Best Laptop: ಇಲ್ಲಿದೆ ಅತೀ ಕಡಿಮೆ ಬೆಲೆಗೆ ಸಿಗುವ 5 ಬೆಸ್ಟ್ ಲ್ಯಾಪ್ ಟಾಪ್, ವಿದ್ಯಾರ್ಥಿಗಳಿಗೆ ಈ ಲ್ಯಾಪ್ ಟಾಪ್ ಬೆಸ್ಟ್.
ಕೇವಲ 30 ಸಾವಿರದಲ್ಲಿ ಸಿಗುತ್ತಿದೆ ಈ 5 ಬೆಸ್ಟ್ Laptop.
Top 5 Best Laptop: ಪ್ರಸ್ತುತ ದೇಶದಲ್ಲಿ Electronic ವಸ್ತುಗಳ ಬಳಕೆ ಹೆಚ್ಚುತ್ತಿದೆ. Smart Watch, Smart Phone, Smart TV, Laptop ಸೇರಿದಂತೆ ಇನ್ನಿತರ Electronic ವಸ್ತುಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇನ್ನು ದೇಶದಲ್ಲಿ ಕರೋನ ಬಂದ ಬಳಿಕ Work From Home ಹೆಚ್ಚುತ್ತಿದೆ. ಹೆಚ್ಚಿನ ಉದ್ಯೋಗಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ಸದ್ಯ Work From Home ಹೆಚ್ಚುತ್ತಿರುವ ಹಿನ್ನಲೆ ಮಾರುಕಟ್ಟೆಯಲ್ಲಿ Laptop ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ ಎಂದರೆ ತಪ್ಪಾಗಲಾರದು. ವಿವಿಧ ಕಂಪನಿಗಳು ನೂತನ ಮಾದರಿಯ Laptop ಗಳನ್ನೂ ಪರಿಚಯುಸುತ್ತಾ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ನೀಡುತ್ತಿದೆ.
ಇನ್ನು ಕೆಲ Online website ಗಳು Laptop ಖರೀದಿಗಾಗಿ ವಿವಿಧ ರೀತಿಯ ಆಫರ್ ಅನ್ನು ಕೂಡ ನೀಡುತ್ತಿವೆ. ಇದೀಗ ಕೇವಲ 30 ಸಾವಿರ ಬಜೆಟ್ ನಲ್ಲಿ ಲಭ್ಯವಿರುವ ಟಾಪ್ ಬೆಸ್ಟ್ ಲ್ಯಾಪ್ ಟಾಪ್ ನ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.
ಕೇವಲ 30 ಸಾವಿರದಲ್ಲಿ ಸಿಗುತ್ತಿದೆ ಈ 5 ಬೆಸ್ಟ್ Laptop
*ASUS SmartChoice Vivobook 15
ASUS SmartChoice Vivobook 15 laptop Intel Celeron N4020 ಪ್ರೊಸೆಸರ್ ಹೊಂದಿದ್ದು, 16.6 ಇಂಚಿನ ಡಿಸ್ ಪ್ಲೇ ನಿಆಡಲಾಗಿದೆ. ಇನ್ನು 8GB RAM ಅನ್ನು ಹೊರತುಪಡಿಸಿ, ಈ ಲ್ಯಾಪ್‌ಟಾಪ್ 512 GB SSD ಸಂಗ್ರಹಣೆಯೊಂದಿಗೆ ಸಂಯೋಜಿತ ಗ್ರಾಫಿಕ್ಸ್, Windows 11, Office 2021 ಮತ್ತು ಫಿಂಗರ್‌ಪ್ರಿಂಟ್ ಅನ್ನು ಹೊಂದಿದೆ. ASUS SmartChoice Vivobook 15 Laptop Amazon ನಲ್ಲಿ ಕೇವಲ ₹ 28,990 ಗೆ ಲಭ್ಯವಿದೆ.
*Infinix INBook Y1 Plus
Infinix INBook Y1 Plus ಲ್ಯಾಪ್ ಟಾಪ್‌ನ ಬೆಲೆ 28,990 ರೂ. ಆಗಿದೆ. ಈ Laptop 8 GB RAM ಮತ್ತು 256 GB SSD ಸಂಗ್ರಹಣೆಯೊಂದಿಗೆ Intel Core i3 10th Gen ಪ್ರೊಸೆಸರ್, Windows 11, Intel ಇಂಟಿಗ್ರೇಟೆಡ್ UHD ಗ್ರಾಫಿಕ್ಸ್ ಅನ್ನು ಪಡೆದಿದೆ. ಈ ಲ್ಯಾಪ್‌ಟಾಪ್ 10 ಗಂಟೆಗಳ ವರೆಗೆ ಬ್ಯಾಟರಿ ಅವಧಿಯನ್ನು ನೀಡುತ್ತದೆ.
*Acer Extensa 15
Acer Extensa 15 ಲ್ಯಾಪ್ ಟಾಪ್ Ryzen 3 Quad Core ಪ್ರೊಸೆಸರ್ ಜೊತೆಗೆ Windows 11 ಮತ್ತು AMD Radeon AMD ಗ್ರಾಫಿಕ್ಸ್ 512GB SSD ಸಂಗ್ರಹಣೆ ಮತ್ತು 8 GB RAM ಅನ್ನು ಹೊಂದಿರುತ್ತದೆ. 15.6 ಇಂಚಿನ ಪರದೆಯ ಈ ಲ್ಯಾಪ್ ಟಾಪ್ ನ ಬೆಲೆ 29,990 ರೂ. ಆಗಿದೆ.
*Acer One
ನೀವು Acer one Laptop ಅನ್ನು ಕೇವಲ 29,990 ರೂ. ಗಳಲ್ಲಿ ಖರೀದಿಸಬಹುದಾಗಿದೆ. Acer One Laptop i3 11th Gen ಪ್ರೊಸೆಸರ್ ನೊಂದಿಗೆ 8 GB RAM ಮತ್ತು 512 GB SSD ಸಂಗ್ರಹವನ್ನು ಹೊಂದಿದ್ದು, ಬರೋಬ್ಬರಿ 7 ಗಂಟೆಗಳ ಬ್ಯಾಟರಿ ಅವಧಿಯನ್ನು ಪಡೆಯುತ್ತೀರಿ.
*HP G9
HP G9 Laptop ಅನ್ನು ಕೇವಲ 29490 ರೂ. ಗಳಲ್ಲಿ ಖರೀದಿಸಬಹುದಾಗಿದೆ. HP G9 Laptop DOS ಆಪರೇಟಿಂಗ್ ಸಿಸ್ಟಮ್‌ನೊಂದಿಗೆ 15.6 ಇಂಚಿನ ಪರದೆಯನ್ನು ಹೊಂದಿದೆ.