Honda Activa: ಹೋಂಡಾ ಆಕ್ಟಿವಾ ಖರೀದಿಸಲು ಶೋ ರೂಮ್ ಮುಂದೆ ಕ್ಯೂ ನಿಂತ ಜನರು, ಭರ್ಜರಿ ಡಿಮ್ಯಾಂಡ್
ಈ ಆಕ್ಟಿವಾ ಖರೀದಿಗಾಗಿ ಶೋರೂಮ್ ಮುಂದೆ ಕ್ಯೂ ನಿಂತ ಗ್ರಾಹಕರು
Top 5 best Activa Scooter: ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಲ್ಪಟ್ಟಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ವಿವಿಧ ಬೈಕ್ ಗಳು ಮತ್ತು ಸ್ಕೂಟರ್ ಗಳನ್ನು Honda ಮಾರಾಟ ಮಾಡುತ್ತಿದೆ.
ಇನ್ನು ಮಾರುಕಟ್ಟೆಯಲ್ಲಿ ಅದೆಷ್ಟೇ ಹೊಸ ಹೊಸ ವಿನ್ಯಾಸದ ಸ್ಕೂಟರ್ ಗಳು ಲಾಂಚ್ ಆಗುತ್ತಿದ್ದರು ಕೂಡ Honda Activa ಮೇಲಿನ ಕ್ರೇಜ್ ಕಡಿಮೆಯಾಗುತ್ತಿಲ್ಲ ಎನ್ನಬಹುದು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ Activa ಮಾದರಿಯನ್ನು ಖರೀದಿಸುತ್ತಿದ್ದಾರೆ. ಸದ್ಯ ನಾವೀಗ ಈ ಲೇಖನದಲ್ಲಿ ಹೋಂಡಾ ಕಂಪನಿಯ ಟಾಪ್ 5 ಬೆಸ್ಟ್ ಆಕ್ಟಿವಾ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ ಆಕ್ಟಿವಾ ಖರೀದಿಗಾಗಿ ಶೋರೂಮ್ ಮುಂದೆ ಕ್ಯೂ ನಿಂತ ಗ್ರಾಹಕರು
•Honda Activa 125
ಆಕ್ಟಿವಾ 125 ಎಕ್ಸ್ ಶೋ ರೂಂ ಬೆಲೆ 83,084 ರಿಂದ 92,257 ರೂ. ಇದೆ. ಈ ಮಾದರಿಯು 124 cc ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು 60 kmpl ವರೆಗೆ ಮೈಲೇಜ್ ನೀಡುತ್ತದೆ.
•Honda Activa 6G
ಹೋಂಡಾ Activa 6G ಎಕ್ಸ್ ಶೋ ರೂಂ ಬೆಲೆ ರೂ.78,624 ರಿಂದ ರೂ.84,674 ಕ್ಕೆ ಖರೀದಿಗೆ ಲಭ್ಯವಿದೆ. Activa 6G109.51 cc ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ. ಈ ಎಂಜಿನ್ 7.8 PS ಗರಿಷ್ಠ ಶಕ್ತಿ ಮತ್ತು 8.9 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. Activa 6G ನಲ್ಲಿ 50 kmpl ವರೆಗೆ ತಲುಪಿಸುತ್ತದೆ ಮತ್ತು ಡ್ರಮ್ ಬ್ರೇಕ್ ಗಳನ್ನು ಒಳಗೊಂಡಿದೆ.
•Honda Shine 100
ಹೋಂಡಾ ಶೈನ್ 100 ಜನಪ್ರಿಯ ಬೈಕ್ ಆಗಿದ್ದು, ಹೆಚ್ಚಿನ ಸಂಖ್ಯೆಯ ಗ್ರಾಹಕರು ಇದನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರ ಎಕ್ಸ್ ಶೋ ರೂಂ ಬೆಲೆ 66,600 ರೂ. ಆಗಿದೆ. ಶೈನ್ ಮಾದರಿಯು 98.98 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಪೆಟ್ರೋಲ್ ಎಂಜಿನ್ ಮತ್ತು 4-ಸ್ಪೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಈ ಮಾದರಿಯು 68 kmpl ವರೆಗೆ ಮೈಲೇಜ್ ನೀಡುತ್ತದೆ.
•Honda SP 125
ಇನ್ನು ಹೋಂಡಾ SP 125 ಮೋಟಾರ್ ಸೈಕಲ್ ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಇದು ರೂ.87,410 – 91,960 ಎಕ್ಸ್ ಶೋರೂಂನಲ್ಲಿ ಖರೀದಿಗೆ ಲಭ್ಯವಿದೆ. 60 kmpl ವರೆಗೆ ಮೈಲೇಜ್ ನೀಡುತ್ತದೆ.
•Honda Unicorn
ಹೋಂಡಾ ಯುನಿಕಾರ್ನ್ಕೂಡ ಪ್ರಮುಖ ಬೈಕ್ ಆಗಿದೆ. ಮಾರುಕಟ್ಟೆಯಲ್ಲಿ Honda Unicorn ಬೆಲೆ ರೂ.1.10 ಲಕ್ಷ ನಿಗದಿಯಾಗಿದೆ. Honda Unicorn ಮಾದರಿಯು ನಿಮಗೆ ಒಂದು ಲೀಟರ್ ಪೆಟ್ರೋಲ್ ನಲ್ಲಿ ಬರೋಬ್ಬರಿ 50kM ಮೈಲೇಜ್ ನೀಡಲಿದೆ.