Torn Note: 500 ರೂ ನೋಟುಗಳ ಮೇಲೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿದ RBI, ನೋಟ್ ಬಳಸುವವರಿಗೆ ಎಚ್ಚರಿಕೆ.
ನೋಟುಗಳ ಮೇಲೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ RBI.
Torn Note Value: ಇನ್ನು 2016 ರ ನೋಟು ಅಮಾನ್ಯೀಕರಣದ ನಂತರ ದೇಶದಲ್ಲಿ ನೋಟಿಗೆ ಸಂಬಂಧಿಸಿದಂತೆ ಅನೇಕ ಸುದ್ದಿಗಳು ವೈರಲ್ ಆಗುತ್ತಿದೆ. ಈಗಾಗಲೇ ದೇಶದಲ್ಲಿ 2000 ಮುಖಬೆಲೆಯ ನೋಟನ್ನು RBI ರದ್ದುಗೊಳಿಸಿದೆ. ಇನ್ನು ಸೆಪ್ಟೆಂಬರ್ 30 ರತನಕ ನೋಟು ಠೇವಣಿ ಮತ್ತು ವಿನಿಮಯ ಪ್ರಕ್ರಿಯೆ ಸಮಯಾವಕಾಶವನ್ನು ನೀಡಿದ್ದ RBI ಸದ್ಯ October 7 ರ ವರೆಗೆ ನೋಟು ಠೇವಣಿ ಮತ್ತು ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶವನ್ನು ವಿಸ್ತರಿಸಿದೆ.
October 7 ರ ವೆಗೆ ನೀವು ನಿಮ್ಮ ಬಳಿ ಇರುವ 2000 ರೂ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ನೋಟು ವಿನಿಮಯಕ್ಕೆ ಸಮಯಾವಕಾಶವನ್ನು ವಿಸ್ತರಿಸಿದ ಬೆನ್ನಲ್ಲೇ RBI 10, 20, 50, 100, 200 ಹಾಗೂ 500 ರೂ.ನೋಟುಗಳ ಮೇಲೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ನೋಟುಗಳ ಮೇಲೆ ಹೊಸ ಮಾರ್ಗಸೂಚಿ ಪ್ರಕಟ ಮಾಡಿದ RBI
ನಿಮ್ಮ ಬಳಿ ಹರಿದ ಅಥವಾ ಕೊಳಕಾದ ನೋಟುಗಳಿದ್ದರೆ ಚಿಂತಿಸುವ ಅಗತ್ಯ ಇಲ್ಲ. ಏಕೆಂದರೆ RBI ಇದೀಗ ಬ್ಯಾಂಕುಗಳಿಗೆ ಹರಿದ ಅಥವಾ ಕೊಳಕಾದ ನೋಟುಗಳ ವಿನಿಮಯಾ ಮಾಡುವಂತೆ ಬ್ಯಾಂಕುಗಳಿಗೆ ಆದೇಶ ಹೊರಡಿಸಿದೆ. RBI ನಿಯಮದ ಅಡಿಯಲ್ಲಿ ದೇಶದ ಎಲ್ಲ ಬ್ಯಾಂಕ್ ಗಳು ಹರಿದ ಅಥವಾ ಕೊಳಕಾದ ನೋಟುಗಳನ್ನೂ ವಿನಿಮಯ ಮಾಡಿಕೊಳ್ಳಬೇಕಿದೆ.
ಹರಿದ ಅಥವಾ ಕೊಳಕಾದ ನೋಟುಗಳ ಮೌಲ್ಯ ಎಷ್ಟಿರುತ್ತದೆ..?
RBI ಅಥವಾ ಬ್ಯಾಂಕುಗಳು ಹರಿದ ಅಥವಾ ಕೊಳಕಾದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಆದರೆ ನೋಟಿನ ಹಣದ ಮರುಪಾವತಿ ನೋಟಿನ ಸ್ಥಿತಿಯ ಮೇಲೆ ಆದರಿಸುತ್ತದೆ. RBI ನಿಯಮದ ಪ್ರಕಾರ, ನಿಮ್ಮ ಬಳಿ ಇರುವ ಹರಿದ ಅಥವಾ ಕೊಳಕಾದ ನೋಟುಗಳು 50 ಪ್ರತಿಶತಕ್ಕಿಂತ ಕಡಿಮೆ ಹಾಳಾಗಿದ್ದರೆ ನೀವು ನೋಟಿನ ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ಆದರೆ ನೋಟು 50 ಪ್ರತಿಶತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದ್ದರೆ ನೋಟಿನ ಮೌಲ್ಯದ ಅರ್ಧದಷ್ಟು ಅಥವಾ ಶೂನ್ಯ ಮೊತ್ತವನ್ನು ಪಡೆಯುತ್ತೀರಿ.
2000 ರೂ. ಹರಿದ ನೋಟಿನ ಮೌಲ್ಯ
ಇನ್ನು 2000 ರೂಪಾಯಿ ನೋಟಿನ ಉದ್ದ 16.6 ಸೆಂ.ಮೀ, ಅಗಲ 6.6 ಸೆಂ.ಮೀ ಮತ್ತು ವಿಸ್ತೀರ್ಣ 109.56 ಚದರ ಸೆಂಟಿಮೀಟರ್ ಇರುತ್ತದೆ. ನಿಮ್ಮ ಬಳಿ ಇರುವ ಹರಿದ 2000 ರೂ ನೋಟು 88 ಚದರ ಸೆಂಟಿಮೀಟರ್ ಆಗಿದ್ದರೆ, ನೀವು ಪೂರ್ಣ ಮೊತ್ತವನ್ನು ಪಡೆಯುತ್ತೀರಿ. ಆದರೆ ನಿಮ್ಮ ನೋಟು 44 ಚದರ ಸೆಂಟಿಮೀಟರ್ ಆಗಿದ್ದರೆ ಅರ್ಧದಷ್ಟು ಮರುಪಾವತಿಯನ್ನು ಮಾತ್ರ ನೀಡಲಾಗುತ್ತದೆ.
500 ರೂ. ಹರಿದ ನೋಟಿನ ಮೌಲ್ಯ
ಇನ್ನು 500 ರೂ ನೋಟಿನ ಉದ್ದ 15 ಸೆಂ, ಅಗಲ 6.6 ಸೆಂ ಮತ್ತು ವಿಸ್ತೀರ್ಣ 99 ಚದರ ಸೆಂಟಿಮೀಟರ್ ಆಗಿದೆ. ನಿಮ್ಮ ಬಳಿ ಇರುವ ಹರಿದ 500 ರೂಪಾಯಿ ನೋಟಿನ ಗಾತ್ರವು 80 ಚದರ ಸೆಂಟಿಮೀಟರ್ ಆಗಿದ್ದರೆ ಪೂರ್ಣ ಮರುಪಾವತಿಯನ್ನು ನೀಡಲಾಗುತ್ತದೆ, ಆದರೆ ಅದು 40 ಚದರ ಸೆಂಟಿಮೀಟರ್ ಆಗಿದ್ದರೆ, ಅರ್ಧದಷ್ಟು ಮರುಪಾವತಿಯನ್ನು ನೀಡಲಾಗುತ್ತದೆ.