Budget Bike: ನಿಮ್ಮ ಬಜೆಟ್ ಬೆಲೆಗೆ ಸಿಗಲಿದೆ ಈ ಮೂರು ಬೆಸ್ಟ್ ಬೈಕ್, ಕಾಲೇಜು ಯುವಕರಿಗಾಗಿ

ನಿಮ್ಮ ಬಜೆಟ್ ಬೆಲೆಗೆ ಸಿಗಲಿದೆ ಈ ಮೂರು ಬೆಸ್ಟ್ ಬೈಕ್

Top 3 Best Budget Bike: ಸದ್ಯ ಮಾರುಕಟ್ಟೆಯಲ್ಲಿ ಬೈಕ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಜನಪ್ರಿಯ ಕಂಪನಿಗಳು ನೂತನ ಮಾದರಿಯ ಬೈಕ್ ಗಳನ್ನು ಪರಿಚಯಿಸುತ್ತಿರುತ್ತದೆ. ಬೈಕ್ ಖರೀದಿಸಬೇಕು ಎಂದು ಎಲ್ಲರು ಬಯಸುತ್ತಾರೆ. ಬೈಕ್ ಖರೀದಿಯ ಕನಸಿಗೆ ಅಡ್ಡ ಬರುವುದೇ ಬಜೆಟ್ ನ ಸಮಸ್ಯೆ.

ನೀವು ಸಹ ಬೈಕ್ ಖರೀದಿಸುವ ನಿಮ್ಮ ಕನಸನ್ನು ನನಸಾಗಿಸಲು ಬಯಸಿದರೆ, ನಾವು ದೇಶದಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ ಗಳ ಬಗ್ಗೆ ಮಾಹಿತಿಯನ್ನು ನಿಮಗಾಗಿ ನೀಡಲಿದ್ದೇವೆ. ಈ ಎಲ್ಲ ಬೈಕ್ ಗಳು ನಿಮ್ಮ ಬಜೆಟ್ ಬೆಲೆಯಲ್ಲಿ ಲಭ್ಯವಿದ್ದು, ನೀವು ಕಡಿಮೆ ಬೆಲೆಯಲ್ಲಿ ಈ ಬೈಕ್ ಗಳನು ಖರೀದಿಸಬಹುದು.

Bajaj Pulsar NS160 Bike
Image Credit: Bikewale

ನಿಮ್ಮ ಬಜೆಟ್ ಬೆಲೆಗೆ ಸಿಗಲಿದೆ ಈ ಮೂರು ಬೆಸ್ಟ್ ಬೈಕ್
•Bajaj Pulsar NS160 Bike

ಬಜಾಜ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ NS160 ಬೈಕ್ ಅನ್ನು ಪರಿಚಯಿಸಿದೆ. ಈ ಬೈಕ್ ಗರಿಷ್ಟ 120 ಕೀ. ಮೀ ವೇಗವನ್ನು ನೀಡುತ್ತದೆ. ಈ ಬೈಕ್ ನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಪೂರ್ವ ಲೋಡ್ ಹೊಂದಾಣಿಕೆ ಮಾಡಬಹುದಾದ ಮೊನಾಶಾಕ್ ಸಸ್ಪೆನ್ಷನ್ ಅನ್ನು ಹೊಂದಿದೆ. ಈ ಬೈಕ್ ನಲ್ಲಿ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಲಭ್ಯವಿದೆ. ಈ ಬೈಕ್ ನಲ್ಲಿ 160.3 ಸಿಸಿ ಎಂಜಿನ್ ಅನ್ನು ನೀಡಲಾಗಿದೆ. ಬಜಾಜ್ ಪಲ್ಸರ್ NS160 ಬೈಕ್ ನ ಆರಂಭಿಕ ಬೆಲೆ 1,46,527 ರೂ. ಆಗಿದೆ. ಈ ಬೈಕ್ ಎರಡು ರೂಪಾಂತರಗಳಲಿ ಲಭ್ಯವಿದೆ.

•TVS Apache RTR 160 4V Bike
ಟಿವಿಎಸ್ ಮೋಟಾರ್ಸ್ ತನ್ನ TVS Apache RTR 160 4V ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈTVS Apache RTR 160 4V ಬೈಕ್‌ನಲ್ಲಿ ಕಂಪನಿಯು 157.9 ಸಿಸಿ ಏರ್ ಕೂಲ್ಡ್ ಎಂಜಿನ್ ಅನ್ನು ನೀಡಿದ್ದು, ಈ 4 ವಾಲ್ವ್ ಸಿಂಗಲ್ ಸಿಲಿಂಡರ್ ಎಂಜಿನ್ ಹೆಚ್ಚಿನ ಶಕ್ತಿಯೊಂದಿಗೆ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಕಂಪನಿಯು ಈ ಬೈಕ್ ನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ನೀಡಿದೆ.ಈ ಬೈಕ್‌ ನಲ್ಲಿ ಕಂಪನಿಯು ಕ್ರಮವಾಗಿ ಅರ್ಬನ್, ಸ್ಪೋರ್ಟ್ ಮತ್ತು ರೈನ್ ಮೋಡ್ 3 ರೈಡಿಂಗ್ ಮೋಡ್‌ಗಳನ್ನು ನೀಡಿದೆ. ಸ್ಪೋರ್ಟ್ಸ್ ಮೋಡ್ ನಲ್ಲಿ ಈ ಬೈಕ್ 45 Km ರೇಂಜ್  ಅನ್ನು ನೀಡುತ್ತದೆ. ಹಾಗೆಯೆ ಗಂಟೆಗೆ 114km ವೇಗದಲ್ಲಿ ಓಡುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

TVS Apache RTR 160 4V Bike
Image Credit: Bikedekho

•Hero Xtreme 160R 4V Bike
ಹೀರೊ Xtreme 160R 4V ಬೈಕ್ ಅನ್ನು ಬಿಡುಗಡೆ ಮಾಡಿದೆ. ಕಂಪನಿ ಇದನ್ನು ಒಟ್ಟು ಮೂರೂ ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಸ್ಟ್ಯಾಂಡರ್ಡ್, ಕನೆಕ್ಟೆಡ್ ಮತ್ತು ಪ್ರೊ ಎಂಬ ಮೂರೂ ರೂಪಾಂತರಗಳನ್ನು ಈ ಬೈಕ್ ಹೊಂದಿದೆ. ಈ ಬೈಕ್ ನ ಆರಂಭಿಕ ಬೆಲೆ 1,2,7300 ರೂಪಾಯಿ. ಅದೇ ರೀತಿ ಬೈಕ್‌ನ ಟಾಪ್ ವೆರಿಯಂಟ್‌ ನ ಬೆಲೆಯನ್ನು ರೂ. 1,36,500 ನಲ್ಲಿ ಇರಿಸಲಾಗಿದೆ. Hero Extreme 160R 4V ಎಂಜಿನ್ 16.6bhp ಮತ್ತು 14.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಮೋಟಾರ್‌ ಸೈಕಲ್‌ ನ 2-ವಾಲ್ವ್ ಆವೃತ್ತಿಗಿಂತ 1.6bhp ಮತ್ತು 0.6Nbm ಟಾರ್ಕ್‌ನ ಹೆಚ್ಚಳವಾಗಿದೆ. ಈ ಆಯಿಲ್ ಕೂಲ್ಡ್ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ.

Hero Xtreme 160R 4V Bike
Image Credit: Bikewale

Join Nadunudi News WhatsApp Group