Tomato Price: ಮುಂದಿನ 1 ತಿಂಗಳಲ್ಲಿ ಟೊಮೆಟೊ ದರ ಎಷ್ಟಾಗಲಿದೆ ಗೊತ್ತಾ…? ಟೊಮೆಟೊ ಬೆಲೆ ಬಗ್ಗೆ RBI ಹೇಳಿದ್ದೇನು.
ಮುಂದಿನ ತಿಂಗಳಲ್ಲಿ ಟೊಮೆಟೊ ಬೆಲೆ ಎಷ್ಟಾಗಲಿದೆ ಎಂದು ತಿಳಿದು ಜನರು ಆತಂಕ ಹೊರಹಾಕಿದ್ದಾರೆ.
Tomato Price Hike: ಪ್ರಸ್ತುತ ದೇಶದಲ್ಲಿ ಟೊಮೆಟೊ (Tomato) ದರ ಸತತ ಏರಿಕೆ ಕಾಣುತ್ತಿದೆ. ಪ್ರತಿ ನಿತ್ಯ ಅಡುಗೆಗೆ ಬಳಸಲಾಗುವ ಟೊಮೆಟೊ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದ್ದು ದೇಶದ ಹಲವು ಪ್ರದೇಶಗಳಲ್ಲಿ ಟೊಮೊಟೊ ದರ 250 ಕ್ಕಿಂತ ಅಧಿಕವಾಗಿದೆ. ಪ್ರಸ್ತುತ ಟೊಮೊಟೊ ದರ ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸುತ್ತಿದೆ.
ಕಳೆದ ತಿಂಗಳಿನಿಂದ ಟೊಮೆಟೊ ದರ ಏರುಗತಿಯಲ್ಲಿ ಸಾಗುತ್ತಿದೆ. ಟೊಮೆಟೊ ದರದ ಏರಿಕೆಯು ಖರೀದಿದಾರರಿಗೆ ಕಷ್ಟವೆನಿಸಿದರೂ ಟೊಮೆಟೊ ಬೆಳೆದವರು ಹಾಗೂ ಮಾರಾಟಗಾರರಿಗೆ ಹೆಚ್ಚಿನ ಲಾಭವನ್ನು ನೀಡುತ್ತಿದೆ.
ಇನ್ನು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಕೆಂಪು ಸುಂದರಿಯ ವಿಡಿಯೋಗಳು ಹೆಚ್ಚುತ್ತಿದೆ. ಸ್ಟಾರ್ ಸೆಲೆಬ್ರೆಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಟೊಮೆಟೊ ದರದ ಏರಿಕೆಯ ಬಗ್ಗೆ ವಿಡಿಯೋ ಮಾಡುತ್ತಿದ್ದಾರೆ. ಟೊಮೆಟೊ ದರ ದಿಡೀರ್ ಏರಿಕೆ ಎಲ್ಲರಲ್ಲೂ ಅಘಾತಉಂಟುಮಾಡಿದೆ. ಸತತ ಟೊಮೆಟೊ ದರ ಮತ್ತಷ್ಟು ಏರಿಕೆ ಕಂಡಿದೆ. ಹೆಚ್ಚಿನ ಪ್ರದೇಶದಲ್ಲಿ ಟೊಮೆಟೊ ಕೈಗೆಟುಕದಂತಾಗಿದೆ.
ಟೊಮೆಟೊ ದರ 300 ಕ್ಕೆ ತಲುಪುವ ಸಾಧ್ಯತೆ
ದೇಶದ ವಿವಿದೆಡೆ ಮಳೆ ಮತ್ತಿತರ ಕಾರಣಗಳಿಂದ ಟೊಮೆಟೊ ಬೆಲೆ ಕಡಿಮೆ ಪೂರೈಕೆಯಾಗುತ್ತಿದೆ. ಈ ಕಾರಣದಿಂದ ದೆಹಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗಿದೆ. ದೆಹಲಿ ಸಗಟು ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ದರ ಕೆಜಿಗೆ 220 ರೂ. ತಲುಪಿದೆ. ಕೆಲವೊಂದೆಡೆ ಕೆಜಿಗೆ 250 ಕೂಡ ದಾಟಿದೆ.ಕಡಿಮೆ ಪೊರೈಕೆಯ ಕಾರಣ ಟೊಮೆಟೊ ದರ 300 ರೂ. ತಲುಪುವ ಸಾಧ್ಯತೆ ಇದೆ ಎಂದು ಸಗಟು ಮಾರುಕಟ್ಟೆ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಟೊಮೆಟೊ ದರದ ಕುರಿತು ಆರ್ ಬಿಐ ಹೇಳಿಕೆ
ಜುಲೈ 2023 ರ ಪ್ರಕಾರ, ದೇಶದ ವಿವಿಧ ಭಾಗಗಳಲ್ಲಿ ಟೊಮೆಟೊ ಬೆಲೆಗಳು ಕೆಜಿಗೆ 250 ರೂ. ಗೆ ತಲುಪಿದೆ. ಅಡುಗೆ ಮನೆಯ ಅಗತ್ಯವೂ ಮನೆಗಳ ಬಜೆಟ್ ಜೇಬಿಗೆ ಕತ್ತರಿ ಹಾಕುವ ಮೂಲಕ ವ್ಯಾಪಕ ಗಮನವನ್ನು ಪಡೆದುಕೊಂಡಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ.
ಸುಮಾರು 2.6 ರಷ್ಟು ಪೋರ್ಟ್ ನೈಟ್ ಅವಧಿ (ಅಂದರೆ ಒಟ್ಟಾರೆ 39 ದಿನಗಳು) ಟೊಮೆಟೊ ಬೆಲೆ ಸರಿಸುಮಾರು 40 ರೂ. ಗಿಂತ ಹೆಚ್ಚಿರುತ್ತದೆ ಹಾಗೂ 10 ರಷ್ಟು ಪೋರ್ಟ್ ನೈಟ್ ಅವಧಿಯಲ್ಲಿ ಟೊಮೆಟೊ ಬೆಲೆ ಸರಾಸರಿ 20 ರೂ. ಗಿಂತ ಕಡಿಮೆ ಇರುತ್ತದೆ ಎಂದು ಆರ್ ಬಿಐ ಉಲ್ಲೇಖಿಸಿದೆ.