Tomato Subsidy: ಟೊಮೇಟೊ ಮೇಲೆ ಸಿಗಲಿದೆ ಸಬ್ಸಿಡಿ, ಕೇಂದ್ರ ಸರ್ಕಾರದ ಇನ್ನೊಂದು ದೊಡ್ಡ ಯೋಜನೆ ಬಿಡುಗಡೆ.
ಟೊಮೇಟೊ ಬೆಲೆಯ ಇಳಿಕೆಯ ನಿರೀಕ್ಷೆಯದ್ದ ಜನರಿಗೆ ಸಿಹಿ ಸುದ್ದಿ, ಇನ್ನುಮುಂದೆ ಟೊಮೆಟೊ ಮೇಲು ಸಬ್ಸಿಡಿ ಸಿಗಲಿದೆ.
Tomato Subsidy Price: ಪ್ರಸ್ತುತ ದೇಶದಲ್ಲಿ ಟೊಮೆಟೊ(Tomato) ಬೆಲೆ ಗಣನೀಯ ಏರಿಕೆ ಕಾಣುತ್ತಿದೆ. ಪ್ರತಿ ನಿತ್ಯ ಅಡುಗೆಗೆ ಬಳಸಲಾಗುವ ಟೊಮೆಟೊ ಖರೀದಿ ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ದೇಶದ ಹಲವು ಪ್ರದೇಶಗಳಲ್ಲಿ ಟೊಮೊಟೊ ದರ 200 ಕ್ಕಿಂತ ಅಧಿಕವಾಗಿದೆ.
ಪ್ರಸ್ತುತ ಟೊಮೊಟೊ ಗರಿಷ್ಟ ದರ ಕೆಲವು ಪ್ರದೇಶಗಳಲ್ಲಿ 250 ರೂ. ತಲುಪಿದೆ. ಜನಸಾಮಾನ್ಯರು ಟೊಮೆಟೊ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಟೊಮೇಟೊ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಇದೀಗ ಸಿಹಿ ಸುದ್ದಿ ಲಭಿಸಿದೆ. ಇನ್ನುಮುಂದೆ ಟೊಮೆಟೊ ಮೇಲು ಸಬ್ಸಿಡಿ ಸಿಗಲಿದೆ.
ಇನ್ನುಮುಂದೆ ಟೊಮೇಟೊ ಮೇಲೆ ಸಿಗಲಿದೆ ಸಬ್ಸಿಡಿ
ಇತ್ತೀಚೆಗಷ್ಟೇ ಆರ್ ಬಿಐ ಟೊಮೆಟೊ ದರದ ಏರಿಕೆಯ ಕುರಿತು ಹೇಳಿಕೆ ನೀಡಿತ್ತು. ಇದೀಗ ಸರ್ಕಾರ ಟೊಮೇಟೊ ಮೇಲೆ ಸಬ್ಸಿಡಿ ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರ ಟೊಮೆಟೊ ಸಬ್ಸಿಟಿ ಬೆಲೆಯನ್ನು ಇಂದು ಘೋಷಿಸಿದೆ. ಇನ್ನುಮುಂದೆ ಜನಸಾಮಾನ್ಯರು ಟೊಮೆಟೊವನ್ನು ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
ಕೇಂದ್ರ ಸರ್ಕಾರ ಟೊಮೆಟೊ ಸಬ್ಸಿಟಿ ಬೆಲೆಯನ್ನು ಪ್ರತಿ ಕೆಜಿಗೆ 80 ರೂ. ಗಳಿಂದ 70 ರೂ. ಗೆ ಇಳಿಸಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಮತ್ತು ನ್ಯಾಷನಲ್ ಅಗ್ರಿಕಲ್ಚರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ (NAFED) ದೆಹಲಿ ಎನ್ಸಿಆರ್ ಮತ್ತು ಇತರ ಪ್ರಮುಖ ಪ್ರದೇಶಗಳಲ್ಲಿ ಜನರಿಗೆ ಕೆಜಿಗೆ 80 ರೂ. ಗಳ ಸಬ್ಸಿಡಿ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲಾಗುತ್ತಿದೆ.
ಟೊಮೆಟೊ ಬೆಲೆ ಏರಿಕೆಯಾಗಲು ಕಾರಣವೇನು
ಪ್ರಸ್ತುತ ಟೊಮೊಟೊ ದರ ಜನಸಾಮನ್ಯರನ್ನು ಅಚ್ಚರಿ ಪಡಿಸುತ್ತಿದೆ. ಟೊಮೇಟೊ ಬೆಲೆ ಏರಿಕೆಗೆ ತಾತ್ಕಾಲಿಕ ಸಮಸ್ಯೆ ಎದುರಾಗಿದೆ. ಟೊಮೇಟೊ ದರ ತೀವ್ರ ಏರಿಕೆಗೆ ಮಳೆಯೇ ಕಾರಣವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಟೊಮೇಟೊ ದರ ಹೆಚ್ಚುತ್ತಿದೆ. ಇನ್ನು ಮುಂಗಾರು ಆರಂಭದ ಕಾರಣ ಟೊಮೇಟೊ ಬೆಳೆ ಪ್ರಸ್ತುತ ಋತುಮಾನದ ಬದಲಾವಣೆಗಳ ಮೂಲಕ ಸಾಗುತ್ತಿದೆ.
ಸರ್ಕಾರದ ಅಂಕಿ ಅಂಶಗಳ ಪ್ರಕಾರ, 2022 -23 ರ ಬೆಳೆ ಋತುವಿನಲ್ಲಿ ಟೊಮೇಟೊ ಉತ್ಪಾದನೆಯು 20.62 ಮಿಲಿಯನ್ ಟನ್ ಗಳು ಎಂದು ಅಂದಾಜಿಸಲಾಗಿದೆ. ಪ್ರಮುಖ ಉತ್ಪಾದಕ ಪ್ರದೇಶಗಳಲ್ಲಿ ಕೆಟ್ಟ ಹವಾಮಾನ ಮತ್ತು ಕೀಟಗಳಿಂದ ಉಂಟಾದ ಬೆಳೆ ಹಾನಿಯಿಂದಾಗಿ ಟೊಮೆಟೊ ಬೆಲೆಯಲ್ಲಿ ಇತ್ತೀಚಿಗೆ ಏರಿಕೆಯಾಗಿದೆ ಎಂದು ಕೇಂದ್ರ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ.ಟೊಮೆಟೊ ಬೆಲೆಯ ಏರಿಕೆಯು ಅಲ್ಪಕಾಲಿಕವಾಗಿರುತ್ತದೆ ಎಂದು ಆರ್ ಬಿಐ ಹೇಳಿದೆ.