Ads By Google

Electric Scooter: ಈ ಸ್ಕೂಟರ್ ಓಡಿಸಲು ಯಾವುದೇ ಲೈಸೆನ್ಸ್ ಅಗತ್ಯವಿಲ್ಲ, ಕಡಿಮೆ ಬೆಲೆಗೆ ಮನೆಗೆ ತನ್ನಿ ಮೈಲೇಜ್ ಸ್ಕೂಟರ್.

Top Best 4 Without Licence Electric Scooter

Image Source: BikeWale

Ads By Google

Top Best 4 Without Licence Electric Scooter: ಮಾರುಕಟ್ಟೆಯಲ್ಲಿ Electric Car ಹಾಗೂ Bike ಗಳಷ್ಟೇ Electric Scooter ಗಳು ಕೂಡ ಬೇಡಿಕೆ ಪಡೆದುಕೊಂಡಿದೆ. Petrol , Diesel ಬೆಲೆಯ ಏರಿಕೆಯ ಪರಿಣಾಮವಾಗಿ ಜನರು ಹೆಚ್ಚಾಗಿ Electric ವಾಹನಗಳ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. Electric ಮಾದರಿಗಳು ಜನರ ಇಂಧನದ ಖರ್ಚನ್ನು ಉಳಿಸುತ್ತದೆ ಎನ್ನಬಹುದು.

ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಮಾದರಿಯ Electric Scooter ಗಳು ಪರಿಚಯವಾಗಿವೆ. ವಿವಿಧ ಕಂಪನಿಗಳು ತನ್ನ ನೂತನ ಮಾದರಿಯ ಸ್ಕೂಟರ್ ಗಳನ್ನೂ ಪರಿಚಯಿಸುತ್ತಲೇ ಇರುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಚಲಾವಣೆಗೆ Driving Licence ಅಗತ್ಯವಿಲ್ಲದ Electric Scooter ಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Image Credit: Buy2hands

*Okinawa Lite Electric Scooter
ಓಕಿನಾವಾ ಲೈಟ್ ಎಲೆಕ್ಟ್ರಿ ಸ್ಕೂಟರ್ 1.2 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನಿಂದ ಶಕ್ತಿಯನ್ನು ಪಡೆಯುತ್ತದೆ. ಕಂಪನಿಯು BLDC ತಂತ್ರಜ್ಞಾನವನ್ನು ಆಧರಿಸಿ 250 W ಎಲೆಕ್ಟ್ರಿಕ್ ಮೋಟಾರ್ ಅನ್ನು ಸಹ ಸ್ಥಾಪಿಸಿದೆ. ಈ ಸ್ಕೂಟರ್ ನಲ್ಲಿ ನೀವು 60 ಕಿಲೋಮೀಟರ್ ಗಳ ಮೈಲೇಜ್ ಮತ್ತು ಗಂಟೆಗೆ 25 ಕಿಲೋಮೀಟರ್ ಗಳ ಗರಿಷ್ಠ ವೇಗವನ್ನು ಸಹ ಪಡೆಯಬಹುದು.

Image Credit: Timesbull

*Komaki XGT KM
ಮಾರುಕಟ್ಟೆಯಲ್ಲಿ ಲೈಸೆನ್ಸ್ ಅಗತ್ಯವಿಲ್ಲದ Komaki XGT KM EV ಕೂಡ ಲಭ್ಯವಾಗಲಿದೆ. ಈ ಸ್ಕೂಟರ್ ಆಕರ್ಷಕ ನೋಟದೊಂದಿಗೆ ಶಕ್ತಿಯುತ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಎಲೆಕ್ಟ್ರಿಕ್ ಸ್ಕೂಟರ್ 60 ರಿಂದ 65 ಕಿಲೋಮೀಟರ್ ವ್ಯಾಪ್ತಿಯವರೆಗೆ ಚಲಿಸುತ್ತದೆ. ಕಂಪನಿಯು ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡುತ್ತದೆ. ಇದರ ಮಾರುಕಟ್ಟೆ ಬೆಲೆ 56,890 ರೂ. ಆಗಿದೆ.

Image Credit: Inc42

*Ampere Reo Elite Electric Scooter
ಮಾರುಕಟ್ಟೆಯಲ್ಲಿ 55 ರಿಂದ 65 ಕಿಲೋಮೀಟರ್ ಮೈಲೇಜ್ ನೀಡುವ Ampere Reo Elite Electric Scooter ಖರೀದಿಗೆ ಲಭ್ಯವಿದೆ. ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡಲಿರುವ ಈ ಬೈಕ್ ನ ಬೆಲೆ 42,999 ರೂ. ಆಗಿದೆ.

Image Credit: Indiamart

*Okinawa R30 Electric Scooter
ಇನ್ನು Okinawa R30 Electric Scooter ಕೂಡ ಮಾರುಕಟ್ಟೆಯಲ್ಲಿ ಲೈಸೆನ್ಸ್ ಇಲ್ಲದೆ ಕೂಡ ಓಡಿಸಬಹುದಾದ ಸ್ಕೂಟರ್ ಆಗಿದೆ. ಇನ್ನು Okinawa R30 Electric Scooter ವೇಗದ ಚಾರ್ಜಿಂಗ್ ನೊಂದಿಗೆ ಸಿಂಗಲ್ ಚಾರ್ಜ್ ನಲ್ಲಿ 60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಹಾಗೆಯೆ ಮಾರುಕಟ್ಟೆಯಲ್ಲಿ ಈ Electric ಮಾದರಿ 62998 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.