Toyota: 28Km ಮೈಲೇಜ್ ಕೊಡುವ ಮಿನಿ ಫಾರ್ಚುನಾರ್, ಕಡಿಮೆ ಬೆಲೆಗೆ ಘೋಷಣೆ.
ಟೊಯೋಟಾ ತನ್ನ ಮಿನಿ ಫಾರ್ಚುನರ್ ಅನ್ನು ಕಡಿಮೆ ಬೆಲೆ ಬಿಡುಗಡೆ ಮಾಡಿದೆ.
Toyota Mini Fortuner: ಮಾರುಕಟ್ಟೆಯ್ಲಲಿ ಪೆಟ್ರೋಲ್, ಡೀಸೆಲ್ ಬೆಲೆಯ ಏರಿಕೆಯ ಕಾರಣ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇನ್ನು ಎಲೆಕ್ಟ್ರಿಕ್(Electric) ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯ ಎಲೆಕ್ಟ್ರಿಕ್ ವಾಹನಗಳು ಬಿಡುಗಡೆಗೊಳ್ಳುತ್ತಿದೆ.
ಇನ್ನು ಪೆಟೋಲ್, ಡೀಸೆಲ್ ಚಾಲಿತ ವಾಹನಗಳ ಬದಲಾಗಿ ಎಲೆಕ್ಟ್ರಿಕ್ ಕಾರ್ ಗಳ ಜೊತೆಗೆ ಸಿಎನ್ ಮಾದರಿಯ ಕಾರ್ ಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗಾಗಲೇ ವಿವಿಧ ಮಾದರಿಯ ಸಿಎನ್ ಜಿ ಕಾರ್ ಗಳನ್ನೂ ಕೆಲವು ಪ್ರತಿಷ್ಠಿತ ಕಂಪನಿಗಳು ಪರಿಚಯಿಸಿದೆ.
ಟೊಯೋಟಾ ಹೊಸ ಸಿಎನ್ ಜಿ ಕಾರ್ ಬಿಡುಗಡೆ (Toyota Hyryder CNG 2023)
ಇದೀಗ ಭಾರತದ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ ಟೊಯೋಟಾ (Toyota) ಹೊಸ ಸಿಎನ್ ಜಿ ಮಾದರಿಯ ಕಾರ್ ಅನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಸಿಎನ್ ಜಿ ಚಾಲಿತ ವಾಹನಗಳ ಮೇಲಿನ ಬೇಡಿಕೆ ಕೂಡ ಹೆಚ್ಚುತ್ತಿದೆ. ಇದೀಗ ಟೊಯೊಟಾದ ಜನಪ್ರಿಯ ಎಸ್‌ಯುವಿ ಹೈರೈಡರ್ ನ ಸಿಎನ್ ಜಿ ಆವೃತ್ತಿ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಟೊಯೋಟಾ ಹೈರಿಡರ್ ಸಿಎನ್ ಜಿ ಬೆಲೆ
ಹೈರೈಡರ್ ಅನ್ನು ಕಂಪನಿಯು ಎರಡು ರೂಪಾಂತರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ. ಹೈರೈಡರ್ ಎಸ್ ಮತ್ತು ಹೈರೈಡರ್ ಜಿ ಮಾದರಿಯ ಎಸ್ ಯೂವಿಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಟೊಯೋಟಾ ಹೈರಿಡರ್ ಎಸ್ ಸಿಎನ್ ಜಿ ಬೆಲೆಯೂ 13.23 ಲಕ್ಷ ಹಾಗು ಟೊಯೋಟಾ ಹೈರಿಡರ್ ಜಿ ಸಿಎನ್ ಜಿ ಬೆಲೆಯನ್ನು 15.29 ಲಕ್ಷ ನಿಗದಿಪಡಿಸಿದೆ. ಟೊಯೋಟಾ ಹೈರಿಡರ್ ಸಿಎನ್ ಜಿ ಮಾದರಿಯ ನೋಟದಲ್ಲಿ ಯಾವುದೇ ಬದಲಾವಣೆ ಇಲ್ಲ.
ಟೊಯೋಟಾ ಹೈರಿಡರ್ ಸಿಎನ್ ಜಿ ಮೈಲೇಜ್
ಈ ಕಾರ್ ನ ಹಿಂಭಾಗದಲ್ಲಿ ಸಿಎನ್ ಜಿ ಕಿಟ್ ಅನ್ನು ಅಳವಡಿಸಲಾಗುತ್ತದೆ. ಇನ್ನು ಇದು 1 .5 ಲೀಟರ್ ಕೆ ಸಿರೀಸ್ ಎಂಜಿನ್ ಅನ್ನು ಪಡೆಯಲಿದ್ದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಹೊಂದಿದೆ. ಇನ್ನು ಟೊಯೋಟಾ ಹೈರಿಡರ್ ಸಿಎನ್ ಜಿ ರೂಪಾಂತರವು ಬರೋಬ್ಬರಿ 28 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ಟೊಯೋಟಾ ಹೈರಿಡರ್ ಸಿಎನ್ ಜಿ ವಿಶೇಷತೆ
ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, 6 ಏರ್‌ಬ್ಯಾಗ್‌ಗಳು, ಒಂಬತ್ತು ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಟೊಯೊಟಾ ಐ-ಕನೆಕ್ಟ್, ಸ್ವಯಂ-ಫೋಲ್ಡಿಂಗ್ ಔಟ್ ಸೈಡ್ ರಿಯರ್ ವ್ಯೂ ಮಿರರ್ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಇನ್ನು ಈ ನೂತನ ಟೊಯೋಟಾ ಹೈರಿಡರ್ ಸಿಎನ್ ಜಿ ಆವೃತ್ತಿಯು ಕ್ರೆಟಾ ಹಗೂ ಎರ್ಟಿಗಾ ಕಾರ್ ಗಳ ಜೊತೆ ಸ್ಪರ್ದಿಸಲಿದೆ. ಈ ಕಾರ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ.