Fortuner: ಬಜೆಟ್ ಬೆಲೆಗೆ ಬಂತು ಐಷಾರಾಮಿ ಫಾರ್ಚುನರ್, ಮಾಸಿಕವಾಗಿ 17000 ಕಟ್ಟಿ ಮನೆಗೆ ತನ್ನಿ ಫಾರ್ಚುನರ್.
ಟೊಯೋಟಾ ಇದೀಗ ನೂತನ ಮಾದರಿಯ ಹೊಸ ಫಾರ್ಚುನರ್ ಅನ್ನು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
Toyota Fortuner Latest Model: ದೇಶಿಯ ಮಾರುಕಟ್ಟೆಯಲ್ಲಿ ಇದೀಗ ಟೊಯೋಟಾ ಕಾರ್ (Toyota Car) ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಸಾಕಷ್ಟು ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇನ್ನು ಕಾರ್ ಖರೀದಿಸಬೇಕು ಎಂದು ಎಲ್ಲರು ಬಯಸುತ್ತಾರೆ.
ಆದರೆ ಇತ್ತೀಚಿನ ಕಂಪನಿಯ ಕಾರ್ ಗಳ ಬೆಲೆ ಅತಿ ದುಬಾರಿ ಎನಿಸುತ್ತದೆ. ಇದೀಗ ಟೊಯೋಟಾ ಕಂಪನಿ ಫಾರ್ಚುನರ್ ಎಸ್ ಯುವಿ ಆಧಾರಿತ ಹೊಸ ಕಾರ್ ಬಿಡುಗಡೆ ಮಾಡಿದೆ. ಟೊಯೋಟಾ ಕಾರು ತನ್ನದೇ ಆದ ವಿಶೇಷತೆ ಹೊಂದಿದ್ದು ಇತ್ತೀಚಿಗೆ ಉತ್ತಮ ಮಟ್ಟದ ಸೇಲ್ ಕಾಣುತ್ತಿದೆ. ಟೊಯೋಟಾ ಇದೀಗ ನೂತನ ಮಾದರಿಯ ಹೊಸ ಫಾರ್ಚುನರ್ ಅನ್ನು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.
ಟೊಯೋಟಾ ಫಾರ್ಚುನರ್ ಕಾರ್ (Toyota Fortuner)
2024 ರ ಟೊಯೋಟಾ ಫಾರ್ಚುನರ್ ಮಾರುಕಟ್ಟೆಯಲ್ಲಿ ಬಾರಿ ವೈರಲ್ ಆಗುತ್ತಿದೆ. ಟೊಯೋಟಾ ಕಂಪನಿಯ ಹಳೆಯ ಮಾದರಿಗಿಂತ ಈಗಿನ ಫಾರ್ಚುನರ್ ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆ ಕಂಡಿದೆ. ಇದರ ಎಲ್ ಇ ಡಿ ಹೆಡ್ ಲ್ಯಾಂಪ್ ಕ್ಲಸ್ಟರ್ ಮತ್ತು ಹೆಚ್ಚು ವೃತ್ತಾಕಾರದ ಟೈಲ್ ಲ್ಯಾಂಪ್ ಯುನಿಟ್ ಹೆಚ್ಚು ಗ್ರಾಹಕರನ್ನು ಆಕರ್ಷಿಸಲಾಯಿದೆ. ಇನ್ನು ಉಳಿದಂತೆ ಸೈಡ್ ಪ್ರೊಫೈಲ್ ನ ಇತರ ಅಂಶಗಳು ಫಾರ್ಚುನರ್ ಮಾದರಿಯಂತೆ ಇದೆ.
ಟೊಯೋಟಾ ಫಾರ್ಚುನರ್ ಕಾರಿನ ಬೆಲೆ
ಪ್ರಸ್ತುತ ಇರುವ ಟೊಯೋಟಾ ಫಾರ್ಚುನರ್ ಎರಡು ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.7 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 2.8 ಲೀಟರ್ ಟರ್ಬೊ -ಡೀಸೆಲ್ ಎಂಜಿನ್ ನ ಫಾರ್ಚುನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಸಿಕ್ಸ್ ಗೇರ್ ವಾಹನ ಅಥವಾ ಆಟೋಮ್ಯಾಟಿಕ್ ಗೇರ್ ವಾಹನವು ಇದೆ. ಡೀಸೆಲ್ ಇಂಧನದ ವಾಹನದಲ್ಲಿ ಫೂರ್ ವೀಲರ್ ಸೌಲಭ್ಯದ ಮೂಲಕ ಎಲ್ಲ ನಾಲ್ಕು ಚಕ್ರಗಳಿಗೆ ಶಕ್ತಿಯನ್ನು ನೀಡಲಾಗಿದೆ.
ಸದ್ಯ ಫಾರ್ಚುನರ್ ಕಾರಿನ ಎಕ್ಸ್ ಶೋ ರೂಮ್ ಬೆಲೆ 32.99 ಲಕ್ಷದಿಂದ 50.74 ಲಕ್ಷ ಕಂಪನಿಯು ನಿಗದಿಪಡಿಸಿದೆ. ಇನ್ನು ಈ ಕಾರ್ ಖರೀದಿ ನಿಮಗೆ ಕಷ್ಟವೆನಿಸಿದರೆ ಕಂಪನಿಯು ವಿವಿಧ ಹಣಕಾಸಿನ ಯೋಜನೆಯನ್ನು ನೀಡುತ್ತಿದೆ. ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಮಾಸಿಕ ಕೇವಲ 17,000 ಪಾವತಿಸುವ ಮೂಲಕ ಈ ಕಾರ್ ಅನ್ನು ಖರೀದಿಸಬಹುದಾಗಿದೆ.
ಟೊಯೋಟಾ ಫಾರ್ಚುನರ್ ಕಾರ್ ಮೈಲೇಜ್
ಇನ್ನು ಈ ಹೊಸದಾಗಿ ಬಿಡುಗಡೆಯಾಗಲಿರುವ ಫಾರ್ಚುನರ್ ಕಾರು ಹೈಬ್ರಿಡ್ ವ್ಯವಸ್ಥೆಯನ್ನು ಹೊಂದಿರುವ ಹೊಸ ಎಂಜಿನ್ ಅನ್ನು ಹೊಂದಿರಲಿದೆ. ಇದು ಇನ್ನೋವಾ ಹೈಕ್ರಾಸ್ ಮತ್ತು ಅರ್ಬನ್ ಕ್ರೂಸರ್ ಹೈರಾಡರ್ ಗೆ ಹೋಲುವಂತಿದೆ. ಇನ್ನು ಟೊಯೋಟಾ ಫಾರ್ಚುನರ್ ಡೀಸೆಲ್ ಎಂಜಿನ್ ಪ್ರತಿ ಲೀಟರ್ ಗೆ 8 ಕಿಲೋಮೀಟರ್ ಹಾಗೂ ಪೆಟ್ರೋಲ್ ಎಂಜಿನ್ ಮಾದರಿ ಪ್ರತಿ ಲೀಟರ್ ಗೆ 10 ಕಿಲೋಮೀಟರ್ ಮೈಲೇಜ್ ನೀಡಲಿದೆ.