UPI Payments: ಯುಪಿಐ ಬಳಕೆದಾರರಿಗೆ ಆರ್ ಬಿ ಐ ನಿಂದ ಬಿಗ್ ಅಪ್ಡೇಟ್, ಒಂದು ವರ್ಷದಲ್ಲಿ ಮತ್ತಷ್ಟು ಹೆಚ್ಚಾದ ವ್ಯಾವಹಾರ.
Reserve Bank Of India Updates Of UPI: ಭಾರತೀಯ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಯುಪಿಐ ಪೇಮೆಂಟ್ ವ್ಯವಹಾರದ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಯುಪಿಐ ಮೂಲಕ ನಡೆಸಿರುವ ವಹಿವಾಟಿನಲ್ಲಿ ಶೇ.50 ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 2022 ರಲ್ಲಿ ಈ ಸಂಖ್ಯೆ 24 ಕೋಟಿ ಆಗಿತ್ತು. ಇದೀಗ ಈ ಸಂಖ್ಯೆ 36 ಕೋಟಿಯನ್ನು ದಾಟಿದೆ ಎಂದು ಆರ್ ಬಿ ಐ ಹೇಳಿದೆ. ಯುಪಿಐ ಹಣ ವರ್ಗಾವಣೆ ಮಾಡುವ ಮಾಹಿತಿ ಬಗ್ಗೆ ಶಕ್ತಿಕಾಂತ್ ದಾಸ್ ಹೊಸ ಮಾಹಿತಿಯನ್ನು ಹೊರ ಹಾಕಿದ್ದಾರೆ.
ಯುಪಿಐ ಬಗ್ಗೆ ಮಾಹಿತಿ ನೀಡಿದ ಗವರ್ನರ್ ಶಕ್ತಿಕಾಂತ್
ಫೆಬ್ರವರಿ 22 ರಲ್ಲಿ ದಾಖಲಾದ ಹೊಸ ಮಾಹಿತಿ ಪ್ರಕಾರ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಯುಪಿಐ ಮತ್ತು ಸಿಂಗಾಪುರದ ಪೆನೌ ನಡುವಿನ ಒಪ್ಪಂದದ ನಂತರ ಇತರ ಹಲವು ದೇಶಗಳು ಪಾವತಿಗಾಗಿ ಇಂತಹ ಒಪ್ಪಂದವನ್ನು ಮಾಡಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿವೆ ಎಂದು ಆರ್ ಬಿ ಐ ಗವರ್ನರ್ ಹೇಳಿದ್ದಾರೆ.
ಯುಪಿಐ ನಿಂದ ಹಣ ವರ್ಗಾವಣೆ ಮಾಡಲು ಒಪ್ಪಂದ
ಯುಪಿಐ ಪೆನೌ ಒಪ್ಪಂದಕ್ಕೆ ಸಹಿ ಹಾಕಿದ 10 ದಿನಗಳ ನಂತರ ಕನಿಷ್ಠ ಅರ್ಧ ಡಜನ್ ದೇಶಗಳು ಈ ಒಪ್ಪಂದವನ್ನು ಮಾಡಿಕೊಳ್ಳಲು ಮುಂದಾಗಿವೆ ಯುಪಿಐ ಪೆನೌ ಒಪ್ಪಂದಕ್ಕೆ ಸಹಿ ಹಾಕಿ 10 ದಿನಗಳಾಗಿವೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ಅವಧಿಯಲ್ಲಿ ಸಿಂಗಾಪುರದಿಂದ ಹಣ ಕಳುಹಿಸಲು 120 ಹಾಗು ಸಿಂಗಾಪುರಕ್ಕೆ ಹಣ ಕಳುಹಿಸಲು 22 ವಹಿವಾಟು ನಡೆದಿದೆ.