Bike: ಭಾರತದಲ್ಲಿ ಅತಿಹೆಚ್ಚು ಜನ ಖರೀದಿಸುತ್ತಿರುವ TOP 5 ಬೈಕುಗಳು, ಕಡಿಮೆ ಬೆಲೆ ಆಕರ್ಷಕ ಲುಕ್.
ಜನರು ಹೆಚ್ಚಾಗಿ ಖರೀದಿಸುವ ಟಾಪ್ 5 ಬೈಕ್ ಗಳ ಬಗ್ಗೆ ಮಾಹಿತಿ ತಿಳಿಯಿರಿ.
Top 5 Bikes: ಭಾರತದ ರಸ್ತೆಯಲ್ಲಿ ಹಲವಾರು ಬೈಕ್ (Bike)ಗಳು ನಮ್ಮ ಕಣ್ಣೆದುರು ಸಾಗುವುದನ್ನು ನಾವು ನೋಡುತ್ತೇವೆ. ಅದರಲ್ಲಿ ಹಲವಾರು ಸ್ಪೋರ್ಟ್ಸ್ ಬೈಕ್ (Sports Bike)ಹಲವಾರು ಎಕನಾಮಿ ಬೈಕ್ ಹೀಗೆ ಬೈಕ್ ಗಳ ಲಿಸ್ಟ್ ಗಳು ಹಲವಾರಿವೆ. ಹೀಗೆ ಕಣ್ಣಿಗೆ ಕಾಣುವ ಎಲ್ಲಾ ಬೈಕುಗಳು ಟಾಪ್ 5 ಲಿಸ್ಟ್ ಸೇರಲು ಸಾಧ್ಯವಿಲ್ಲ. ಹಾಗಿದ್ದಾರೆ ಬನ್ನಿ ನೋಡೋಣ ಈ ಟಾಪ್ 5 ಬೈಕ್ ಗಳು ಯಾವುದೆಂದು?.
ಒಂದು ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಸದ್ಯ ಯುವಕರ ಟಾಪ್ ಫೇವರಿಟ್ ಆಗಿದ್ಯಂತೆ ಈ 5 ಬೈಕುಗಳು.
1. ROYAL ENFIELD HUNTER 350
ಈಗಿನ ಯುವಕರ ಮೋಜಿಗೆ ಸರಿಹೊಂದುವ ಬೈಕ್ ಗಳ ಮೊದಲನೇ ಶ್ರೇಣಿ, ರಾಯಲ್ ಎನ್ಫೀಲ್ಡ್ 350 HUNTER. ಇದರಲ್ಲಿ ನಾವು 349.3cc ಇಂಜಿನ್ ಅನ್ನು ನೋಡಬಹುದು. ಇದು ಒಟ್ಟಾರೆ 36 km ಮೈಲೇಜ್ ಅನ್ನು ನೀಡುತ್ತದೆ ಹಾಗೂ ಇದರ ಎಕ್ಸ್ ಶೋರೂಮ್ ಬೆಲೆ 1.50 ಲಕ್ಷದಿಂದ 1.70 ಲಕ್ಷದ ವರೆಗೂ ಬೀಳುತ್ತದೆ.
2. YAMAHA MT15 VA
ಈ 155cc ಎಂಜಿನ್ ಕೆಪ್ಯಾಸಿಟಿ ಬೈಕ್ ನಮ್ಮ ಎರಡನೇ ಸ್ಥಾನದಲ್ಲಿದೆ. ಇದರ ಲುಕ್ ಗೆ ಜನರು ಫಿದಾ ಆಗಿದ್ದಾರೆ. ಇದು ಒಟ್ಟಾರೆ 56 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಇದರ ಎಕ್ಸ್ ಶೋರೂಮ್ ಬೆಲೆ 1.66 ರಿಂದ 1.71 ಲಕ್ಷ ಇರುತ್ತದೆ.
3. TVS RAIDER
ಮೂರನೇ ಸ್ಥಾನದಲ್ಲಿ ಟಿವಿಎಸ್ ಕಂಪನಿಯ ಪ್ರತಿಷ್ಠಿತ ಟಿವಿಎಸ್ ರೈಡರ್ ಬೈಕ್ ಇದೆ. ಇದರ ಮೈಲೇಜ್ 50 ರಿಂದ 55 km. ಇದರ ಎಂಜಿನ್ 125 ಸಿಸಿ. ಈ ಬೈಕಿನ ಎಕ್ಸ್ ಶೋರೂಮ್ ಬೆಲೆ 86,000 ಇಂದ ಶುರುವಾಗುತ್ತದೆ.
4. YAMAHA R15 V4
ನಾಲ್ಕನೇ ಸ್ಥಾನದಲ್ಲಿ ಯಮಹ ಸಂಸ್ಥೆಯ ಆರ್ ಒನ್ ಫೈವ್ ವಿ ಫೋರ್ ಬೈಕ್ ಇದೆ. ಇದರ ಎಕ್ಸ್ ಶೋರೂಮ್ ಬೆಲೆ ರೂ.82,000 ದಿಂದ 1.95 ಲಕ್ಷ. ಇದು ಒಟ್ಟಾರೆ 56 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಮತ್ತು ಇದರ ಇಂಜಿನ್ 155cc ಇದೆ.
5. HERO SPLENDOR PLUS
97.2cc ಇಂಜಿನ್, 75km ಮೈಲೇಜ್ ಹಾಗೂ 75,000 ಬೆಲೆಯುಳ್ಳ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನಮ್ಮ ಐದನೇ ಸ್ಥಾನದಲ್ಲಿದೆ.