Goat Business: ಈ ಒಂದು ಮೇಕೆಯ ಬೆಲೆ 1 ಲಕ್ಷಕ್ಕೂ ಅಧಿಕ, ಮನೆಯಲ್ಲಿ ಈ ಮೇಕೆಯನ್ನ ಸಾಕಿದರೆ ಉತ್ತಮ ಲಾಭ.
ಹೆಚ್ಚಿನ ಲಾಭ ನೀಡುವ ತೋತಾಪರಿ ಮತ್ತು ಸಿರೋಹಿ ತಳಿಯ ಮೇಕೆ ಬಗ್ಗೆ ಮಾಹಿತಿ
Totapari And Sirohi Goat Farming: ಹೆಚ್ಚಿನ ಜನರು ಪ್ರಾಣಿ ಸಾಕಾಣಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಕೆಲ ಜನರು ಪ್ರಾಣಿ ಪ್ರಿಯರಾಗಿದ್ದು ಪ್ರಾಣಿಗಳ ಆರೈಕೆ ಮಾಡಲು ಇಷ್ಟಪಡುತ್ತಾರೆ. ಕೆಲವರು ಕೋಳಿ, ಮೇಕೆ, ಕುರಿ ಸೇರಿದಂತೆ ಇನ್ನಿತರ ಮಾಂಸಾಹಾರಿ ಪ್ರಾಣಿಗಳನ್ನು ಸಾಕುತ್ತಾರೆ. ಕೋಳಿ, ಕುರಿ ಸಾಕಾಣಿಕೆ ಹೆಚ್ಚಿನ ಲಾಭ ನೀಡುವ ಕೆಲಸವಾಗಿದೆ. ಸಣ್ಣ ಪ್ರಾಣಿಗಳ ಸಾಕಾಣಿಕೆ ಖರ್ಚನ್ನು ಕಡಿಮೆ ಮಾಡುತ್ತದೆ.
ಹೀಗಾಗಿ ಜನರು ಸಣ್ಣ ಪ್ರಾಣಿಗಳನ್ನು ಸಾಕಲು ಇಷ್ಟಪಡುತ್ತಾರೆ. ಪ್ರಸ್ತುತ ದೇಶದಾದ್ಯಂತ ಮೇಕೆಗಳ ಮೇಲೆ ಹೆಚ್ಚಿನ ಬೇಡಿಕೆ ಇದೆ. ಮೇಕೆಗಳ ಮಾಂಸದ ಬೆಲೆ ದುಬಾರಿಯಾಗಿದೆ. ಇನ್ನು ಮೇಕೆಗಳನ್ನು ಸಾಕುವ ಮುನ್ನ ಮೇಕೆಗಳು ಯಾವ ತಳಿಗೆ ಸೇರಿರುತ್ತವೆ ಎನ್ನುವುದನ್ನು ತಿಳಿಯುವುದು ಉತ್ತಮ. ಏಕೆಂದರೆ ಕೆಲವು ತಳಿಯ ಮೇಕೆಗಳು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ. Breeds ಆಧಾರದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು.
ತೋತಾಪರಿ ಮತ್ತು ಸಿರೋಹಿ ತಳಿಯ ಮೇಕೆ
ಭಾರತದಲ್ಲಿ ಬಹಳಷ್ಟು ಜನರು ಕೃಷಿ ಮತ್ತು ಪಶುಸಂಗೋಪನೆಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಕೋಳಿ ಸಾಕಣೆ, ಮೇಕೆ ಸಾಕಣೆಯನ್ನೂ ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದಾರೆ. ಕೃಷಿಯ ನಂತರ ಜನರು ಪಶುಸಂಗೋಪನೆಯತ್ತ ಸಾಗುತ್ತಿದ್ದಾರೆ. ಅನೇಕ ತಳಿಯ ಮೇಕೆಗಳನ್ನು ಬೆಳೆಸಲಾಗುತ್ತದೆ. ಆದರೆ ನಾವೀಗ ಹೆಚ್ಚಿನ ಲಾಭ ನೀಡುವ ತೋತಾಪರಿ ಮತ್ತು ಸಿರೋಹಿ ತಳಿಯ ಮೇಕೆ ಬಗ್ಗೆ ಮಾಹಿತಿ ತಿಳಿಯೋಣ.
ತೋತಾಪರಿ ಮತ್ತು ಸಿರೋಹಿ ತಳಿಯ ಮೇಕೆ ಸಾಕಾಣಿಕೆ
ತೋತಾಪರಿ ಮತ್ತು ಸಿರೋಹಿ ತಳಿಯ ಸಾಕಣೆಯ ಬಗ್ಗೆ ಹೇಳುವುದಾದರೆ, ಈ ಮೇಕೆಗಳನ್ನು ಅಂಗಳದಲ್ಲಿ ಇಟ್ಟು ಕೂಡ ಸಾಕಬಹುದಾಗಿದೆ. ಆದರೆ ಆ ಸ್ಥಳದಲ್ಲಿ ತೇವಾಂಶ ಇರಬಾರದು. ಏಕೆಂದರೆ ಇದು ನ್ಯುಮೋನಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ಇವುಗಳಿಗೆ ಖನಿಜ ಮಿಶ್ರಣ ಮತ್ತು ಧಾನ್ಯಗಳ ಜೊತೆಗೆ ಹಸಿರು ಮೇವನ್ನು ನೀಡಬೇಕು. ಹಾಗೆ ಅವುಗಳಿ ಇರುವ ಸ್ಥಳವನ್ನು ದಿನಕ್ಕೆ ನಾಲ್ಕೈದು ಬಾರಿ ಸ್ವಚ್ಛಗೊಳಿಸಬೇಕಾಗುತ್ತದೆ.
ತೋತಾಪುರಿ ಮತ್ತು ಸಿರೋಹಿ ಮೇಕೆ ಬೆಲೆ
ತೋತಾಪುರಿ ಮತ್ತು ಸಿರೋಹಿ ತಳಿಯ ಮೇಕೆ ಲಾಭದ ಬಗ್ಗೆ ಮಾತಾಡುದಾದರೆ, ತೋತಾಪುರಿ ತಳಿಯ 3 ತಿಂಗಳ ಮೇಕೆ ಬೆಲೆ ಸುಮಾರು 35 ಸಾವಿರ ರೂಪಾಯಿ ಆಗಿದೆ ಮತ್ತು ಒಂದೂವರೆ ವರ್ಷಗಳ ನಂತರ ಅದರ ಬೆಲೆ 1 ಲಕ್ಷಕ್ಕೂ ಅಧಿಕವಾಗಿರುತ್ತದೆ. ಹಾಗೆ ಸಿರೋಹಿ ತಳಿಯ 5 ತಿಂಗಳ ಮೇಕೆ ಬೆಲೆ ಸುಮಾರು 40 ಸಾವಿರ ರೂಪಾಯಿ ಆಗಿದೆ ಸಿರೋಹಿ ಮೇಕೆಗಳು 1 ಕ್ವಿಂಟಲ್ ಗಿಂತ ಹೆಚ್ಚಿನ ತೂಕ ಇದ್ದರೆ ಅವಗಳ ಬೆಲೆ 1 ಲಕ್ಷಕ್ಕೂ ಅಧಿಕವಾಗಿರುತ್ತದೆ.