Torq Kratos: ಕೇವಲ 999 ಕ್ಕೆ ಖರೀದಿಸಿ ಈ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದರೆ 100 Km ಮೈಲೇಜ್.
ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ವರೆಗೆ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಬೈಕ್.
Torq Kratos Electric Bike: ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಹೊಸ ಹೊಸ ವಿನ್ಯಾಸದ ಸಾಕಷ್ಟು ಬೈಕ್ ಗಳು ಬಿಡುಗಡೆಯಾಗುತ್ತಿದೆ. ವಿವಿಧ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ರೂಪಾಂತರವನ್ನು ಪರಿಚಯಿಸುತ್ತಿವೆ. ಇತ್ತೀಚಿಗೆ ಟಾರ್ಕ್ ಮೋಟಾರ್ ಅರ್ಬೆನ್ ಎಂಬ ಕ್ರಾಟೋಸ್ ಆರ್ ಎಲೆಕ್ಟ್ರಿಕ್ ಬೈಕ್ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ.
ಕಂಪನಿಯ ವಿವಿಧ ರೂಪಾಂತರಕ್ಕೆ ಹೋಲಿಸಿದರೆ ಈ ಹೊಸ ಕ್ರಾಟೋಸ್ ಸ್ವಲ್ಪ ಮಟ್ಟಿಗೆ ಅಗ್ಗವಾಗಿದೆ. ಈ ಹೊಸ ಬೈಕ್ ನ ನೋಟವು ಆಕರ್ಷಣೀಯವಾಗಿದ್ದು ಯುವಕರನ್ನು ಹೆಚ್ಚಾಗಿ ಸೆಳೆಯಲಿದೆ. ಕೆಂಪು, ನೀಲಿ ಹಾಗೂ ಕಪ್ಪು ಬಣ್ಣದ ಆಯ್ಕೆಯಲ್ಲಿ ಈ ಹೊಸ ಕ್ರಾಟೋಸ್ ಬೈಕ್ ಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಈ ಕ್ರಾಟೋಸ್ ಬೈಕ್ ನಲ್ಲಿ ಅಳವಡಿಸಲಾದ ಸುಧಾರಿತ ಫೀಚರ್ ಗಳ ಬಗ್ಗೆ ವಿವರವನ್ನು ತಿಳಿಯೋಣ.
ಹೊಚ್ಚ ಹೊಸ ಟಾರ್ಕ್ ಕ್ರಾಟೋಸ್
ಹೊಚ್ಚ ಹೊಸ ಟಾರ್ಕ್ ಕ್ರಾಟೋಸ್ ಬೈಕ್ ನಲ್ಲಿ ಎಕ್ಸೆಲ್ ಫ್ಲಕ್ಸ್ ಮೋಟಾರ್ ಅನ್ನು ನೀಡಲಾಗಿದ್ದು, ಈ ಮೋಟಾರ್ 12 bhp ಪವರ್ ಮತ್ತು 38 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೋಟರ್ 4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ ಜೋಡಿಸಲ್ಪಟ್ಟಿದ್ದು, ಪೂರ್ಣ ಚಾರ್ಜ್ ಮಾಡಿದ ನಂತರ ಬರೋಬ್ಬರಿ 100 ಕಿಲೋಮೀಟರ್ ಗಳಿಗಿಂತ ಹೆಚ್ಚಿನ ರೇಂಜ್ ಅನ್ನು ಪಡೆಯಬಹುದು. ಈ ಬೈಕಿನ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದ್ದು ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ.
ಟಾರ್ಕ್ ಕ್ರಾಟೋಸ್ ಬೆಲೆ
ಕಂಪನಿಯು ನೂತನ ಟಾರ್ಕ್ ಕ್ರಾಟೋಸ್ ಗೆ 1,67,000 ರೂ. ಅನ್ನು ನಿಗಧಿಪಡಿಸಿದೆ. ಇನ್ನು ಕಂಪನಿಯು ಈ ಬೈಕ್ ಖರೀದಿದಾರರಿಗೆ ವಿಶೇಷ ಕೊಡುಗೆ ನೀಡಿದೆ. 30 ದಿನದೊಳಗೆ ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ ಫೀಚರ್ ಸ್ಟಾಕ್ ಅನ್ನು ಉಚಿತವಾಗಿ ನೀಡಲಿದೆ. ಇಕೋ, ಸಿಟಿ ಮತ್ತು ಸ್ಪೋರ್ಟ್ಸ್‌ನಂತಹ ಡ್ರೈವಿಂಗ್ ಮೋಡ್‌ಗಳನ್ನು ಅದರ ವೈಶಿಷ್ಟ್ಯದ ಸ್ಟ್ಯಾಕ್‌ನಲ್ಲಿ ಸೇರಿಸಲಾಗಿದೆ.
ಕೇವಲ 999 ಕ್ಕೆ ಖರೀದಿಸಿ ಈ ಎಲೆಕ್ಟ್ರಿಕ್ ಸ್ಕೂಟರ್
ರಿವರ್ಸ್ ಮೋಡ್, ಫಾಸ್ಟ್ ಚಾರ್ಜಿಂಗ್, ಲ್ಯಾಪ್ ನ್ಯಾವಿಗೇಷನ್, ಬ್ಲೂಟೂತ್ ಕನೆಕ್ಟಿವಿಟಿ, ಆಂಟಿ ಥೆಫ್ಟ್ ಅಲಾರ್ಮ್, ಜಿಯೋ ಫೆನ್ಸಿಂಗ್, ಚಾರ್ಜಿಂಗ್ ಪಾಯಿಂಟ್ ಲೊಕೇಶನ್, ಬ್ಯಾಟರಿ ಲೊಕೇಟರ್ ಅನಾಲಿಟಿಕ್ಸ್, OTA ಅಪ್‌ಡೇಟ್, ಗೈಡ್ ಮಿ ಹೋಮ್‌ನಂತಹ ವೈಶಿಷ್ಟ್ಯಗಳೊಂದಿಗೆ ಈ ಹೊಸ ಬೈಕ್ ಆಕರ್ಷಣೀಯವಾಗಿದೆ.
ಇನ್ನು Kratos R ಮತ್ತು Kratos R Urben ಬೆಲೆಯಲ್ಲಿ 20 ಸಾವಿರ ವ್ಯತ್ಯಾಸವಿದೆ. ಆಗಸ್ಟ್ 15 ರಿಂದ ಈ ಬೈಕ್ ಬುಕಿಂಗ್ ಗೆ ಲಭ್ಯವಿದೆ. ಕೇವಲ 999 ರೂ. ಟೋಕನ್ ಮೊತ್ತವನ್ನು ಪಾವತಿಸುವ ಮೂಲಕ ಈ ಬೈಕ್ ಅನ್ನು ಬುಕ್ ಮಾಡಿಕೊಳ್ಳಬಹುದು.