8 Seater Car: ದೊಡ್ಡ ಕುಟುಂಬಕ್ಕೆ ದೊಡ್ಡ ಕಾರ್, 8 ಆಸನಗಳ ಈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್.
8 ಆಸನಗಳ ಈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
Top 3 Best 8 Seater Car In India: ಸಾಮಾನ್ಯವಾಗಿ ದೊಡ್ಡ ಕುಟುಂಬವನ್ನು ಹೊಂದಿದ್ದರೆ ನಿಮಗೆ ಹೆಚ್ಚು ಆಸನ ಸಾಮರ್ಥ್ಯದ ಕಾರು ಬೇಕಾಗುತ್ತದೆ. ದೊಡ್ಡ ಕುಟುಂಬದವರು ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಬರುತ್ತಿರುವ ಕೆಲವು ಜನಪ್ರಿಯ 8-ಸೀಟರ್ ಕಾರ್ ಗಳ ಖರೀದಿಯ ಬಗ್ಗೆ ಯೋಚಿಸುತ್ತಾರೆ. ಖರೀದಿಗೆ ಯಾವ ಕಾರ್ ಬೆಸ್ಟ್ ಎನ್ನುವ ಬಗ್ಗೆ ಗಮನ ಹರಿಸುವುದು ಸಹಜ.
ಮಾರುಕಟ್ಟೆಯಲ್ಲಿ ಟೊಯಾಟಾ, ಮಹಿಂದ್ರಾ ಹಾಗು ಕಿಯಾ ಕಂಪನಿಯು 8 ಆಸನಗಳ ವಿಭಾಗದಲ್ಲಿ ಬೆಸ್ಟ್ ಮಾಡೆಲ್ MPV ಗಳನ್ನೂ ಪರಿಚಯಿಸಿವೆ. ನೀವು ನಿಮ್ಮ ಬಜೆಟ್ ಬೆಲೆಯಲ್ಲಿಯೇ ಈ ಕಂಪನಿಗಳ ಕಾರ್ ಅನ್ನು ಖರೀದಿಸಬಹುದು. ಸದ್ಯ ನಾವೀಗ ಈ ಲೇಖನದಲ್ಲಿ 8 ಆಸನಗಳ ಕಾರ್ ಗಳಲ್ಲಿ ಟಾಪ್ ಸ್ಥಾನದಲ್ಲಿರುವ 3 ಕಾರ್ ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ದೊಡ್ಡ ಕುಟುಂಬಕ್ಕೆ ದೊಡ್ಡ ಕಾರ್, 8 ಆಸನಗಳ ಈ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್
•Toyota Innova Crysta
ಟೊಯೊಟಾ ಇನ್ನೋವಾ ಕ್ರಿಸ್ಟಾ ಹೆಚ್ಚು ಆಸನ ಸಾಮರ್ಥ್ಯ ಹೊಂದಿರುವ ಕಂಪನಿಯ ಕಾರಾಗಿದೆ. Toyota Innova Crysta 2.4 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 148 bhp ನ ಗರಿಷ್ಠ ಶಕ್ತಿಯನ್ನು ಮತ್ತು 343 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 8-ಆಸನಗಳ MPV ಮತ್ತು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಬರುತ್ತದೆ. ಮಾರುಕಟ್ಟೆಯಲ್ಲಿ 19.99 ಲಕ್ಷದಿಂದ 26.55 ಲಕ್ಷದವರೆಗೆ ಲಭ್ಯವಿದೆ.
•Mahindra Marazzo
ಮಹೀಂದ್ರಾ ಮರಾಜೊ ಕಂಪನಿಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುವ ಕಾರಾಗಿದೆ. ಇದರಲ್ಲಿ, ಹೆಚ್ಚಿನ ಕ್ಯಾಬಿನ್ ಮತ್ತು ಬೂಟ್ ಸ್ಪೇಸ್ ಹೊರತುಪಡಿಸಿ, ಕಂಪನಿಯು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡಿದೆ. ಈ ಕಾರು ಅತ್ಯಂತ ಶಕ್ತಿಶಾಲಿ ಎಂಜಿನ್ ನೊಂದಿಗೆ ಬರುತ್ತದೆ. ಹೆಚ್ಚಿನ ಶಕ್ತಿಯೊಂದಿಗೆ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಕಾರನ್ನು ಮಾರುಕಟ್ಟೆಯಿಂದ 14.59 ಲಕ್ಷದಿಂದ 17 ಲಕ್ಷದವರೆಗೆ ಖರೀದಿಸಬಹುದು.
•Kia Carnival
ಕಿಯಾ ಕಾರ್ನಿವಲ್ ಕೂಡ ಬಜೆಟ್ ಬೆಲೆಯಲ್ಲಿ ಖರೀದಿಗೆ ಬೆಸ್ಟ್ ಆಗಿದೆ. ಅದರ ಪ್ರೀಮಿಯಂ ವೈಶಿಷ್ಟ್ಯಗಳಿಗಾಗಿ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆ ಪಡೆದಿದೆ. ಈ ಮಾದರಿಯು 2199cc 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 197 bhp ನ ಗರಿಷ್ಠ ಶಕ್ತಿಯನ್ನು ಮತ್ತು 440 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. Kia Carnival 8-ಆಸನಗಳ MPV ಆಗಿದ್ದು,5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಬರುತ್ತದೆ. Kia Carnival ಮಾರುಕಟ್ಟೆ ಬೆಲೆಯನ್ನು 19.99 ಲಕ್ಷದಿಂದ 26.55 ಲಕ್ಷದವರೆಗೆ ಇರಿಸಲಾಗಿದೆ.