Toyota Hiace: ಫ್ಯಾಮಿಲಿ ಪ್ರಿಯರಿಗಾಗಿ ಬಂತು ಟೊಯೋಟಾ HIACE, ಕುಟುಂಬ ಸಮೇತ ಪ್ರಯಾಣಿಸಿ.

ದೊಡ್ಡ ಕುಟುಂಬ ಹೊಂದಿರುವ ಜನರಿಗೆ ಬಂತು ಟಾಟಾ ಕಂಪನಿಯ ಇನ್ನೊಂದು ಕಾರ್.

Toyota Hiace Price: ಟೊಯೊಟಾ (Toyota) ಕಂಪನಿಯ ಕಾರ್ ಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಂಪನಿಯು ಹೊಸ ಹೊಸ ಮಾದರಿಯ ವಿಭಿನ್ನ ಶೈಲಿಯ ಕಾರ್ ಗಳನ್ನು ಪರಿಚಯಿಸುತ್ತಿದೆ.

ಇದೀಗ ದೇಶದ ಜನಪ್ರಿಯ ಕಾರ್ ತಯಾರಕ ಕಂಪೆನಿಯಾದ ಟೊಯೊಟಾ ಹೊಚ್ಚ ಹೊಸ ಕಾರ್ ಅನ್ನು ಪರಿಚಯಿಸಲಿದೆ. ಟೊಯೊಟಾ ಭಾರತದಲ್ಲಿ ಐದನೇ ಜನ್ ಹೈಸ್ ಅನ್ನು ಪರಿಚಯಿಸಲಿದ್ದು ಈ ಕಾರ್ ನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯೋಣ.

Toyota hiace came for family lovers
Image Credit: Bigboytoyz

ಟೊಯೊಟಾ ಹೈಸ್
ಟೊಯೊಟಾ ಕಂಪನಿಯು ಇದೀಗ ದೇಶಿಯ ಮಾರುಕಟ್ಟೆಗೆ ಟೊಯೊಟಾ ಹೈಸ್ ಅನ್ನು ಪರಿಚಯಿಸಲಿದೆ. ಮಾರುಕಟ್ಟೆಗೆ ಲಗ್ಗೆ ಇಡಲು ಈ ಕಾರ್ ಸಿದ್ಧತೆ ನಡೆಸುತ್ತಿದೆ. ಭಾರತದಲ್ಲಿ ಟೊಯೊಟಾ ಹೈಸ್ ನ ಆರಂಭಿಕ ಬೆಲೆ 55 ಲಕ್ಷ ರೂ. ಆಗಿದೆ. ಇನ್ನು ಟೊಯೊಟಾ ಕಂಪನಿಯ ಟೊಯೊಟಾ ಜನ್ ಹೈಸ್ ಅನ್ನು 2019 ರಲ್ಲಿ ಕೆಲವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಟೊಯೊಟಾ ಜನ್ ಹೈಸ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಸೀಮಿತ ಆಮದು ಮಾಡಿಕೊಳ್ಳಲಾಗಿದೆ. ಸುಮಾರು 50 ಯುನಿಟ್ ಗಳು ಆಮದು ಮಾಡಿಕೊಳ್ಳಲಾಗಿದೆ.ಪ್ರಸ್ತುತ ಟೊಯೊಟಾ ಜನ್ ಹೈಸ್ ಬಿಳಿ ಮತ್ತು ಬೆಳ್ಳಿಯ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಭಾರತದಲ್ಲಿ ಹೈಸ್ 151HP  2 .8 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ನ ಆಯ್ಕೆಯನ್ನು ಹೊಂದಿದೆ. ಇದು 14 ಸೀಟ್ ಕಾನ್ಫಿಗರೇಶನ್‌ನೊಂದಿಗೆ ಬರುತ್ತದೆ.

Toyota hiace came for family lovers
Image Credit: Cartoq

ಟೊಯೊಟಾ ಹೈಸ್ ನ ಎಂಜಿನ್ ಸಾಮರ್ಥ್ಯ
ಟೊಯೊಟಾ ಹೈಸ್ MPV ಶಕ್ತಿಯು 2 .8 ಲೀಟರ್, ನಾಲ್ಕು ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರ್ 151HP ಮತ್ತು 300nM ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

ಫಾರ್ಚುನರ್ ಮತ್ತು ಇನ್ನೋವಾ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇನ್ನು ಡ್ಯುಯಲ್ ಫ್ರಾಂಟ್ಏರ್ ಬ್ಯಾಗ್, ಇಬಿಡಿಯೊಂದಿಗೆ ಎಬಿಎಸ್, ಪವರ್ ಸ್ಟಿರಿಂಗ್, ಪವರ್ ಕಿಟಕಿಗಳು, ಹಿಂದಿನ ಡಿಫಾಗರ್, ಎಸಿ ವೆಂಟ್ ಸೇರಿದಂತೆ ಇನ್ನಿತರ ಹಲವಾರು ವೈಶಿಷ್ಟ್ಯಗಳನ್ನು ಈ ಕಾರ್ ಹೊಂದಿದೆ.

Join Nadunudi News WhatsApp Group