Rakhi Sawant: 15 ದಿನದಲ್ಲಿ ಬೆಳೆಯಬಹುದು ಟೊಮೆಟೊ, ಟೊಮೆಟೊ ಬೆಳೆಸುವ ವಿಧಾನ ಹೇಳಿಕೊಟ್ಟ ರಾಖಿ ಸಾವಂತ್.
ಟೊಮೆಟೊ ಬೆಳೆಯುವುದು ಹೇಗೆ ಅನ್ನುವುದನ್ನ ಅಭಿಮಾನಿಗಳಿಗೆ ಕಲಿಸಿಕೊಟ್ಟ ನಟಿ ರಾಖಿ ಸಾವಂತ್.
Tomato Grown Rakhi Sawant: ಬಾಲಿವುಡ್ ನ ಖ್ಯಾತ ನಟಿ ರಾಖಿ ಸಾವಂತ್ (Rakhi Sawant) ಈ ಹಿಂದೆ ತಮ್ಮ ಮದುವೆಯ ವಿಚಾರವಾಗಿ ಸಾಕಷ್ಟು ಬಾರಿ ಸುದ್ದಿಯಾಗಿದ್ದರು. ಮದುವೆಯ ವಿವಾದ ಮುಗಿದ ಬಳಿಕ ನಟಿ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದರು.
ಇನ್ನು ಆಗಾಗ ನಟಿ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಲೇ ಇರುತ್ತಾರೆ. ಯಾವುದಾದರು ಸಣ್ಣ ವಿಷಯದ ಕುರಿತಾಗಿ ನಟಿ ನೆಟ್ಟಿಗರಿಂದ ಟ್ರೋಲ್ ಗೆ ಗುರಿಯಾಗುತ್ತಾರೆ. ಇದೀಗ ನಟಿ ಟೊಮೆಟೊ (Tomato) ವಿಚಾರವಾಗಿ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ಟೊಮೆಟೊ ಬೆಳಸಲು ಮುಂದಾದ ಬಾಲಿವುಡ್ ಬೆಡಗಿ ರಾಖಿ ಸಾವಂತ್
ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ ಬಹಳ ದುಬಾರಿಯಾಗಿದೆ. ದಿನನಿತ್ಯದ ಪದಾರ್ಥಕ್ಕೆ ಬಳಸುವ ಟೊಮೆಟೊ ಇದೀಗ ಕೈಗೆಟಕದಂತಾಗಿದೆ. ಟೊಮೆಟೊ ಕೆಜಿ ಇದೀಗ 100 ರಿಂದ 150 ರೂ. ತಲುಪುತ್ತಿದೆ. ಹೀಗಿರುವಾಗ ಟೊಮೆಟೊ ಖರೀದಿ ಜನರಿಗೆ ಕಷ್ಟವಾಗಿದೆ. ಆದರೆ ನಟಿ ರಾಖಿ ಸಾವಂತ್ ಸ್ವತಃ ತಾವೇ ಟೊಮೆಟೊ ಬೆಳೆಯಲು ಮುಂದಾಗಿದ್ದಾರೆ. ಟೊಮೆಟೊ ಬೆಳೆಸುತ್ತಿರುವ ವಿಡಿಯೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟೊಮೆಟೊ ಬೆಳೆಯಲು ಸಿಂಪಲ್ ವಿಧಾನ ತಿಳಿಸಿದ ನಟಿ
ಟೊಮೆಟೊ ಬೆಲೆ ದುಬಾರಿಯಾಗುತ್ತಿದೆ. ಟೊಮೆಟೊ ಬೆಳೆದ ರೈತರು ಖುಷಿಯಲ್ಲಿದ್ದಾರೆ. ಟೊಮೆಟೊ ರಕ್ಷಿಸಿಕೊಳ್ಳಲು ಅಂಗಡಿಗಳಲ್ಲಿ ಸಿಸಿ ಟಿವಿ ಗಳನ್ನು ಅಳವಡಿಸಿದ್ದಾರೆ. ಇನ್ನು ನಟಿ ರಾಖಿ ಸಾವಂತ್ ಟೊಮೆಟೊ ಬೆಲೆ ಏರಿಕೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಾಗಿ ಟೊಮೆಟೊ ಬೆಳೆಯುವುದು ಹೇಗೆ ಎಂದು ಕಲಿತು ಕೇವಲ ಹದಿನೈದೇ ದಿನಗಳಲ್ಲಿ ಟೊಮೆಟೊ ಬೆಳೆಯಬಹುದು ಎಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೇವಲ ಹದಿನೈದೇ ದಿನದಲ್ಲಿ ಟೊಮೆಟೊ ಬೆಳೆಯಬಹದು
ವಿಡಿಯೋದಲ್ಲಿ ರಾಖಿ ಸಾವಂತ್ ಪಾಟ್ ನಲ್ಲಿ ಕಾಲುಭಾಗ ಮಣ್ಣು ತುಂಬಿಸಿ, ನಂತರ ಆ ಪಾಟ್ ನಲ್ಲಿ ಐದಾರು ಟೊಮೆಟೊ ಹಾಕಿ ಅದರ ಮೇಲೆ ಟೊಮೆಟೊ ಗಿಡವನ್ನು ನೆಟ್ಟಿದ್ದಾರೆ. ಕೇವಲ ಹದಿನೈದೇ ದಿನಗಳಲ್ಲಿ ಟೊಮೆಟೊ ಕೊಡುತ್ತದೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಗಿಡವನ್ನು ಆರೈಕೆ ಮಾಡಲು ಒಬ್ಬ ಹುಡುಗನನ್ನು ನೇಮಿಸಿಕೊಂಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ರಾಖಿ ಸಾವಂತ್ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಾರಿ ಮೆಚ್ಚುಗೆ ಪಡೆಯುತ್ತಿದೆ. ಇನ್ನು ಕೆಲವರು ಗಿಡವನ್ನು ಆರೈಕೆ ಮಾಡಲು ಹುಡುಗನನ್ನು ನೇಮಿಸಿಕೊಂಡಿರುವುದಕ್ಕೆ ಟ್ರೋಲ್ ಮಾಡುತ್ತಿದ್ದಾರೆ.