Tomato Price: ರಾಜ್ಯದಲ್ಲಿ ಐತಿಹಾಸಿಕ ಏರಿಕೆ ಕಂಡ ಟೊಮೇಟೊ ಬೆಲೆ, ಬೇಸರ ಹೊರಹಾಕಿದ ಗ್ರಾಹಕರು

ಮಾರುಕಟ್ಟೆಯಲ್ಲಿ 100 ರೂ. ಗಡಿ ದಾಟಿದ ಟೊಮಟೊ ಬೆಲೆ

Tomato Price Hike: ಸದ್ಯ ರಾಜ್ಯದಲ್ಲಿ ಒಂದರ ಮೇಲೆ ಮತ್ತೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಲೇ ಇದೆ. ಜನಸಾಮನ್ಯರು ಬೆಲೆ ಏರಿಕೆಯಿಂದ ರೋಸಿಹೋಗಿದ್ದಾರೆ. ಗ್ಯಾಸ್ ಬೆಲೆಯಿಂದ ಹಿಡಿದು ದಿನನಿತ್ಯ ಬಳಸುವ ವಸ್ತುಗಳ ಬೆಲೆ ಕೂಡ ಎರಿಕೆಯಾಗುತ್ತಿದೆ. ಇನ್ನು ರಾಜ್ಯ ಸರ್ಕಾರ ಮೊನ್ನೆಯಷ್ಟೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸುತ್ತಿದೆ.

ಪೆಟೋಲ್ ಡೀಸೆಲ್ ಬೆಲೆ ಹೆಚ್ಚಳವಾದಾಗಲೇ ರಾಜ್ಯದ ಮಹಿಳೆಯರು ಆಕ್ರೋಶ ಹೊರಹಾಕಿದ್ದರು. ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಗುತ್ತಿದ್ದನಂತೆ ದಿನ ನಿತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುತ್ತದೆ ಎನ್ನುವುದು ಗೃಹಿಣಿಯರಿಗೆ ತಿಳಿದಿತ್ತು. ಅದರಂತೆ ಇದೀಗ ಮಾರುಕಟ್ಟೆಯಲ್ಲಿ ಟೊಮೇಟೊ ಮತ್ತು ಈರುಳ್ಳಿ ದರ ದಿಢೀರ್ ಏರಿಕೆಯಾಗಿದೆ.

Tomato Price Hike
Image Credit: India

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೇ ಈ ತರಕಾರಿ ಬೆಲೆ ಏರಿಕೆ
ರಾಜ್ಯದ ಜನತೆಗೆ ಮೊದಲೇ ಹಣದುಬ್ಬರತೆಯ ಪರಿಣಾಮವನ್ನು ಎದಿರಿಸುತ್ತಿದ್ದರೆ. ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದಾಗಿನಿಂದ ಒಂದಲ್ಲ ಒಂದು ವಸ್ತುವಿನ ಬೆಳೆಯಲಿ ಹೆಚ್ಚಳ ಆಗುತ್ತಾ ಬಂದಿದೆ. ಬೆಲೆ ಏರಿಕೆಯಿಂದ ರೋಸಿ ಹೋದ ಜನರು ಉಚಿತ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾಗಿ ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಎನ್ನಬಹುದು. ಕಳೆದ ಹಲವು ತಿಂಗಳ ಹಿಂದೆ ದಾಖಲೆಯ ಏರಿಕೆಯನ್ನು ಕಂಡ ಟೊಮಟೊ ಬೆಲೆ ಇದೀಗ ಮತ್ತೆ ದಿಢೀರ್ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ 100 ರೂ. ಗಡಿ ದಾಟಿದ ಟೊಮಟೊ ಬೆಲೆ
ಸದ್ಯ ಮಾರುಕಟ್ಟೆಯಲ್ಲಿ ಟೊಮೇಟೊ ಬೆಲೆ ಕೆಜಿಗೆ 100 ರೂ. ಆಗಿದೆ. ಈರುಳ್ಳಿ ಬೆಲೆ ಕೆಜಿಗೆ 60 ರೂ. ಏರಿಕೆಯಾಗಿದ್ದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಮಳೆಯಿಂದಾಗಿ ಟೊಮೆಟೊ ಸರಿಯಾಗಿ ಬೆಳೆದಿಲ್ಲ. ಹೀಗಾಗಿ ಟೊಮೆಟೊ ಬೆಲೆ ಕೆಜಿಗೆ 100 ರೂ. ತಲುಪಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಟೊಮಟೊ ಈರುಳ್ಳಿ ಬೆಲೆ ಕೇಳಿ ಜನಸಾಮಾನ್ಯರು ಅಚ್ಚರಿ ಪಡುತ್ತಿದ್ದಾರೆ.

Tomato Price Hike News
Image Credit: Opindia

Join Nadunudi News WhatsApp Group

Join Nadunudi News WhatsApp Group