್ನು ಕಡಿತಗೊಳಿಸಿದೆ. ಈ ಮೂಲಕ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದೆ.

ಟೋಲ್ ಪ್ಲಾಜಾದ ಮುಂದೆ ಕಾಯುವ ಸಮಯವನ್ನು 73 ಸೆಕೆಂಡ್ ಗಳಿಂದ 47 ಸೆಕೆಂಡುಗಳಿಗೆ ಇಳಿಸಲಾಗಿದೆ. ಈ ಬಗ್ಗೆ ರಸ್ತೆ ಮತ್ತು ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಶುಲ್ಕ ಪ್ಲಾಜಾಗಳಲ್ಲಿ ವಾಹನಗಳು ನಿಗದಿತ ಅವಧಿ ಮೀರಿ ನಿಂತರೆ ಬಳಕೆದಾರರ ಶುಲ್ಕದಿಂದ ವಿನಾಯಿತಿ ನೀಡಲು ಯಾವುದೇ ಅವಕಾಶ ಇಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group