Top 10 Google Seacrh History 2025: ಜನರು ತಮಗೆ ತಿಳಿದಿರದ ವಿಷಯಗಳ ಬಗ್ಗೆ ಹೆಚ್ಚುಹೆಚ್ಚು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ನಮಗೆ ತಿಳಿದಿರದ ವಿಷಯಗಳ ಬಗ್ಗೆ ಗೂಗಲ್ ಮಾಹಿತಿ ನೀಡುತ್ತದೆ. 2025 ರಲ್ಲಿ, ಜಾಗತಿಕವಾಗಿ ಪ್ರಮುಖ ಗೂಗಲ್ ಹುಡುಕಾಟ ವಿಷಯಗಳಲ್ಲಿ, AI, ಕ್ರಿಕೆಟ್, ಕಬ್ಬಡ್ಡಿ, ಮತ್ತು ಮನರಂಜನೆ ಬಗ್ಗೆ ಹೆಚ್ಚಿನ ಹುಡುಕಾಟ ನೆಡೆಸಿದೆ. ಈ ಲೇಖನದಲ್ಲಿ 2025 ರ ವರ್ಷದಲ್ಲಿ ಗೂಗಲ್ ಅತೀ ಹೆಚ್ಚು ಹುಡುಕಾಟ ಮಾಡಲಾದ ವಿಷಯಗಳನ್ನು ನೀವು ತಿಳಿದುಕೊಳ್ಳಬಹುದು, ಹಾಗಾದರೆ 2025 ರಲ್ಲಿ ಅತೀ ಗೂಗಲ್ ನಲ್ಲಿ ನಲ್ಲಿ ಹುಡುಕಾಟವಾದ ವಿಷಯಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಟಾಪ್ 10 ಸರ್ಚ್ ಆದ ವಿಷಯಗಳು
- Indian Premier League (IPL) – ಭಾರತದಲ್ಲಿ ಹೆಚ್ಚಿನ ಜನರು ಕ್ರಿಕೆಟ್ ಅಭಿಮಾನಿಗಳಾಗಿದ್ದರೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ತನಕ ಕ್ರಿಕೆಟ್ ಮಾಹಿತಿ ತಿಳಿದುಕೊಳ್ಳುವುದಕ್ಕೆ ಆಸಕ್ತಿ ತೋರುತ್ತಾರೆ. IPL 2025 ಕ್ರಿಕೆಟ್ ಅಭಿಮಾನಿಗಳ ನಂಬರ್ 1 ಆಯೆ ಆಗಿದೆ.
- Google Gemini – ಗೂಗಲ್ ಜೆಮಿನಿ ಅನ್ನು ವಿದ್ಯಾರ್ಥಿಗಳು ಅಧ್ಯಯನ ಮತ್ತು ಸಂಶೋಧನೆಗಾಗಿ ಬಳಸುತ್ತಾರೆ. ಇನ್ನು ವೃತ್ತಿಪರರು ಇದನ್ನು ಇಮೇಲ್ ಗಳನ್ನು ಬರೆಯಲು ಮತ್ತು ಡೇಟಾ ವಿಶ್ಲೇಷಣೆಗೆ ಬಳಸುತ್ತಾರೆ. ಒಟ್ಟಾಗಿ ಜನರು ಇದನ್ನು ದೈನಂದಿನ ಕೆಲಸಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
- Asia Cup – Asia Cup ಎರಡು ವರ್ಷಕೊಮ್ಮೆ ನೆಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಆಗಿದೆ. ಇದು ಏಷ್ಯನ್ ಸದಸ್ಯ ರಾಷ್ಟ್ರಗಳ ಹಿರಿಯ ಪುರುಷರ ರಾಷ್ಟ್ರೀಯ ತಂಡಗಳನ್ನು ಒಳಗೊಂಡಿದೆ.
- ICC Champions Trophy – ICC Champions Trophy ವಿಶ್ವದ ಅಗ್ರ ಎಂಟು ತಂಡಗಳನ್ನು ಒಳಗೊಂಡ ಪ್ರಮುಖ ಏಕದಿನ ಅಂತರರಾಷ್ಟ್ರೀಯ (ODI) ಕ್ರಿಕೆಟ್ ಪಂದ್ಯಾವಳಿಯಾಗಿದೆ.
- Pro Kabaddi League – Pro Kabaddi League ಭಾರತದ ಪ್ರಮುಖ ವೃತ್ತಿಪರ ಕಬಡ್ಡಿ ಲೀಗ್ ಆಗಿದ್ದು, ಇದನ್ನು 2014 ರಲ್ಲಿ ಆರಂಭಿಸಲಾಗಿದೆ. ಇದು ವಿಶ್ವದ ಅತ್ಯಂತ ಜನಪ್ರಿಯ ಕಬಡ್ಡಿ ಲೀಗ್ ಆಗಿದೆ.
- Maha Kumbh Mela – ಮಹಾ ಕುಂಭ ಮೇಳ ಇದು ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪ್ರತಿ 144 ವರ್ಷಗಳಿಗೊಮ್ಮೆ ನಡೆಯುತ್ತದೆ, ಹಿಂದೂ ಸಾಧುಗಳು, ಸಂತರು ಮತ್ತು ಕೋಟ್ಯಂತರ ಯಾತ್ರಿಕರು ಪವಿತ್ರ ಸ್ನಾನಕ್ಕಾಗಿ ಸೇರುವ ಒಂದು ಬೃಹತ್ ಹಬ್ಬವಾಗಿದೆ.
- Women’s World Cup – ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಒಂದು ದಿನದ ಅಂತರರಾಷ್ಟ್ರೀಯ ಮಾದರಿಯ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್ ಆಗಿದೆ.
- Grok – ನೈಜ-ಸಮಯದ ಮಾಹಿತಿ ಪಡೆಯುವಿಕೆ, ವಿಷಯ ರಚನೆ, ಸಂಶೋಧನೆ ಮತ್ತು ಸಂಕೀರ್ಣ ಸಮಸ್ಯೆ ಪರಿಹಾರ ಗಳಿಗೆ ಗ್ರೋಕ್ ಸಹಾಯಕವಾಗಿದೆ.
- Saiyaara – ಸೈಯಾರಾ 2025 ರ ಭಾರತೀಯ ಹಿಂದಿ ಭಾಷೆಯ ಚಿತ್ರವಾಗಿದ್ದು, ಇದನ್ನು ಮೋಹಿತ್ ಸೂರಿ ನಿರ್ದೇಶಿಸಿದ್ದಾರೆ. ಈ ಸಿನಿಮಾಗೆ ಸಂಬಂದಿಸಿದ ವಿಷಯವನ್ನು ಜನರು ಹೆಚ್ಚು ಹೆಚ್ಚು ಸರ್ಚ್ ಮಾಡಿದ್ದಾರೆ.
- Dharmendra – ಧರ್ಮೇಂದ್ರ ಒಬ್ಬ ಭಾರತೀಯ ನಟ, ನಿರ್ಮಾಪಕ ಮತ್ತು ರಾಜಕಾರಣಿ, ಮುಖ್ಯವಾಗಿ ಹಿಂದಿ ಚಲನಚಿತ್ರಗಳಲ್ಲಿನ ಅವರ ಕೆಲಸಕ್ಕೆ ಹೆಸರುವಾಸಿಯಾಗಿದ್ದರು. ಅವರನ್ನು ಭಾರತೀಯ ಚಲನಚಿತ್ರ ಇತಿಹಾಸದಲ್ಲಿ ಶ್ರೇಷ್ಠ ಮತ್ತು ಅತ್ಯಂತ ಯಶಸ್ವಿ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

